ಕಷ್ಟಗಳು ಕರಗಬೇಕಾ? – ಸೋಮವಾರ ಶಿವನ ಈ ಮಂತ್ರಗಳನ್ನ ಪಠಿಸಿ

ಮಂತ್ರಗಳನ್ನು ಪಠಿಸುವುದರ ಮೂಲಕ ನಾವು ದೇವರು ಮತ್ತು ದೇವತೆಗಳನ್ನು ಶೀಘ್ರದಲ್ಲೇ ಸಂತುಷ್ಟಗೊಳಿಸಬಹುದು ಎನ್ನುವ ನಂಬಿಕೆಯಿದೆ. ಇದರಿಂದ ನಮ್ಮ ಮೇಲೆ ದೇವರ ಆಶೀರ್ವಾದವೂ ಹೆಚ್ಚಿರುತ್ತದೆ. ಅದರಂತೆ ಸೋಮವಾರದ ದಿನದಂದು ನಾವು ಶಿವನನ್ನು ಪೂಜಿಸುವ ಸಂಪ್ರದಾಯವಿದೆ. ಸೋಮವಾರದ ದಿನದಂದು ಶಿವನನ್ನು ಪೂಜಿಸುವುದರಿಂದ ವ್ಯಕ್ತಿಯು ಶಿವನ ಅಪಾರವಾದ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ಈ ದಿನದಂದು ಶಿವ ಮಂತ್ರಗಳನ್ನು ಪಠಿಸುವುದು ಕೂಡ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಿದ್ರೆ ಶಿವನ ಯಾವ ಮಂತ್ರಗಳನ್ನು ಪಠಿಸಬೇಕು ಅನ್ನೋದ್ದನ್ನ ನೋಡೋಣ.
. ಶಿವ ಪಂಚಾಕ್ಷರಿ ಮಂತ್ರ:
” ಓಂ ನಮಃ ಶಿವಾಯ ”
ಇದು ಅತ್ಯಂತ ಸರಳವಾದ ಮಂತ್ರವಾಗಿದ್ದು, ಈ ಮಂತ್ರವನ್ನು ಶಿವಪಂಚಾಕ್ಷರಿ ಮಂತ್ರ ಅಥವಾ ಪಂಚಾಕ್ಷರಿ ಶಿವ ಮಂತ್ರವೆಂದು ಕರೆಯಲಾಗುತ್ತದೆ. ಇದು ಶಿವ ಭಕ್ತರಿಗೆ ಅತ್ಯಂತ ಪ್ರಮುಖವಾದ ಮಂತ್ರವಾಗಿದೆ. ಶಿವನಿಗೆ ಸಂಬಂಧಿಸಿದ ಅತ್ಯಂತ ಜನಪ್ರಿಯ ಮಂತ್ರಗಳಲ್ಲಿ ಒಂದಾದ ಶಿವ ಪಂಚಾಕ್ಷರಿ ಮಂತ್ರವು ನಾನು ಶಿವನಿಗೆ ನಮಸ್ಕಾರವನ್ನು ಮಾಡುತ್ತೇನೆ ಎಂಬರ್ಥವನ್ನು ನೀಡುತ್ತದೆ. ಸೋಮವಾರದ ದಿನದಂದು ನಾವು ಶುದ್ಧವಾದ ಮನಸ್ಸಿನಿಂದ ಈ ಒಂದು ಶಿವ ಮಂತ್ರವನ್ನು ಪಠಿಸಿದರೆ ನಮ್ಮ ಜೀವನದ ಎಲ್ಲಾ ರೀತಿಯ ದುಃಖಗಳು ದೂರಾಗುವುದು.
ಇದನ್ನೂ ಓದಿ:ಬೆಳ್ಳಿ ಶಿವಲಿಂಗವನ್ನ ಪೂಜಿಸಿದ್ರೆ ಏನೆಲ್ಲಾ ಲಾಭ ಗೊತ್ತಾ – ಶಿವ ಭಕ್ತರು ತಪ್ಪದೇ ಈ ಸ್ಟೋರಿ ಓದಿ
ಪಂಚಾಕ್ಷರಿ ಶಿವ ಮಂತ್ರದ ಪ್ರಯೋಜನಗಳೇನು.?
– ಸೋಮವಾರದ ದಿನದಂದು ನಾವು ಈ ಶಿವ ಮಂತ್ರವನ್ನು ಪಠಿಸುವ ಮೂಲಕ ಶಿವನು ಶೀಘ್ರದಲ್ಲೇ ನಮ್ಮ ಮೇಲೆ ಪ್ರಸನ್ನನಾಗುತ್ತಾನೆ.
– ಈ ಮಂತ್ರವನ್ನು ಸರಿಯಾದ ಉಚ್ಛಾರಣೆಯ ಮೂಲಕ ಪಠಿಸಿದಾಗ ವ್ಯಕ್ತಿಯ ಎಲ್ಲಾ ತೊಂದರೆಗಳು ಪರಿಹಾರವಾಗುವುದು.
– ಶಿವನ ಈ ಮಂತ್ರವು ವ್ಯಕ್ತಿಯ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ತರುವುದು.
– ಭಕ್ತರ ಕಷ್ಟಗಳೆಲ್ಲವೂ ಪರಿಹಾರವಾಗುವುದು.
ಶಿವ ಪಂಚಾಕ್ಷರಿ ಮಂತ್ರ ಸೃಷ್ಟಿಯಾಗಿದ್ದು ಹೇಗೆ.?
ನಾವು ಯಜುರ್ವೇದದಲ್ಲಿ ಶಿವ ಪಂಚಾಕ್ಷರಿ ಮಂತ್ರದ ಉಲ್ಲೇಖವನ್ನು ನೋಡಬಹುದಾಗಿದೆ. ಶ್ರೀ ರುದ್ರಂ ಚಮಕಂ ಮತ್ತು ರುದ್ರ ಅಷ್ಟಾಧ್ಯಾಯಿಗಳು ‘ನ’, ‘ಮ’, ‘ಶಿ’, ‘ವಾ’ ಮತ್ತು ‘ಯ’ ಗಳಾಗಿ ಕಾಣಿಸಿಕೊಂಡರು ಎಂದು ಹೇಳಲಾಗುತ್ತದೆ. ಶ್ರೀ ರುದ್ರಂ ಚಮಕಂ ಮತ್ತು ರುದ್ರ ಅಷ್ಟಾಧ್ಯಾಯಿಗಳು ಕ್ರಮವಾಗಿ ಕೃಷ್ಣ ಯಜುರ್ವೇದ ಮತ್ತು ಶುಕ್ಲ ಯಜುರ್ವೇದದ ಭಾಗವಾಗಿದೆ. ‘ಓಂ ನಮಃ ಶಿವಾಯ’ ಮಂತ್ರವನ್ನು ಶಿವ ಪುರಾಣದ ವಿದ್ಯೇಶ್ವರ ಸಂಹಿತೆಯ ಅಧ್ಯಾಯ 1.2.10 ಮತ್ತು ವಾಯವ್ಯ ಸಂಹಿತೆಯ ಅಧ್ಯಾಯ 13 ರಲ್ಲಿ ಬರೆಯಲಾಗಿದೆ.

ನೋಡಿರಿ

