ಉತ್ಸವದ ವೇಳೆ ನಡೆಯಿತು ದುರಂತ – ದೇವಸ್ಥಾನದ ಕೊಳದಲ್ಲಿ ಮುಳುಗಿ 5 ಮಂದಿ ಸಾವು

ಉತ್ಸವದ ವೇಳೆ ನಡೆಯಿತು ದುರಂತ – ದೇವಸ್ಥಾನದ ಕೊಳದಲ್ಲಿ ಮುಳುಗಿ 5 ಮಂದಿ ಸಾವು

ಚೆನ್ನೈ: ಉತ್ಸವದ ವೇಳೆ ದೇವಸ್ಥಾನದ ಕೊಳದಲ್ಲಿ ಮುಳುಗಿ ಐವರು ಧಾರುಣವಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಚೆನ್ನೈನ ಉಪನಗರವಾದ ಕೀಲ್ಕತ್ತಲೈ ಬಳಿಯ ಮೂವರ್ ಸಂಪೇಟ್ ನಲ್ಲಿ ಬುಧವಾರ ನಡೆದಿದೆ.

ಕೀಲ್ಕತ್ತಲೈ ಬಳಿಯ ಮೂವರ್ ಸಂಪೇಟ್ ನಲ್ಲಿನ ಧರ್ಮಲಿಂಗೇಶ್ವರ ದೇವಸ್ಥಾನದಲ್ಲಿ ತೀರ್ಥವಾರಿ ಉತ್ಸವ ನಡೆಯುತ್ತಿರುವ ವೇಳೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಮಡಿಪಾಕ್ಕಂನ ರಾಘವನ್, ಕೀಲ್ಕತ್ತಲೈನ ಯೋಗೇಶ್ವರನ್ ಮತ್ತು ನಂಗನಲ್ಲೂರಿನ ವನೇಶ್, ರಾಘವನ್ ಮತ್ತು ಆರ್.ಸೂರ್ಯ ಅಂತಾ ಗುರುತಿಸಲಾಗಿದೆ.

ಇದನ್ನೂ ಓದಿ: ರೈಲಿನಲ್ಲಿ ಮೂವರ ಸಾವಿಗೆ ಕಾರಣನಾದವನ ಬಂಧನ

ತೀರ್ಥವಾರಿ ಉತ್ಸವಕ್ಕೆಂದು ಕೊಳದಲ್ಲಿ ಅರ್ಚಕರು ಸೇರಿದಂತೆ ಸುಮಾರು 25 ಮಂದಿ ಸುತ್ತಾಗಿ ನಿಂತು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಓರ್ವ ಕೊಳದಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಣೆ ಮಾಡಲು ಉಳಿದ ನಾಲ್ವರು ಹೋಗಿದ್ದು, ಅವರು ಕೂಡ ನೀರುಪಾಲಾಗಿದ್ದಾರೆ.

ಸದ್ಯ ಮೃತದೇಹವನ್ನು ಹೊರ ತೆಗದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ  ಪರಿಶೀಲನೆ ನಡೆಸುತ್ತಿದ್ದಾರೆ.

suddiyaana