6 ಬಾಲ್.. 6 ಸಿಕ್ಸರ್ – ಯುವ ದಾಂಡಿಗ ವಂಶಿಕೃಷ್ಣ ಕಮಾಲ್

ಆರು ಬಾಲ್ಗಳಲ್ಲಿ ಆರು ಸಿಕ್ಸರ್.. ಹೊಡಿಯೋದು ಕಷ್ಟ. ಆದ್ರೆ ಯಾರಾದ್ರೂ ಈ ಅಚೀವ್ಮೆಂಟ್ ಮಾಡಿದ ಕೂಡಲೇ ಅಟೋಮೆಟಿಕಲಿ ಫೋಕಸ್ ಅವರ ಕಡೆಗೇ ಶಿಫ್ಟ್ ಆಗಿ ಬಿಡುತ್ತೆ. ಯಾಕಂದ್ರೆ ವರ್ಲ್ಡ್ ಕ್ರಿಕೆಟ್ನಲ್ಲಿ ಕೆಲವೇ ಕೆಲ ಬ್ಯಾಟ್ಸ್ಮನ್ಗಳಷ್ಟೇ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದಿರೋದು. ಅದು ಫಸ್ಟ್ ಕ್ಲಾಸ್ ಕ್ರಿಕೆಟೇ ಆಗಿರಬಹುದು, ಇಂಟರ್ನ್ಯಾಷನಲ್ ಮ್ಯಾಚ್ನಲ್ಲೇ ಇರಬಹುದು. ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದ್ರು ಅಂದ್ರೆ ಅದು ಗ್ರೇಟೆಸ್ಟ್ ಅಚೀವ್ಮೆಂಟೇ. ಈಗ ಭಾರತದ ಮತ್ತೊಬ್ಬ ಬ್ಯಾಟ್ಸ್ಮನ್ ಆರು ಬಾಲ್ಗಳಿಗೆ ಆರು ಸಿಕ್ಸರ್ ಚಚ್ಚಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಮಧ್ಯೆ ಸೆಂಚೂರಿ ರೇಸ್ – ಕ್ರಿಕೆಟ್ ದಿಗ್ಗಜರಲ್ಲಿ ಗೆಲ್ಲೋದು ಯಾರು?
ವಂಶಿ ಕೃಷ್ಣ.. ಆಂಧ್ರಪ್ರದೇಶ ಮೂಲದ ಈ ಯಂಗ್ಸ್ಟರ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಭಾರತದ ಅಂಡರ್-23 ಕ್ರಿಕೆಟರ್ಸ್ಗಳಿಗಾಗಿ ನಡೆಯೋ ಸಿ.ಕೆ.ನಾಯ್ಡು ಟೂರ್ನಿ ಮ್ಯಾಚ್ನಲ್ಲಿ ರೈಲ್ವೇಸ್ ವಿರುದ್ಧ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಹೊಡೆದಿದ್ದಾರೆ. ರೈಲ್ವೇಸ್ ಟೀಮ್ನ ಸ್ಪಿನ್ನರ್ ದಮನ್ದೀಪ್ ಸಿಂಗ್ ಬೌಲಿಂಗ್ನಲ್ಲಿ ವಂಶಿ ಕೃಷ್ಣ ಆರು ಬಾಲ್ಗಳಿಗೂ ಸಿಕ್ಸರ್ ಚಚ್ಚಿದ್ರು. ಕಡಪಾದಲ್ಲಿರೋ ವೈ.ಎಸ್.ರಾಜಾ ರೆಡ್ಡಿ ಸ್ಟೇಡಿಯಂನಲ್ಲಿ ಈ ಮ್ಯಾಚ್ ನಡೆದಿದ್ದು, ಮ್ಯಾಚ್ನ 10ನೇ ಓವರ್ನಲ್ಲಿ ವಂಶಿ ಕೃಷ್ಣ ಅಕ್ಷರಶ: ಕಮಾಲ್ ಮಾಡಿದ್ರು. 10ನೇ ಓವರ್ ವೇಳೆ ಬೌಲಿಂಗ್ ಚೇಂಜ್ ಮಾಡಿದ ರೈಲ್ವೇಸ್ ಕ್ಯಾಪ್ಟನ್ ಲೆಗ್ ಸ್ಪಿನ್ನರ್ ದಮನ್ದೀಪ್ ಸಿಂಗ್ ಕೈಗೆ ಬಾಲ್ ನೀಡ್ತಾರೆ. ಆದ್ರೆ ತಮ್ಮ ಫಸ್ಟ್ ಓವರ್ನಲ್ಲೇ ದಮನ್ದೀಪ್ ಗ್ರಹಚಾರ ಕೆಟ್ಟಿತ್ತು. ಫಸ್ಟ್ ಬಾಲ್ಗೆ ವಂಶಿ ಕೃಷ್ಣ ಸ್ಲಾಗ್ ಸ್ವೀಪ್ ಮಾಡಿ ಡೀಪ್ ಸ್ಕ್ವೇರ್ ಲೆಗ್ನತ್ತ ಸಿಕ್ಸರ್ ಹೊಡೆದ್ರು. ಸೆಕೆಂಡ್ ಬಾಲ್ಗೆ ಬೌಲರ್ನ ತಲೆ ಮೇಲಿನಿಂದಲೇ ಸ್ಟ್ರೈಟ್ ಸಿಕ್ಸರ್ ಬಾರಿಸಿದ್ರು. ನಂತರ ಮೂರನೇ ಬಾಲ್ನ್ನ ದಮನ್ದೀಪ್ ಸಿಂಗ್ ನೇರವಾಗಿ ವಿಕೆಟ್ನ್ನ ಟಾರ್ಗೆಟ್ ಮಾಡಿ ಎಸೆದ್ರು. ಆ ಬಾಲ್ಗೂ ಮಿಡ್ ವಿಕೆಟ್ನತ್ತ ವಂಶಿ ಸಿಕ್ಸ್ ಹೊಡೆದ್ರು. ಹ್ಯಾಟ್ರಿಕ್ ಸಿಕ್ಸರ್ ಹೊಡೆಸಿಕೊಂಡ ದಮನ್ದೀಪ್ ನಾಲ್ಕನೇ ಬಾಲ್ನ್ನ ಲೆಗ್ ಸ್ಟಂಪ್ನತ್ತ ಎಸೀತಾರೆ. ಅದಕ್ಕೂ ವಂಶಿ ಕೃಷ್ಣ ಆನ್ಸೈಡ್ನತ್ತ ಸಿಕ್ಸ್ ಹೊಡೀತಾರೆ. ನಾಲ್ಕು ಬಾಲ್ಗೆ ನಾಲ್ಕು ಸಿಕ್ಸ್ ಹೊಡೆಸಿಕೊಂಡಾಗ ಬೌಲರ್ ಪರಿಸ್ಥಿತಿ ಏನಾಗಿರಬಹುದು ಅನ್ನೋದನ್ನ ನೀವೇ ಊಹಿಸ್ಕೊಳ್ಳಬಹುದು. ಹೇಗೆ ಹಾಕಿದ್ರೂ ಬ್ಯಾಟ್ಸ್ಮನ್ ಹೊಡೆದೇ ಬಿಡ್ತಾನೆ ಅನ್ನೋದು ಬೌಲರ್ ತಲೆಗೂ ಬಂದಿರುತ್ತೆ. ಕಂಪ್ಲೀಟ್ ಕನ್ಫ್ಯೂಸ್ ಆಗಿ, ನರ್ವಸ್ ಆಗಿ NEXT ಬಾಲ್ ಎಸೆಯೋದು ಹೇಗೆ ಅನ್ನೋದೆ ಬೌಲರ್ಗೆ ಅರ್ಥವಾಗೋದಿಲ್ಲ. ಒಂದ್ಸಾರಿ 2007ರಲ್ಲಿ ಯುವರಾಜ್ ಸಿಂಗ್ ಸಿಕ್ಸ್ ಹೊಡೆದಾಗಿನ ಕ್ಷಣವನ್ನ ಬೇಕಿದ್ರೆ ನೆನೆಪಿಸ್ಕೊಳ್ಳಿ. ಆಗ್ಲೂ ಅಷ್ಟೇ ನಾಲ್ಕು ಸಿಕ್ಸರ್ ಹೊಡೆಸಿಕೊಂಡಾಗ ಸ್ಟುವರ್ಟ್ ಬ್ರಾಡ್ ಕಾನ್ಫಿಡೆನ್ಸ್ ಕಂಪ್ಲೀಟ್ ಡೌನ್ ಆಗಿತ್ತು. ಹೇಗೆ ಎಸೀಬೇಕು ಅಂತಾನೆ ಅವರಿಗೆ ಗೊತ್ತಾಗಿರಲಿಲ್ಲ. ಆಗ ಇಂಗ್ಲೆಂಡ್ ಕ್ಯಾಪ್ಟನ್ ಆಗಿದ್ದ ಕಾಲಿಂಗ್ವುಡ್ ಜೊತೆಗೆ ಡಿಸ್ಕಸ್ ಬೇರೆ ಮಾಡಿದ್ರು. ಇಲ್ಲಿ ವಂಶಿ ಕೃಷ್ಣ ನಾಲ್ಕು ಬಾಲ್ಗಳಲ್ಲಿ ನಾಲ್ಕು ಸಿಕ್ಸರ್ ಹೊಡೆದ ಬಳಿಕ ಸ್ಪಿನ್ನರ್ ದಮನ್ದೀಪ್ ಸಿಂಗ್ ಸ್ವಿಚ್ಯುವೇಶನ್ ಕೂಡ ಅದೇ ಆಗಿತ್ತು. ನಾಲ್ಕನೇ ಬಾಲ್ನ್ನ ಲೆಗ್ ಸ್ಟಂಪ್ಗೆ ಎಸೆದಿದ್ದ ದಮನ್ದೀಪ್ ದಿಕ್ಕೇ ತೋಚದೆ ಐದನೇ ಬಾಲ್ನ್ನ ಕೂಡ ಲೆಗ್ಸ್ಟಂಪ್ನತ್ತವೇ ಎಸೆದ್ರು. ಒನ್ಸ್ ಅಗೈನ್ ಸೇಮ್ ರಿಸಲ್ಟ್. ಐದು ಬಾಲ್ಗಳಲ್ಲಿ ಐದು ಸಿಕ್ಸರ್ ಆಯ್ತು. ಮತ್ತೊಮ್ಮೆ ಕ್ಯಾಪ್ಟನ್ ಜೊತೆ ಡಿಸ್ಕಸ್ ಮಾಡಿ ದಮನ್ದೀಪ್ ಆರನೇ ಬೌಲ್ನ್ನ ಬ್ಯಾಟ್ಸ್ಮನ್ ಬುಡಕ್ಕೆ ಬೀಳುವಂತೆ ಬೌಲ್ ಮಾಡಿಲ್ಲ. ಲೆಂತ್ ಬ್ಯಾಕ್ ತಗೊಂಡು ಮಿಡ್ಲ್ಗೆ ಪಿಚ್ ಮಾಡಿದ್ರು. ಅದಕ್ಕೆ ವಂಶಿ ಕಷ್ಣ ಬ್ಯಾಕ್ಫುಟ್ ಹೋಗಿ ಮಿಡ್ ವಿಕೆಟ್ನತ್ತ ಪುಲ್ ಮಾಡುತ್ತಲೇ ಆರನೇ ಸಿಕ್ಸರ್ ಬಂದಿತ್ತು. ಅಂತಿಮವಾದ ವಂಶಿ ಕೃಷ್ಣ ಕೇವಲ 64 ಬಾಲ್ಗಲ್ಲಿ 110 ರನ್ ಗಳಿಸಿದ್ರು. ಕೇವಲ 48 ಬಾಲ್ಗಳಲ್ಲೇ ಸೆಂಚೂರಿ ಕಂಪ್ಲೀಟ್ ಮಾಡಿ ಸಿಕೆ ನಾಯ್ಡು ಟೂರ್ನಿ ಇತಿಹಾಸದ ಫಾಸ್ಟೆಸ್ಟ್ ಸೆಂಚೂರಿ ಬಾರಿಸಿದ್ದಾರೆ. ತಮ್ಮ ಇನ್ನಿಂಗ್ಸ್ನಲ್ಲಿ ವಂಶಿ ಕೃಷ್ಣ 9 ಬೌಂಡರಿ 10 ಸಿಕ್ಸರ್ ಹೊಡೆದಿದ್ರು. ಇನ್ ದಿ ಎಂಡ್ ಆಂಧ್ರಪ್ರದೇಶ ಫಸ್ಟ್ ಇನ್ನಿಂಗ್ಸ್ನಲ್ಲಿ 378 ರನ್ ಗಳಿಸ್ತು.
ಇಂಟ್ರೆಸ್ಟಿಂಗ್ ಏನಂದ್ರೆ ಅತ್ತ ರೈಲ್ವೇಸ್ ತನ್ನ ಫಸ್ಟ್ ಇನ್ನಿಂಗ್ಸ್ನಲ್ಲಿ 9 ವಿಕೆಟ್ಗಳನ್ನ ಕಳೆದುಕೊಂಡು 865 ರನ್ಗಳ ಮ್ಯಾಸಿವ್ ಸ್ಕೋರ್ ಮಾಡಿದೆ. ಇಬ್ಬರು ಡಬಲ್ ಹಂಡ್ರೆಡ್ ಹೊಡೆದಿದ್ದು, ಒಬ್ಬ ಬ್ಯಾಟ್ಸ್ಮನ್ ಸೆಂಚೂರಿ ಹೊಡೆದಿದ್ರು. ಕೊನೆಗೆ ಈ ಮ್ಯಾಚ್ನಲ್ಲಿ ಯಾವುದೇ ರಿಸಲ್ಟ್ ಕೂಡ ಬಂದಿಲ್ಲ. ಬಟ್ ಪಂದ್ಯದ ಹೈಲೈಟ್ ಆಗಿರೋದು ವಂಶಿ ಕೃಷ್ಣ ಹೊಡೆದ ಸಿಕ್ಸ್ ಬಾಲ್ ಸಿಕ್ಸ್ ಸಿಕ್ಸರ್ಸ್.
ಅಂತೂ ವಂಶಿ ಕೃಷ್ಣ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದ ಭಾರತದ ನಾಲ್ಕನೇ ಬ್ಯಾಟ್ಸ್ಮನ್ ಆಗಿದ್ದಾರೆ. ಕಾಮೆಂಟ್ರೇಟರ್ ರವಿ ಶಾಸ್ತ್ರಿ ಫಸ್ಟ್ ಟೈಮ್ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದ ಇಂಡಿಯನ್ ಪ್ಲೇಯರ್. 1985ರಲ್ಲಿ ಬರೋಡ ವಿರುದ್ಧದ ರಣಜಿ ಮ್ಯಾಚ್ನಲ್ಲಿ ಲೆಫ್ಟ್ ಆರ್ಮ್ ಸ್ಪಿನ್ನರ್ಗೆ ರವಿಶಾಸ್ತ್ರಿ ಆರು ಬಾಲ್ಗಳಲ್ಲಿ ಆರು ಸಿಕ್ಸ್ ಹೊಡೆದಿದ್ರು. ಇದಾಗಿ 32 ವರ್ಷಗಳ ಬಳಿಕ 2007ರ ಟಿ20 ವರ್ಲ್ಡ್ಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಬೌಲಿಂಗ್ನಲ್ಲಿ ಸಿಕ್ಸ್ ಬಾಲ್ಸ್ ಸಿಕ್ಸ್ ಸಿಕ್ಸರ್ಸ್ ಹೊಡೀತಾರೆ. ಕೋ ಇನ್ಸಿಡೆಂಟ್ ಏನಂದ್ರೆ, ಅತ್ತ ಯುವರಾಜ್ ಸಿಂಗ್ ಮೇಲಿಂದ ಮೇಲೆ ಸಿಕ್ಸ್ ಹೊಡೀತಾ ಇದ್ರೆ, ಇತ್ತ ರವಿಶಾಸ್ತ್ರಿ ಕಾಮೆಂಟ್ರಿ ಮಾಡ್ತಾ ಇದ್ರು. ತಮ್ಮ ಬಳಿಕ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದ ಎರಡನೇ ಭಾರತೀಯ. ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಭಾರತದ ಫಸ್ಟ್ ಪ್ಲೇಯರ್ ಯುವರಾಜ್ ಆಗಿದ್ರು.
ಇನ್ನು 2022ರಲ್ಲಿ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಮ್ಯಾಚ್ನಲ್ಲಿ ಮಹಾರಾಷ್ಟ್ರ ಪರ ಆಡ್ತಿದ್ದ ರುತುರಾಜ್ ಗಾಯಕ್ವಾಡ್ ಉತ್ತರಪ್ರದೇಶ ವಿರುದ್ಧದ ಮ್ಯಾಚ್ನಲ್ಲಿ ಶಿವ ಸಿಂಗ್ ಬೌಲಿಂಗ್ನಲ್ಲಿ ಆರಲ್ಲ, ಒಂದೇ ಓವರ್ನಲ್ಲಿ ಏಳು ಸಿಕ್ಸರ್ ಹೊಡೀತಾರೆ. ಯಾಕಂದ್ರೆ ಆ ಓವರ್ ಮಧ್ಯೆ ಶಿವ ಸಿಂಗ್ ಒಂದು ನೋ ಬಾಲ್ ಎಸೆದಿದ್ರು. ಆ ನೋ ಬಾಲ್ಗೂ ರುತುರಾಜ್ ಗಾಯಕ್ವಾಡ್ ಸಿಕ್ಸ್ ಹೊಡೆದಿದ್ರು. ಆ ಒಂದೇ ಓವರ್ನಲ್ಲಿ ರುತುರಾಜ್ ಗಾಯಕ್ವಾಡ್ ಏಳು ಸಿಕ್ಸ್ ಹೊಡೆದು ಒಟ್ಟು 42 ರನ್ ಮಾಡಿದ್ರು. ಹಾಗೆಯೇ ಜಿಂಬಾಬ್ವೆಯ ಎಲ್ಟಾನ್ ಚಿಗುಂಬುರಾ ಒಂದೇ ಓವರ್ನಲ್ಲಿ 39 ರನ್ಗಳ ರೆಕಾರ್ಡ್ನ್ನ ಕೂಡ ರುತುರಾಜ್ ಗಾಯಕ್ವಾಡ್ ಬ್ರೇಕ್ ಮಾಡಿದ್ರು. ಬಟ್ ಎಲ್ಟಾನ್ ಚಿಗುಂಬುರಾ ಎಲ್ಲಾ ಆರು ಬಾಲ್ಗಳಿಗೂ ಸಿಕ್ಸ್ ಹೊಡೆದಿರಲಿಲ್ಲ. ಅವರೂ ಒಂದಷ್ಟು ನೋ ಬಾಲ್ಗಳನ್ನ ಫೇಸ್ ಮಾಡಿದ್ರು. ಬೌಂಡರಿ, ಸಿಕ್ಸರ್ ಮಿಕ್ಸ್ ಆಗಿತ್ತು.
ರುತುರಾಜ್ ಗಾಯಕ್ವಾಡ್ ಬಳಿಕ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದ ನಾಲ್ಕನೇ ಭಾರತೀಯ ಅಂದ್ರೆ ಅದು ವಂಶಿ ಕೃಷ್ಣ. ಹೀಗಾಗಿ ಅವರ ಈ ಅಚೀವ್ಮೆಂಟ್ ಇಷ್ಟೊಂದು ಹೈಲೈಟ್ ಆಗಿರೋದು. ಇನ್ನು ವರ್ಲ್ಡ್ ಕ್ರಿಕೆಟ್ನಲ್ಲಿ ಫಸ್ಟ್ ಟೈಮ್ ಒಂದೇ ಓವರ್ನಲ್ಲಿ ಆರು ಸಿಕ್ಸರ್ ಹೊಡೆದಿದ್ದು ವೆಸ್ಟ್ಇಂಡೀಸ್ ಕ್ರಿಕೆಟ್ ಲೆಜೆಂಡ್ ಸರ್.ಗ್ಯಾರಿ ಸೋಬರ್ಸ್. 1968ರಲ್ಲಿ ನಾಟಿಂಗ್ಹ್ಯಾಮ್ಶೈರ್ ಪರ ಆಡೋವಾಗ ಗ್ಯಾರಿ ಸೋಬರ್ಸ್ ಕ್ರಿಕೆಟ್ ಇತಿಹಾಸದಲ್ಲೇ ಫಾರ್ ದಿ ಫಸ್ಟ್ ಟೈಮ್ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೀತಾರೆ.
ಆದ್ರೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಫಸ್ಟ್ ಟೈಮ್ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದಿದ್ದು ಅಂದ್ರೆ ಅದು ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್. 2007ರಲ್ಲಿ ವಂಡೇ ವರ್ಲ್ಡ್ಕಪ್ ವೇಳೆ ನೆದರ್ಲ್ಯಾಂಡ್ ವಿರುದ್ಧದ ಮ್ಯಾಚ್ನಲ್ಲಿ ಹರ್ಷಲ್ ಗಿಬ್ಸ್ ಒಂದೇ ಓವರ್ನಲ್ಲಿ ಆರು ಸಿಕ್ಸ್ ಹೊಡೆದಿದ್ರು. ವಂಡೇ ವರ್ಲ್ಡ್ಕಪ್ ಬೆನ್ನಲ್ಲೇ ಅದೇ ವರ್ಷ ಯುವರಾಜ್ ಸಿಂಗ್ ಕೂಡ ಆರು ಸಿಕ್ಸ್ ಚಚ್ತಾರೆ. ಇಂಟರ್ನ್ಯಾಷನಲ್ ಕ್ರಿಕೆಟ್ ಅಂತಾ ಬಂದಾಗ ಈ ಅಚೀವ್ಮೆಂಟ್ ಮಾಡಿರೋದು ಹರ್ಷಲ್ ಗಿಬ್ಸ್ ಮತ್ತು ಯುವರಾಜ್ ಸಿಂಗ್ ಮಾತ್ರ. 2007ರ ಬಳಿಕ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಇದುವರೆಗೂ ಯಾರೊಬ್ಬರೂ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದಿಲ್ಲ.
ಇನ್ನು ಆಂಧ್ರಪ್ರದೇಶದ ವಂಶಿ ಕೃಷ್ಣ ಒಂದೇ ಓವರ್ನಲ್ಲಿ ಆರು ಸಿಕ್ಸ್ ಹೊಡೆದಿರೋದು ಬಿಸಿಸಿಐ ಕೂಡ ನೋಟ್ ಮಾಡಿಕೊಂಡಿದೆ. 6 sixes in an over alert ಅಂತಾ ಬಿಸಿಸಿಐ ಟ್ವೀಟ್ ಮಾಡಿದೆ. ಅಂತೂ ವಂಶಿ ಕೃಷ್ಣ ಮೇಲೆ ಬಿಸಿಸಿಐ ಇನ್ಮುಂದೆ ಒಂದು ಕಣ್ಣಟ್ಟಿರುತ್ತೆ. ಯಾಕಂದ್ರೆ ಆರು ಬಾಲ್ಗಳಲ್ಲಿ ಆರು ಸಿಕ್ಸರ್ ಹೊಡೆದಿದ್ದಾರೆ ಅಂದ್ರೆ ವಂಶಿ ಕೃಷ್ಣ ಸ್ಪೆಷಲ್ ಟ್ಯಾಲೆಂಟ್ ಆನ್ನೋದ್ರಲ್ಲಿ ಡೌಟೇ ಇಲ್ಲ. ಹಾಗಂತಾ ಆರು ಸಿಕ್ಸರ್ ಹೊಡೆಸಿಕೊಂಡ ಬೌಲರ್ ದಮನ್ದೀಪ್ ಸಿಂಗ್ರನ್ನ ಡಿ ಗ್ರೇಡ್ ಮಾಡುವಂತೆಯೂ ಇಲ್ಲ. ಈ ಟೈಮ್ನಲ್ಲಿ ದಮನ್ದೀಪ್ ಸಿಂಗ್ರನ್ನ ಬ್ಯಾಕ್ಅಪ್ ಮಾಡ್ಲೇಬೇಕು. ಯಾಕಂದ್ರೆ ಅಂದು ಯುವರಾಜ್ ಸಿಂಗ್ ಕೈಯಲ್ಲಿ ಅದು ಕೂಡ ವರ್ಲ್ಡ್ಕಪ್ನಲ್ಲಿ ಆರು ಸಿಕ್ಸರ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಆ ಒಂದು ಇನ್ಸಿಡೆಂಟ್ ಬಳಿಕ ಎಂಥಾ ಬೌಲರ್ ಆದ್ರು ಅನ್ನೋದು ನಿಮಗೆ ಗೊತ್ತೇ ಇದೆ. ಅಂದು ಆರು ಸಿಕ್ಸರ್ ಹೊಡೆಸಿಕೊಂಡ್ರೂ ಬಳಿಕ ತಮ್ಮ ಟೆಸ್ಟ್ ಕೆರಿಯರ್ನಲ್ಲೇ 600+ ವಿಕೆಟ್ ಪಡೆದ್ರು. ಅಂದು ಇಂಗ್ಲೆಂಡ್ ಟೀಮ್, ಇಂಗ್ಲಿಷ್ ಕ್ರಿಕೆಟ್ ಬೋರ್ಡ್ ಸ್ಟುವರ್ಟ್ ಬ್ರಾಡ್ರನ್ನ ಬ್ಯಾಕ್ಅಪ್ ಮಾಡದೆ ಇರ್ತಿದ್ರೆ 600+ ವಿಕೆಟ್ ತೆಗಿಯೋಕೆ ಸಾಧ್ಯವೇ ಇರುತ್ತಿರಲಿಲ್ಲ. ಯಾರಿಗೊತ್ತು ಈಗ ಆರು ಸಿಕ್ಸ್ ಹೊಡೆಸಿಕೊಂಡ ಇದೇ ಅಮನ್ದೀಪ್ ಮುಂದೊಂದು ದಿನ ಟೀಮ್ ಇಂಡಿಯಾದ ಬೆಸ್ಟ್ ಸ್ಪಿನ್ನರ್ ಆದ್ರೂ ಆಶ್ಚರ್ಯ ಇಲ್ಲ.