ಯುವಕನ ಹೊಟ್ಟೆಯಲ್ಲಿತ್ತು 56 ಬ್ಲೇಡ್‌ಗಳು – ರಕ್ತವಾಂತಿ ಮಾಡಿಕೊಳ್ಳುತ್ತಿದ್ದವನು ಬದುಕಿದ್ದೇ ಹೆಚ್ಚು..!

ಮಗ ದಿಢೀರ್ ಅಂತಾ ರಕ್ತವಾಂತಿ ಮಾಡಿಕೊಂಡರೆ ಹೆತ್ತವರಿಗೆ ಆಘಾತವಾಗುವುದು ಸಹಜ. ಆದರೆ, ಮಗನಿಗೆ ರಕ್ತವಾಂತಿ ಯಾಕಾಗುತ್ತಿದೆ ಅಂತಾ ಗೊತ್ತಾದಾಗ ಮಾತ್ರ ಹೆತ್ತವರು ಇನ್ನಷ್ಟೂ ಕಂಗಾಲಾಗಿ ಹೋಗಿದ್ದರು. ರಾಜಸ್ಥಾನದ 25 ವರ್ಷದ ಯುವಕ ಯಶಪಾಲ್ ಸಿಂಗ್, ಸಂಚೋರ್ ಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಜೊತೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಕೆಲದಿನಗಳ ಹಿಂದೆ ಯಶಪಾಲ್ ಸಿಂಗ್, ವಿಪರೀತ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದರುವುದನ್ನ ನೋಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಚೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರಾದ ಡಾ. ನರಸಿರಾಮ್ ದೇವಸಿ ಪರೀಕ್ಷೆ ಮಾಡಿ, ತಕ್ಷಣ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಸ್ವತಃ ವೈದ್ಯರೇ ದಂಗಾಗಿ ಹೋಗಿದ್ದಾರೆ.
ಇದನ್ನೂ ಓದಿ: ಉತ್ಸವದ ವೇಳೆ ಜನರೇಟರ್ ಗೆ ಕೂದಲು ಸಿಲುಕಿ ಬಾಲಕಿ ಸಾವು – ಅಯ್ಯೋ ಇದೆಂಥಾ ದುರಂತ..?
ಯಶಪಾಲ್ ಸಿಂಗ್ ಹೊಟ್ಟೆಯೊಳಗೆ ಲೋಹದ ಅಂಶ ಪತ್ತೆಯಾಗಿತ್ತು. ಆಗ ಈತ ಏನನ್ನೋ ತಿಂದಿದ್ದಾನೆ ಅನ್ನೋದು ವೈದ್ಯರಿಗೂ ಕನ್‌ಫರ್ಮ್ ಆಗಿತ್ತು. ನಂತರ ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಪರೀಕ್ಷೆ ನಡೆಸಿದ್ದಾರೆ. ಆಗ ಹೊಟ್ಟೆಯಲ್ಲಿ ಲೋಹದ ಬ್ಲೇಡ್‌ಗಳಿರುವುದು ಪತ್ತೆಯಾಗಿತ್ತು. ಅದು ಕೂಡಾ ಒಂದಾ ಎರಡಾ.. ಬರೋಬ್ಬರಿ 56 ಬ್ಲೇಡ್‌ಗಳು ಹೊಟ್ಟೆಯಲ್ಲಿದ್ದವು. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯಿಂದ 56 ಬ್ಲೇಡ್‌ಗಳನ್ನು ಹೊರತೆಗೆಯಲಾಗಿದೆ. ಈತ ಪೇಪರ್ ಕವರ್ ಸಮೇತ ಬ್ಲೇಡ್ ನುಂಗಿದ್ದ. ಬ್ಲೇಡ್‌ಗಳನ್ನು ತಿನ್ನುವ ಮೊದಲು ಎರಡು ಭಾಗಗಳಾಗಿ ಮುರಿದು ತಿಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಯಾಕೆ ಈತ ಬ್ಲೇಡ್‌ಗಳನ್ನು ನುಂಗಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸದ್ಯ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.