ಬ್ರಿಟನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಗುಲಾಮಗಿರಿ ! – ಕರಾಳ ಸತ್ಯ ಬಯಲಾಗಿದ್ದೇಗೆ?  

ಬ್ರಿಟನ್ ನಲ್ಲಿ ಭಾರತೀಯ ವಿದ್ಯಾರ್ಥಿಗಳ ಗುಲಾಮಗಿರಿ ! – ಕರಾಳ ಸತ್ಯ ಬಯಲಾಗಿದ್ದೇಗೆ?  

ನವದೆಹಲಿ: ಸಮಾಜದಲ್ಲಿನ ದುರ್ಬಲರ ಪಾಲಿಗೆ ಕರಾಳ ಕೋಟೆಯಂತಿರುವ ಗುಲಾಮಗಿರಿ ಜಗತ್ತಿನಲ್ಲಿ ಇನ್ನೂ ಜೀವಂತವಾಗಿದೆ. ಬೆದರಿಕೆ, ದಬ್ಬಾಳಿಕೆ, ಅಧಿಕಾರ ದುರುಪಯೋಗ, ಶೋಷಣೆ ಹೀಗೆ ನಾನಾ ರೂಪದಲ್ಲಿ ಕೆಳವರ್ಗದವರನ್ನು ಕಾಡುತ್ತಿದೆ. ಇದೀಗ ಭಾರತೀಯ ವಿದ್ಯಾರ್ಥಿಗಳು ಬ್ರಿಟನ್ ನಲ್ಲಿ ಗುಲಾಮಗಿರಿಗೆ ಗುರಿಯಾಗಿದ್ದಾರೆ ಅನ್ನೋ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಕೇರ್ ಹೋಮ್ ಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಬ್ರಿಟನ್ ನಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದಾರೆ. ಭಾರತದಿಂದ ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಅಂತಾ ವರದಿಯಾಗಿದೆ.

ಇದನ್ನೂ ಓದಿ: ಟ್ರಾಫಿಕ್ ಫೈನ್ 50% ಡಿಸ್ಕೌಂಟ್ ಗೆ ಇಂದು ಕಡೇ ದಿನ – ಪೊಲೀಸರಿಗೆ ಶುರುವಾಯ್ತು ಹೊಸ ತಲೆಬಿಸಿ?

ಮ್ಯಾಥ್ಯೂ ಐಸಾಕ್ (32), ಜಿನು ಚೆರಿಯನ್ (30), ಎಲ್ದೋಸ್ ಚೆರಿಯನ್ (25), ಎಲ್ದೋಸ್ ಕುರಿಯಾಚನ್ (25), ಮತ್ತು ಜಾಕೋಬ್ ಲಿಜು (47) ಈ ಐವರು  ನಾರ್ತ್ ವ್ಹೇಲ್ಸ್ ನಲ್ಲಿ ಕೇರ್ ಹೋಮ್ಸ್ ಗಳಲ್ಲಿ ಕೆಲಸಕ್ಕೆ ದುರ್ಬಲ ಭಾರತೀಯ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಂಡು ಶೋಷಣೆಗೆ ಒಳಪಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಐವರ ವಿರುದ್ಧ ಗುಲಾಮಗಿರಿ ಮತ್ತು ಕಳ್ಳಸಾಗಣೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.

ಜಿಎಲ್ಎಎ ವರದಿ ಪ್ರಕಾರ 50ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದಾರೆ. ಸುಮಾರು 14 ತಿಂಗಳಿನಿಂದ ಕಾರ್ಮಿಕ ನಿಂದನೆಗೆ ಒಳಗಾಗಿದ್ದಾರೆ.

ಜಿಎಲ್ ಎಎ  ವರದಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಹೈ ಕಮಿಷನ್, ಈ ಸುದ್ದಿಯನ್ನು ಗಮನಿಸಿ ಆತಂಕವಾಗಿದ್ದು, ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು pol3.london@mea.gov.in ಮೂಲಕ ನಮ್ಮನ್ನು ಸಂಪರ್ಕಿಸಬಹುದು. ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಟ್ವೀಟ್ ಮಾಡಿದೆ.

 

suddiyaana