40 ಚೂಯಿಂಗ್ ಗಮ್ ನುಂಗಿದ್ದ 5 ವರ್ಷದ ಬಾಲಕ – ತೀವ್ರ ಹೊಟ್ಟೆನೋವು.. ಮುಂದೇನಾಯ್ತು ಗೊತ್ತಾ..?

40 ಚೂಯಿಂಗ್ ಗಮ್ ನುಂಗಿದ್ದ 5 ವರ್ಷದ ಬಾಲಕ – ತೀವ್ರ ಹೊಟ್ಟೆನೋವು.. ಮುಂದೇನಾಯ್ತು ಗೊತ್ತಾ..?

ಬೇಡ ಎಂದಿದ್ದರ ಮೇಲೆಯೇ ಮಕ್ಕಳಿಗೆ ಆಸೆ ಜಾಸ್ತಿ. ಹಠ ಮಾಡಿಯಾದರೂ ತಮಗೆ ಬೇಕೆನಿಸಿದ್ದನ್ನ ಪಡೆದೇ ತೀರುತ್ತಾರೆ. ಅದರಲ್ಲೂ ಚಾಕೋಲೆಟ್, ಚೂಯಿಂಗ್ ಗಮ್ ಅಂದರೆ ಕೊಡಿಸೋವರೆಗೂ ಬಿಡೋದಿಲ್ಲ. ಚೂಯಿಂಗ್ ಗಮ್ ಬೇಡ ನುಂಗಬಾರದು ಅಗೆದು ಉಗಿಯಬೇಕು. ನುಂಗಿದರೆ ಗಂಟಲಲ್ಲಿ ಸಿಲುಕಿಕೊಳ್ಳುತ್ತದೆ ಆಮೇಲೆ ಅಪಾಯವಾಗುತ್ತದೆ ಎಂದು ಹೇಳಿದರೂ ಕೇಳುವುದಿಲ್ಲ. ಹೀಗೆಯೇ ಇಲ್ಲೊಬ್ಬ ಬಾಲಕ ಮಾತು ಕೇಳದೆ ಎಡವಟ್ಟು ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಈ ಹಳ್ಳಿಗೆ ಹೋದರೆ ಕಾರು, ಬಂಗಲೆ ಎಲ್ಲಾನೂ ಫ್ರೀ! – ಸೂಪರ್‌ ವಿಲೇಜ್ ಬಗ್ಗೆ ನಿಮಗೆ ಗೊತ್ತಾ?

ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚೂಯಿಂಗ್‌ ಗಮ್‌ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ  ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ತಪಾಸಣೆ ನಡೆಸಿ ಆತನ ಹೊಟ್ಟೆ ಭಾಗವನ್ನ ಸ್ಕ್ಯಾನ್‌ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಚೂಯಿಂಗ್‌ ಗಮ್‌ ನುಂಗಿರುವುದು ಪತ್ತೆಯಾಗಿದೆ. ಜೀರ್ಣವಾಗದ ಈ ಪದಾರ್ಥ ಬಾಲಕನ ಜಠರದಲ್ಲಿ ಜೀರ್ಣಕ್ರಿಯೆಗೆ ಸಮಸ್ಯೆ ಉಂಟುಮಾಡಿದೆ ಎಂದು ಡಾಕ್ಟರ್ಸ್ ತಿಳಿಸಿದ್ದಾರೆ. ವೈದ್ಯರು ಬಾಲಕನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚೂಯಿಂಗ್‌ ಗಮ್ ತೆಗೆದುಹಾಕಿದ್ದಾರೆ. ಚಿಕಿತ್ಸೆಯಿಂದ ಬಾಲಕನಿಗೆ ಸದ್ಯದ ಮಟ್ಟಿಗೆ ಗಂಟಲು ನೋವಿದ್ದರೂ, ದೀರ್ಘಾವಧಿಯ ಆರೋಗ್ಯ ಸಮಸ್ಯೆ ಇರಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆ ಬಳಿಕ ಬಾಲಕನನ್ನು ಡಿಸ್ಚಾರ್ಜ್‌ ಮಾಡಲಾಗಿದೆ. ಚೂಯಿಂಗ್ ಗಮ್ ನುಂಗಿದರೆ ಸುಮಾರು 40 ಗಂಟೆಗಳವರೆಗೆ ದೇಹದಲ್ಲಿರುತ್ತದೆ. ನಂತರ ಮಲದ ಮುಖಾಂತರ ಹೊರಬರುತ್ತದೆ ಎಂದು ಅಮೆರಿಕದ ಡಯೆಟಿಷಿಯನ್‌ ಬೆತ್‌ ಸೆರ್ವೊನಿ ತಿಳಿಸಿದ್ದಾರೆ.

suddiyaana