ಯುದ್ಧ ಭಯ.. ಭಾರತಕ್ಕೆ ಹೆದರಿದ ಪಾಕ್!! 5000 ಪಾಕ್ ಸೈನಿಕರ ರಾಜೀನಾಮೆ!!
ಪಾಕ್‌ಗೆ ಮುಸ್ಲಿಂ ದೇಶದ ಬೆಂಬಲ

ಯುದ್ಧ ಭಯ.. ಭಾರತಕ್ಕೆ ಹೆದರಿದ ಪಾಕ್!! 5000 ಪಾಕ್ ಸೈನಿಕರ ರಾಜೀನಾಮೆ!!ಪಾಕ್‌ಗೆ ಮುಸ್ಲಿಂ ದೇಶದ ಬೆಂಬಲ

ಪಹಲ್ಗಾಂ ದಾಳಿ ನಡೆಸಲು ಉಗ್ರರು ಪಾಕಿಸ್ತಾನದಿಂದ 22 ಗಂಟೆ ನಡೆದುಕೊಂಡು ಭಾರತಕ್ಕೆ ಬಂದಿದ್ದರು. ಈ ದಾಳಿ ಹಿಂದೆ ಇರೋದು ಪಾಕ್ ಅನ್ನೋದು ಚಿಕ್ಕ ಮಕ್ಕಳಿಗೂ ಕೂಡ ಗೊತ್ತಾಗುತ್ತೆ. ಹೀಗಾಗಿ ಪಾಕ್‌ಗೆ ಯಾವ ರೀತಿಯಲ್ಲಿ ಏಟು ಕೊಡಬೇಕು ಅದೆಲ್ಲಾವನ್ನೂ ಭಾರತ ನೀಡುತ್ತಿದೆ. ಈ ನಡುವೆ ಇತ್ತೀಚೆಗೆಷ್ಟೇ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಭಾರತ ಪ್ರತೀಕಾರಕ್ಕೆ ಸಜ್ಜಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇದರ ಜೊತೆಗೆ ಭಾರತದ ಈ ಭಾರಿ ಹಿಂದೆಂದೂ ನೋಡದ, ಮುಂದೆ ಮೇಲೆಳಲು ಸಾಧ್ಯವಾಗದ ರೀತಿಯಲ್ಲಿ  ಪ್ರತೀಕಾರಕ್ಕೆ ಸಜ್ಜಾಗುತ್ತಿದೆ.  ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿರುವ ಪಾಕ್ ಸೇನೆಯನ್ನು ಗಡಿಯಲ್ಲಿ ಭಾರತದ ಯೋಧರು ಹಿಮ್ಮೆಟ್ಟಿಸುತ್ತಿದ್ದಾರೆ. ಭಾರತದ ಸೇನೆಯ ಈ ಸಮರಾಭ್ಯಾಸ ಪಾಕಿಸ್ತಾನಕ್ಕೆ ನಡುಕವನ್ನು ಉಂಟು ಮಾಡಿದೆ. ಭಾರತದ ತಯಾರಿ ನೋಡಿದ ಪಾಕಿಸ್ತಾನ ಸೇನೆಯ ಬರೋಬ್ಬರ 1200 ಪಾಕ್ ಆಫೀಸರ್ ಸೇರಿ 5,000 ಯೋಧರು ಹಾಗೂ ಸೇನಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಲ್ಲ.

ಮುಖ್ಯಸ್ಥನೇ ಎಸ್ಕೇಪ್‌, ಸೈನಿಕರ  ರಾಜೀನಾಮೆ

 ಉಗ್ರರ ದಾಳಿಗೆ ಭಾರತ ಪ್ರತೀಕಾರಕ್ಕೆ ಸದ್ದಾಗಿದೆ.ಈಗಾಲೇ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಂದೊಂದೆ ದಿಕ್ಕಿನಿಂದ ಪಾಕಿಸ್ತಾನವನ್ನು ಏಕಾಂಗಿ ಮಾಡಲಾಗುತ್ತಿದೆ. ಜಲ ಒಪ್ಪಂದ ರದ್ದು, ವಾಘಾ ಗಡಿ ಬಂದ್, ಪಾಕಿಸ್ತಾನ ಪ್ರಜೆಗಳಿಗೆ ದೇಶ ಬಿಡಲು ಸೂಚನೆ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒತ್ತಡ ಹೇರುವ ತಂತ್ರವನ್ನು ಭಾರತ ಪ್ರಯೋಗಿಸಿದೆ. ಇದೀಗ ಪಾಕಿಸ್ತಾನ ನ್ಯೂಕ್ಲಿಯರ್ ಅಸ್ತ್ರ ಝಳಪಿಸುತ್ತಾ ಭಾರತವನ್ನು ಬೆದರಿಸುವ ತಂತ್ರಕ್ಕೆ ಮುಂದಾಗಿದೆ. ಈ ಬೆಳವಣಿಗೆ ನಡುವೆಯೇ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತನ್ನ ಕುಟುಂಬವನ್ನು ಲಂಡನ್‌ಗೆ ಸ್ಥಳಾಂತರಿಸಿದೆ. ಇದೀಗ ಸ್ವತಃ ಆಸೀಮ್ ಮುನೀರ್ ನಾಪತ್ತೆ ಅನ್ನೋ ಮಾತುಗಳು ಪಾಕಿಸ್ತಾನದಲ್ಲೇ ಕೇಳಿಬರುತ್ತಿದೆ. ಯುದ್ಧದ ಸನ್ನಿವೇಶದಲ್ಲಿ ಮುಂದೆ ನಿಲ್ಲಬೇಕಾದ ಸೇನಾ ಮುಖ್ಯಸ್ಥನೇ ತನ್ನ ಕುಟುಂಬ, ತನ್ನ ಸುರಕ್ಷತೆಗೆ ಆದ್ಯತೆ ನೀಡಿರುವುದು ಇದೀಗ ಪಾಕಿಸ್ತಾನ ಸೇನೆಯ ಯೋಧರು, ಇತರ ಅಧಿಕಾರಿಗಳ ಬೆಚ್ಚಿ ಬೀಳಿಸಿದೆ. ಹೀಗಾಗಿ ಒಬ್ಬರ ಹಿಂದೊಬ್ಬರು ರಾಜೀನಾಮೆ ನೀಡುತ್ತಿದ್ದಾರೆ. ಇತ್ತ ಭಾರತ ಯಾವ ರೀತಿ ದಾಳಿ ಮಾಡಲಿದೆ ಅನ್ನೋ ಯಾವುದೇ ಸುಳಿವು ಪಾಕಿಸ್ತಾನಕ್ಕೆ ಸಿಕ್ಕಿಲ್ಲ. ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್ ಮೂಲಕ ಭಾರತದ ಈ ಹಿಂದೆ ಕೆಲ ಎಚ್ಚರಿಕೆ ನೀಡಿತ್ತು. ಹೀಗಾಗಿ ಈ ಬಾರಿ ಇವೆಲ್ಲಕ್ಕಿಂತ ಹೆಚ್ಚು ಕಠಿಣ ರೀತಿಯ ದಾಳಿಗೆ ಭಾರತ ಸಜ್ಜಾಗುತ್ತಿದೆ ಅನ್ನೋ ಆತಂಕ ಪಾಕಿಸ್ತಾನ ಸೇನೆಯಲ್ಲಿ ಮಡುಗಟ್ಟಿದೆ. ಹೀಗಾಗಿ ಭಾರತದ ಪ್ರತೀಕಾರ ಭಯದಲ್ಲಿ ಕಳೆದೆರಡು ದಿನದಲ್ಲಿ ಸುಮಾರು 5,000 ಯೋಧರು, ಸೇನಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನಿಗಳ ಆತಂಕ ಹೆಚ್ಚಿಸಿದ ಕಮಾಂಡರ್ ಪತ್ರ 

ಪಾಕಿಸ್ತಾನ ಮಿಲಿಟರಿಯ 11 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಮರ್ ಬುಖಾರಿ, ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಮ್ ಮುನೀರ್‌ಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ಸೇನೆಯ ಆತ್ಮಸ್ಥೈರ್ಯ ಕುಗ್ಗಿದೆ. ಪ್ರತಿ ದಿನ ರಾಜೀನಾಮೆ ನೀಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜೀನಾಮೆ ಮುಂದುವರಿದಿದೆ, ಭಾರತದ ಸೇನೆಗೆ ತಕ್ಕ ಉತ್ತರ ನೀಡಲು ಪಾಕಿಸ್ತಾನ ಸೇನೆ ವಿಫಲವಾಗಲಿದೆ ಎಂದು ಎಚ್ಚರಿಸಿದ್ದಾರೆ. ಪಾಕಿಸ್ತಾನದ ಅಂಕಿ ಅಂಶಗಳ ಪ್ರಕಾರ ಪಾಕ್ ಮಿಲಿಟರ್ 12ನೇ ಕಾರ್ಪ್ಸ್ ಬೆಟಾಲಿಯನ್‌ನ 200 ಸೇನಾಧಿಕಾರಿಗಳು, 600 ಯೋಧರು ರಾಜೀನಾಮೆ ನೀಡಿದ್ದಾರೆ. ನಾರ್ದನ್ ಕಮಾಂಡ್ ಏರಿಯಾ ಬೆಟಾಲಿಯನ್ 100 ಸೇನಾಧಿಕಾರಿಗಳು ಹಾಗೂ 500 ಯೋಧರು ರಾಜೀನಾಮೆ ನೀಡಿದ್ದಾರೆ. ಭಾರತದ ಗಡಿ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಮಂಗಲ್ ಕಾರ್ಪ್ಸ್ ಬೆಟಾಲಿಯನ್‌ನ 75 ಸೇನಾಧಿಕಾರಿಗಳು ಹಾಗೂ 500 ಯೋಧರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

 ಪಾಕಿಸ್ತಾನಿ YouTube ಚಾನೆಲ್‌ಗಳನ್ನು ನಿಷೇಧಿಸಿದ ಭಾರತ

ಕಾಶ್ಮೀರದ ಪಹಲ್ಗಾಮ್‌ನಲ್ಲಾದ ಉಗ್ರ ದಾಳಿಯ ನಂತರ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಮತ್ತೊಂದು ಕ್ರಮ ಕೈಗೊಂಡಿದೆ. ಭಾರತದಲ್ಲಿ ಪಾಕ್‌ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ YouTube ಚಾನೆಲ್ ಸೇರಿದಂತೆ, ಹಲವು ಪಾಕಿಸ್ತಾನಿ YouTube ಚಾನೆಲ್‌ಗಳನ್ನು ನಿಷೇಧಿಸಿದೆ.  ಪಹಲ್ಗಾಮ್ ನಂತರ ಕೆಲ YouTube ವಾಹಿನಿಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಿಷೇಧಿತ ಯೂಟ್ಯೂಬ್‌ ಚಾನೆಲ್‌ಗಳು ಒಟ್ಟಾರೆಯಾಗಿ ಸುಮಾರು 63 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.

ಪಾಕ್‌ಗೆ ಬೆಂಬಲ ಕೊಟ್ಟ ಮುಸ್ಲಿಂ ದೇಶ

ಎರಡೂ ರಾಷ್ಟ್ರಗಳ ನಡುವೆ ಪರಿಸ್ಥಿತಿ ಉದ್ವಿಗ್ನವಾಗುತ್ತಿರುವಾಗಲೇ ಪಾಕಿಸ್ತಾನಕ್ಕೆ ಬೆಂಬಲ ಹೆಚ್ಚಾಗುತ್ತಿದ್ದು. ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ. ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ಕೊಡುವುದಕ್ಕೆ ಶುರು ಮಾಡಿವೆ. ಚೀನಾ ಬೆಂಬಲದ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ.  ಇದೀಗ ಟರ್ಕಿ ದೇಶವು ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸಿದ್ದು. ಇಸ್ಲಾಮಾಬಾದ್‌ಗೆ ಯುದ್ಧ ಉಪಕರಣಗಳನ್ನು ಸರಬರಾಜು ಮಾಡಿದೆ. ಟರ್ಕಿ ವಾಯುಪಡೆಯ  ಯುದ್ಧ ವಿಮಾನಗಳು ಹಾಗೂ ಯುದ್ಧ ಸಾಮಾಗ್ರಿಗಳು ಪಾಕಿಸ್ತಾನದ ಕರಾಚಿಗೆ ಬಂದಿಳಿದಿವೆ  ಟರ್ಕಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗಿದೆ. ಇತ್ತ ಚೀನಾ ಸಹ ಪಾಕಿಸ್ತಾನದೊಂದಿಗೆ ಇರುವುದಾಗಿ ಹೇಳಿದೆ. ಭಾರತ ಹಾಗೂ ಪಾಕ್‌ ಎರಡೂ ದೇಶಗಳು ಸೌರ್ಹಾದವಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ಚೀನಾ ಹೇಳಿದರೂ. ತನ್ನ ಸಂಪೂರ್ಣ ಬೆಂಬಲ ಪಾಕಿಸ್ತಾನಕ್ಕೆ ಇರಲಿದೆ ಎಂದು ಹೇಳಿದೆ. ಇನ್ನು ಬಾಂಗ್ಲದೇಶವು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ – ಚೀನಾದೊಂದಿಗೆ ಕೈಜೋಡಿಸಿದೆ. ಶ್ರೀಲಂಕಾ ದೇಶದೊಂದಿಗೂ ಚೀನಾ ಉತ್ತಮ ಸಂಬಂಧವನ್ನೇ ಹೊಂದಿದೆ. ಆರ್ಥಿಕ ಸಹಾಯದ ಕಾರಣಕ್ಕೆ ಶ್ರೀಲಂಕಾ ಚೀನಾ ದೇಶದೊಂದಿಗೆ ಆತ್ಮೀಯವಾಗಿದೆ. ಆದ್ರೆ ಅಕ್ಕ ಪಕ್ಕ ಇರೋ 3-4 ದೇಶಗಳು ಪಾಕ್‌ಗೆ ಬೆಂಬಲ ಕೊಟ್ರೆ, ಭಾರತಕ್ಕೆ ಉಳಿದೆಲ್ಲಾ ದೇಶಗಳ ಬೆೆಂಬಲ ಇದ್ದೇ ಇರುತ್ತೆ.. ಹೀಗಾಗಿ ಭಯ ಪಡೋ ಅಗತ್ಯವೇ ಇಲ್ಲ,..

Kishor KV

Leave a Reply

Your email address will not be published. Required fields are marked *