ವರ್ಗಾವಣೆ ದಂಧೆಯಲ್ಲಿ 500 ಕೋಟಿ ರೂಪಾಯಿ ವ್ಯವಹಾರ..! – ಸರ್ಕಾರದ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ

ವರ್ಗಾವಣೆ ದಂಧೆಯಲ್ಲಿ 500 ಕೋಟಿ ರೂಪಾಯಿ ವ್ಯವಹಾರ..! – ಸರ್ಕಾರದ ವಿರುದ್ಧ ಹೆಚ್‌ಡಿಕೆ ಗಂಭೀರ ಆರೋಪ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ, ಕಳೆದ ಎರಡು ತಿಂಗಳಲ್ಲಿ ಸರ್ಕಾರದ ನಾನಾ ಇಲಾಖೆಗಳಲ್ಲಿ ಅಂದಾಜು 500 ಕೋಟಿ ರೂ. ವರ್ಗಾವಣೆ ದಂಧೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪೆನ್‌ಡ್ರೈವ್‌ ರಿಲೀಸ್‌ ಗೆ ಕಾಂಗ್ರೆಸ್ ನಾಯಕರಿಂದಲೇ ತಡೆ! – ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಬೆಂಗಳೂರಿನಲ್ಲಿ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ ಅವರು, ಹೊಸ ಸರ್ಕಾರದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ನಾನು ಒಬ್ಬ ಅಧಿಕಾರಿಯನ್ನು ಮಾತನಾಡಿಸಿದೆ. ಅವರು ಕಳೆದೆರಡು ತಿಂಗಳಲ್ಲಿ ಏನಿಲ್ಲವೆಂದರೂ 500 ಕೋಟಿ ರೂ.ಗಳಷ್ಟು ವರ್ಗಾವಣೆ ಅವ್ಯವಹಾರ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಇಂಥ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದರೆ ಜನಜೀವನವನ್ನು ಬೀದಿಗೆ ತರಬೇಕು ಎಂದು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದರು. ನಾನು ಏನಾದರೂ ಆರೋಪ ಮಾಡಿದರೆ ಸಾಕ್ಷಿ ಕೊಡಿ ಅಂತ ಸರ್ಕಾರದವರು ಕೇಳ್ತಾರೆ. ನಾನು ಆ ಅಧಿಕಾರಿಯು ಹೇಳಿದ ಮಾತನ್ನು ಹೇಳುತ್ತಿದ್ದೇನೆ. ಪಾಪ.. ಅವರಾದರೂ ಪ್ರತಿಯೊಂದಕ್ಕೆ ಹೇಗೆ ಸಾಕ್ಷಿ ಇಡಬಲ್ಲರು ಎಂದಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಗಣಗಳು ನಡೆದಿಲ್ಲ. ಹಾಗೇನಾದರೂ ನಡೆದಿರುವುದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕೃಷಿ ಇಲಾಖೆಯಲ್ಲಿ ಕೇವಲ ವರ್ಗಾವಣೆ ದಂಧೆಯೇ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆಗಾಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಕೀಳಲಾಗುತ್ತಿದೆ. ಇದೇ ಕೃಷಿ ಇಲಾಖೆಯ ಸಾಧನೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ತಾವು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಕೃಷಿ ಇಲಾಖೆಯ ವರ್ಗಾವಣೆ ದರ ಪಟ್ಟಿಯು 130 ಕೋಟಿ ರೂ.ಗಳದ್ದು ಎಂದು ತಿಳಿಸಿದ್ದಾರೆ.

suddiyaana