ಬಾಲಿವುಡ್ ಬ್ಯಾಡ್‌ಬಾಯ್‌ಗೆ 57ನೇ ಹುಟ್ಟುಹಬ್ಬದ ಸಂಭ್ರಮ – ಗೆಳೆಯನಿಗೆ ಶುಭಕೋರಿದ ಕಿಂಗ್‌ಖಾನ್

ಬಾಲಿವುಡ್ ಬ್ಯಾಡ್‌ಬಾಯ್‌ಗೆ 57ನೇ ಹುಟ್ಟುಹಬ್ಬದ ಸಂಭ್ರಮ – ಗೆಳೆಯನಿಗೆ ಶುಭಕೋರಿದ ಕಿಂಗ್‌ಖಾನ್

ಬಾಲಿವುಡ್‌ ಬ್ಯಾಡ್ ಬಾಯ್, ಸಲ್ಲುಮಿಯಾಗೆ 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ನಟ, ನಟಿಯರು, ಅಭಿಮಾನಿಗಳು ಸಲ್ಲುಬಾಯ್‌ಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಇದೇ ವೇಳೆ ಸಲ್ಮಾನ್ ಖಾನ್ ಬರ್ತ್‌ಡೇ ಪಾರ್ಟಿಯ ಫೋಟೋಗಳು ವೈರಲ್ ಆಗಿವೆ. ಇದರಲ್ಲಿ ಸಲ್ಮಾನ್ ಖಾನ್ ಗೆಳೆಯ ಶಾರುಖ್ ಖಾನ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಹೈಲೆಟ್ ಆಗಿದೆ. ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ತಬ್ಬಿಕೊಂಡು, ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಅಭಿಮಾನಿಗಳತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ‘ಮೈ ಅಟಲ್ ಹು’ ಚಿತ್ರದ ಫಸ್ಟ್ ಲುಕ್ ಬಿಡುಗಡೆ – ಅಭಿಮಾನಿಗಳ ಮನಗೆದ್ದ ಪಂಕಜ್ ತ್ರಿಪಾಠಿ

ಸಲ್ಲು ಹುಟ್ಟುಹಬ್ಬದ ಪಾರ್ಟಿಗೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಕೂಡಾ ಪಾಲ್ಗೊಂಡಿದ್ದಾರೆ. ಬರ್ತ್‌ಡೇ ದಿನದ ಹಿಂದಿನ ರಾತ್ರಿ ಸಲ್ಲುಮಿಯಾ ಅದ್ದೂರಿ ಪಾರ್ಟಿ ಆಯೋಜಿಸಿದ್ದರು. ಇದರಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಲ್ಲು ಜೊತೆ ಪೂಜಾ ಹೆಗ್ಡೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಮೇಲೆ ಇವರಿಬ್ಬರ ಮಧ್ಯೆ ಒಳ್ಳೇ ಸ್ನೇಹವಿತ್ತು. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಕೂಡಾ ಬಾಲಿವುಡ್ ಬ್ಯಾಡ್ ಬಾಯ್‌ಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಸಲ್ಮಾನ್​ ಖಾನ್​ ಗೆ 57 ವರ್ಷ ಆದರೂ ಇನ್ನೂ ಮದುವೆಯಾಗಿಲ್ಲ. ಹೀಗಾಗಿ ಮದುವೆ ಬಗ್ಗೆ ಈಗಲೂ ಅಭಿಮಾನಿಗಳು ಪ್ರಶ್ನೆ ಕೇಳುತ್ತಿರುವುದು ವಿಶೇಷ.

suddiyaana