6ನೇ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ – ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

6ನೇ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷ ಪತ್ತೆ – ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಧರ್ಮಸ್ಥಳದಲ್ಲಿ ಕೊನೆಗೂ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರಗಳು ಪತ್ತೆಯಾಗಿದೆ. 6ನೇ ಗುಂಡಿ ಉತ್ಖನನ ವೇಳೆ ಅಸ್ಥಿಪಂಜರದ ಅವಶೇಷ ಪತ್ತೆಯಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 1.2.3 ಸಮಾಧಿ ಖಾಲಿ ಖಾಲಿ.. ನಾಲ್ಕರಲ್ಲಿ ಇರೋದ್ ಏನು?

ಧರ್ಮಸ್ಥಳದಲ್ಲಿ 6ನೇ ಗುಂಡಿ ಉತ್ಖನನ ವೇಳೆ ಅಸ್ಥಿಪಂಜರದ ಅವಶೇಷಗಳು (Skeletal Remains) ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಗುಂಡಿಗಳ ಉತ್ಖನನ ಕಾರ್ಯ ನಡೆಯುತ್ತಿತ್ತು. ಆದರೆ 5 ಗುಂಡಿಗಳಲ್ಲಿ ಕಳೇಬರ ಸಿಕ್ಕಿರಲಿಲ್ಲ. ಇದೀಗ 6ನೇ ಗುಂಡಿಯಲ್ಲಿ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿದೆ. ಸ್ಪಾಟ್‌‌ ನಂಬರ್‌ 6ರಲ್ಲಿ ಅಸ್ಥಿಪಂಜರದ ಅವಶೇಷ ಸಿಕ್ಕಿವೆ.

6ನೇ ಗುಂಡಿಯಲ್ಲಿ ಮೂಳೆಗಳನ್ನು ಎಸ್‌ಐಟಿ ಸಂಗ್ರಹಿಸಿಕೊಂಡಿದೆ. ಅನಾಮಿಕ ಹೇಳಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಸಿಕ್ಕಿರೋ ಮೂಳೆಗಳನ್ನು FSLಗೆ ರವಾನಿಸೋ ಸಾಧ್ಯತೆ ಕೂಡ ಇದೆ.

ಧರ್ಮಸ್ಥಳದ ನೇತ್ರಾವತಿ ಘಾಟ್ ಬಳಿಯ ಕಾಡುಪ್ರದೇಶದಲ್ಲಿ 1998 ರಿಂದ 2014ರವರೆಗೆ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿ ಆರೋಪಿಸಿದ್ದ. ಈ ಶವಗಳು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದವು ಎಂದು ದೂರುದಾರ ತಿಳಿಸಿದ್ದು, ಈ ಆರೋಪದಿಂದ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರವು ಜುಲೈ 19, 2025 ರಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿತು.

Sulekha