ವಿಷದ ಮಾಂಸ ತಿಂದು ಹುಲಿಗಳು ಸಾವು – 5 ಜನ ವಶಕ್ಕೆ, ಪೊಲೀಸರಿಂದ ಗ್ರಾಮಸ್ಥರ ವಿಚಾರಣೆ

ವಿಷದ ಮಾಂಸ ತಿಂದು ಹುಲಿಗಳು ಸಾವು –  5 ಜನ ವಶಕ್ಕೆ, ಪೊಲೀಸರಿಂದ ಗ್ರಾಮಸ್ಥರ ವಿಚಾರಣೆ

ಮಲೆಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳು ವಿಷ ಪ್ರಾಷನದಿಂದಲೇ ಮೃತ ಪಟ್ಟಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದ್ದಾರೆ. ತಾಯಿ ಹುಲಿಗೆ 8 ವರ್ಷ ಆಗಿದ್ದರೆ ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಪಟ್ಟಿದೆ. ಯಾವ ಪ್ರಮಾಣದ ವಿಷ? ಹುಲಿ ಭೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದ್ಯಾ? ಅಥವಾ ಮೊದಲೇ ಹಸುವಿಗೆ ವಿಷ ಪ್ರಾಷನ ಮಾಡಲಾಗಿತ್ತಾ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ ಎಂದು ತಿಳಿಸಿದರು.

ಹುಲಿ ಹಸುವಿನ ಹಿಂಬಂದಿಯಿಂದ  ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್ ಕಳುಹಿಸಲಾಗಿದೆ. ಮೂರು ದಿನದ ಹಿಂದೆ ಹುಲಿ ಸಾವನ್ನಪ್ಪಿದ್ದು ಇದಕ್ಕೆ ಯಾರು ಹೊಣೆಗಾರರು ಎಂಬುದನ್ನ ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ ಎಂದ್ರು.

ವಾಚರ್ ಗಳಿಗೆ ಸಂಬಳ ತಡವಾಗಿದೆ ಎಂಬುದಕ್ಕೆ ಗಸ್ತು ಮಾಡಿಲ್ಲ ಎಂಬ ಆರೋಪಗಳು ಇವೆ. ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಹಸು ಯಾರದ್ದು ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಈ ಹಸು ತಮಿಳುನಾಡಿನಿಂದ ಬಂದಿರುವುದಾ ಅಥವಾ ಸ್ಥಳೀಯರದ್ದ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ ಎಂದು ವಿವರಿಸಿದ್ದಾರೆ. ಇನ್ನೂ ಹುಲಿ ಸಾವು ಸಂಬಂಧ ಮೀಣ್ಯಂ ಅರಣ್ಯ ಪ್ರದೇಶ ಸಮೀಪದ ಗ್ರಾಮಸ್ಥರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಪೊಲೀಸರು ಗ್ರಾಮಸ್ಥರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಾಹಿತಿ ಕಲೆಹಾಕುತ್ತಿದ್ದಾರೆ.

Kishor KV