ಬಾಕ್ಸ್ಆಫೀಸ್‌ನಲ್ಲಿ ಅಬ್ಬರಿಸಿದ ಶಾರುಖ್ ಖಾನ್ ಸಿನಿಮಾ – ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಕೆ ಕಂಡ ‘ಜವಾನ್’

ಬಾಕ್ಸ್ಆಫೀಸ್‌ನಲ್ಲಿ ಅಬ್ಬರಿಸಿದ ಶಾರುಖ್ ಖಾನ್ ಸಿನಿಮಾ – ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಗಳಿಕೆ ಕಂಡ ‘ಜವಾನ್’

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮತ್ತೊಮ್ಮೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಪಠಾಣ್’ ಸಿನಿಮಾ ಬಳಿಕ ಶಾರುಖ್ ಖಾನ್ ಅವರು ಮತ್ತೊಂದು ಗೆಲುವು ಕಂಡಿದ್ದಾರೆ. ‘ಜವಾನ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ಗಳಿಕೆಯಲ್ಲಿ ಕೋಟಿ ಕೋಟಿ ಬಾಚಿಕೊಳ್ಳುತ್ತಿದೆ. ಭಾನುವಾರ ‘ಜವಾನ್’ ಸಿನಿಮಾ 81 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಲ್ಲದೇ, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ‘ಜವಾನ್’ ಸಿನಿಮಾ 500 ಕೋಟಿ ರೂಪಾಯಿ ಬಾಚಿಕೊಂಡಿದೆ.

ಇದನ್ನೂ ಓದಿ:  ಪಠಾಣ್‌’, ‘ಕೆಜಿಎಫ್‌ 2’ ದಾಖಲೆಗಳನ್ನು ಧೂಳೀಪಟ ಮಾಡಿದ ‘ಜವಾನ್’ –ಎರಡನೇ ದಿನವೂ ಭರ್ಜರಿ ಕಲೆಕ್ಷನ್‌!

‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸೆಪ್ಟೆಂಬರ್ 10, ಭಾನುವಾರದಂದು ಈ ಚಿತ್ರ ಬರೋಬ್ಬರಿ 81 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 287 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 500 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಶಾರುಖ್ ಖಾನ್ ಹೊಸ ದಾಖಲೆ ಬರೆದಿದ್ದಾರೆ. ಇನ್ನೂ ಹಲವು ವಾರ ಈ ಸಿನಿಮಾ ಅಬ್ಬರಿಸಲಿದೆ.

ಸೆಪ್ಟೆಂಬರ್ 7, ಕೃಷ್ಣ ಜನ್ಮಾಷ್ಟಮಿಯಂದು ‘ಜವಾನ್’ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನ ಈ ಚಿತ್ರ ಗಳಿಕೆ ಮಾಡಿದ್ದು ಬರೋಬ್ಬರಿ 75 ಕೋಟಿ ರೂಪಾಯಿ. ಹಿಂದಿಯಲ್ಲಿ 65 ಕೋಟಿ ರೂಪಾಯಿ ಹಾಗೂ ತಮಿಳು, ತೆಲುಗಿನಲ್ಲಿ 10 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಸೆಪ್ಟೆಂಬರ್ 8 ಶುಕ್ರವಾರದಂದು 53.23 ಕೋಟಿ ರೂಪಾಯಿ ಹಾಗೂ ಶನಿವಾರ 77.83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಎಲ್ಲಾ ದಾಖಲೆಗಳನ್ನು ‘ಜವಾನ್’ ಸಿನಿಮಾ ಮುರಿದಿದೆ. ಭಾನುವಾರ ‘ಜವಾನ್’ ಸಿನಿಮಾ 81 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ವರ್ಷನ್‌ನಿಂದ 72 ಕೋಟಿ ರೂಪಾಯಿ ಹಾಗೂ ತಮಿಳು-ತೆಲುಗು ಭಾಷೆಗಳಸ್ಸಿ 9 ಕೋಟಿ ರೂಪಾಯಿ ಸಂಪಾದನೆ ಆಗಿದೆ. ಭಾರತದಲ್ಲಿ ಚಿತ್ರದ ಒಟ್ಟಾರೆ ಗಳಿಕೆ 287 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ.

‘ಜವಾನ್ ಇತಿಹಾಸ ಸೃಷ್ಟಿಸಿದೆ. ಭಾನುವಾರ 28,75,961 ಟಿಕೆಟ್ಗಳು ಮಾರಾಟ ಆಗಿವೆ’ ಎಂದು ಟ್ರೇಡ್ ವಿಶ್ಲೇಷಕ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್, ನಯನತಾರಾ ಮುಖ್ಯಭೂಮಿಕೆಯಲ್ಲಿದ್ದಾರೆ. ಪ್ರಿಯಾಮಣಿ, ಸಂಜಯ್ ದತ್, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ದೀಪಿಕಾ ಪಡುಕೋಣೆ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಅಟ್ಲಿ ಅವರ ನಿರ್ದೇಶನ ಚಿತ್ರಕ್ಕಿದೆ.

suddiyaana