ಪುಟ್ಟ ಬಾಲಕನ ಜೊತೆ ಸಿಎಂ ಯೋಗಿ ಮಾತು – ಆ ಮಾತು ಕೇಳಿ ಆದಿತ್ಯನಾಥ್ ನಕ್ಕಿದ್ದೇಕೆ ಗೊತ್ತಾ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುಟ್ಟ ಬಾಲಕನ ಜೊತೆ ನಡೆದುಕೊಂಡ ರೀತಿ ಸಖತ್ ವೈರಲ್ ಆಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಯೋಗಿ ಆದಿತ್ಯನಾಥ್ ಖರ್ಚಿಯಲ್ಲಿ ಕುಳಿತಿದ್ದು, ಅವರ ಪಕ್ಕದಲ್ಲಿ ನಿಂತಿದ್ದ ಮಗುವಿಗೆ ನಿನಗೆ ಏನು ಬೇಕು ಎಂದು ಮೃದುವಾಗಿ ಕೇಳುತ್ತಿರುವುದನ್ನು ತೋರಿಸಲಾಗಿದೆ. ಈ ಹಂತದಲ್ಲಿ ಪುಟ್ಟ ಬಾಲಕ ಯೋಗಿ ಆದಿತ್ಯನಾಥ್ ಅವರ ಕಿವಿಯಲ್ಲಿ ಏನೋ ಪಿಸುಗುಟ್ಟಿದ್ದಾರೆ. ಆರಂಭದಲ್ಲಿ ಇದು ಸಿಎಂಗೆ ಕೇಳಿಸೋದಿಲ್ಲ. ಕೊನೆಗೆ ಪುಟ್ಟ ಬಾಲಕ ಏನು ಹೇಳುತ್ತಿದ್ದಾನೆ ಎಂದು ಅರ್ಥಮಾಡಿಕೊಂಡ ನಂತರ ಮುಖ್ಯಮಂತ್ರಿ ಮನಸಾರೆ ನಕ್ಕಿದ್ದಾರೆ.
ಇದನ್ನೂ ಓದಿ: ಟೀಕೆಗಳನ್ನೇ ಮೆಟ್ಟಿ ಬೆಳೆದ KL – ಅವಮಾನಿಸಿದವರಿಂದಲೇ ಈಗ ಸನ್ಮಾನ
ವೈರಲ್ ಆಗಿರುವ ಕ್ಲಿಪ್ನಲ್ಲಿ ಯೋಗಿ ಆದಿತ್ಯನಾಥ್, ‘ಔರ್ ಕ್ಯಾ ಚಾಹಿಯೇ ಬತಾವ್..’ (ಮತ್ತಿನ್ನೇನು ಬೇಕು ಕೇಳು.) ಎಂದು ಹೇಳುತ್ತಾರೆ. ಈ ವೇಳೆ ಮುಖ್ಯಮಂತ್ರಿಯತ್ತ ವಾಲುವ ಪುಟ್ಟ ಹುಡುಗ ಕಿವಿಯಲ್ಲಿ ‘ಚಿಪ್ಸ್’ ಎಂದು ಹೇಳಿದ್ದಾನೆ. ಇದು ಸಿಎಂ ಯೋಗಿ ಆದಿತ್ಯನಾಥ್ ನಗುವಿಗೆ ಕಾರಣವಾಯಿತು. ಹಿನ್ನಲೆಯಲ್ಲಿ ಇತರರು ಕೂಡ ಪುಟ್ಟ ಬಾಲಕನ ಮುಗ್ದ ಮನವಿ ಕೇಳಿ ಎಲ್ಲರೂ ನಕ್ಕಿದ್ದು ಕಂಡಿದೆ. ಎಕ್ಸ್ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ‘ಚಿಪ್ಸ್ ಮಾಂಗ್ ರಹಾ ಹೇ..’ ಚಿಪ್ಸ್ ಕೇಳುತ್ತಿದ್ದಾನೆ ಎಂದು ಹಂಚಿಕೊಳ್ಳಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಪುಟ್ಟ ಬಾಲಕ ನೀಡಿದ ಒಂದೇ ಶಬ್ದದ ಪ್ರತಿಕ್ರಿಯೆ ಹಾಗೂ ಆತ ಬೇಡಿಕೆ ಇಟ್ಟ ರೀತಿ ಎಲ್ಲರಿಗೂ ಮೆಚ್ಚುಗೆಯಾಗಿದೆ. ಹೆಚ್ಚಿನವರು ಪುಟ್ಟ ಬಾಲಕನ ಪ್ರತಿಕ್ರಿಯೆಯನ್ನು ಮೆಚ್ಚಿದ್ದಾರೆ. ‘ಇದನ್ನು ಕ್ಲಿಯರ್ ಥಿಂಕಿಂಗ್ ಎಂದು ಹೇಳ್ತಾರೆ’ ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, ಬಾಲಕನ ಅಗತ್ಯ ಎಲ್ಲವೂ ಪೂರೈಸಿದಂತಾಗಿ ಎಂದು ಬರೆದಿದ್ದಾರೆ.

ನೋಡಿರಿ

