ದಂಡ ಕಟ್ಟಲು ಮುಗಿಬಿದ್ದ ಜನ – 51 ಸಾವಿರ ರೂ ಫೈನ್.. ಕಟ್ಟಿದ್ದು 25 ಸಾವಿರ ರೂ!
ಬೆಂಗಳೂರು: ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ದಂಡವನ್ನು ಬಾಕಿ ಉಳಿಸಿಕೊಂಡಿರುವವರು ಫೆ. 11 ರ ಒಳಗೆ ಪಾವತಿಸಿದರೆ ಶೇ.50 ರಿಯಾಯಿತಿ ನೀಡಲಾಗುವುದು ಎಂದು ಸರ್ಕಾರ ಗುರುವಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರಿನ ಜನರು ದಂಡ ಪಾವತಿಸಲು ಸಂಚಾರಿ ಠಾಣೆಗೆ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ರಾ? – ಈ ದಿನದೊಳಗೆ ದಂಡ ಪಾವತಿಸಿದ್ರೆ 50% ರಿಯಾಯಿತಿ!
ಶೇಕಡಾ 50ರಷ್ಟು ರಿಯಾಯಿತಿ ಹಿನ್ನೆಲೆ ಆನ್ ಲೈನ್ ನಲ್ಲಿ ದಂಡ ಪಾವತಿ ಮಾಡಲು ಹಲವು ಮಂದಿ ಮುಂದಾಗಿದ್ದಾರೆ. ಇದರಿಂದ ಸಂಚಾರಿ ಇಲಾಖೆಯ ಸರ್ವರ್ ಕೂಡ ಡೌನ್ ಆಗಿದೆ.
ಟ್ರಾಫಿಕ್ ಪೊಲೀಸರು ನಿಯಮಗಳ ಉಲ್ಲಂಘನೆ ಪ್ರಕರಣಗಳು ಹಾಗೂ ದಂಡದ ರಿಯಾಯಿತಿ ಚಾರ್ಟ್ ಬಿಡುಗಡೆ ಮಾಡಿದ್ದಾರೆ. ಯಾವ ಯಾವ ಪ್ರಕರಣಕ್ಕೆ ಎಷ್ಟೆಷ್ಟು ದಂಡ ಹಾಗೂ ಎಷ್ಟು ಡಿಸ್ಕೌಂಟ್ ನೀಡಲಾಗಿದೆ ಎಂದು ಚಾರ್ಟ್ನಲ್ಲಿ ಮಾಹಿತಿ ನೀಡಲಾಗಿದೆ.
44 ತರಹದ ಟ್ರಾಫಿಕ್ ನಿಯಮಗಳ ಉಲ್ಲಂಘಟನೆ ಪಟ್ಟಿ
ಟ್ರಾಫಿಕ್ ನಿಯಮಗಳ ದಂಡದ ಪಟ್ಟಿ
ಟ್ರಾಫಿಕ್ ನಿಯಮಗಳ ದಂಡದ ಪಟ್ಟಿ
ಒಟ್ಟು ದಂಡ 51 ಸಾವಿರ ರೂ… ಕಟ್ಟಿದ್ದು 25 ಸಾವಿರ ರೂ!
ಸರ್ಕಾರ ಈ ಆದೇಶ ಹೊರಡಿಸಿದ ಬೆನ್ನಲ್ಲೇ ಕೆಂಗೇರಿ ಸಂಚಾರ ಠಾಣೆಯ ಎಎಸ್ಐ ನಾರಾಯಣಪ್ಪ ಹಾಗೂ ಕಾನ್ ಸ್ಟೇಬಲ್ ಪಿ.ಸಿ ಸರ್ದಾಮ್ ಉತ್ತರ ಹಳ್ಳಿ ನಿವಾಸಿ ರಕ್ಷಿತ್ ಎಂಬಾತನಿಂದ 25,500 ರೂ. ಸಂಚಾರ ಉಲ್ಲಂಘನೆಯ ದಂಡ ಕಟ್ಟಿಸಿಕೊಂಡಿದ್ದಾರೆ.
ರಕ್ಷಿತ್ ಹಲವು ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದರೂ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಒಟ್ಟು ದಂಡದ ಮೊತ್ತ ಬರೋಬ್ಬರಿ 51,000 ರೂ. ಆಗಿತ್ತು. ಇದೀಗ ರಕ್ಷಿತ್ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತವನ್ನು ಶೇ. 50 ರಿಯಾಯಿತಿಯೊಂದಿಗೆ 25,500 ರೂ ಪಾವತಿಸಿದ್ದಾನೆ.