ಬೆಂಗಳೂರಿನ ಶಂಕಿತ ಉಗ್ರರಿಗೆ ವಿದೇಶದಿಂದ ಫಂಡ್ – ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ

ಬೆಂಗಳೂರಿನ ಶಂಕಿತ ಉಗ್ರರಿಗೆ ವಿದೇಶದಿಂದ ಫಂಡ್ – ತನಿಖೆ ವೇಳೆ ಬಯಲಾಯ್ತು ಬೆಚ್ಚಿ ಬೀಳಿಸುವ ಸತ್ಯ

ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದ ಬಳಿಕ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಬಂಧಿತ ಆರೋಪಿಗಳಿಗೆ ಹಣದ ಮೂಲ ಹಾಗೂ ಸಿಕ್ಕ ಜೀವಂತ ಗುಂಡುಗಳು ಬೇರೆಯದ್ದೆ ಕಥೆ ಹೇಳುತ್ತಿವೆ. ಬಂಧಿತರ ಬಳಿ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್​ಗಳು ಸಿಕ್ಕಿವೆ. ಇವುಗಳನ್ನೆಲ್ಲ ಖರೀದಿಸಲು ಖುದ್ದು ಎ2 ಆರೋಪಿ ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಫಂಡ್ ಕೊಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.

2017 ರಲ್ಲಿ ಕೊಲೆ ಕೇಸ್ ಬಳಿಕ 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, 2021ರಲ್ಲಿ ಜೈಲಿಂದ ರಿಲೀಸ್ ಆದ್ಮೇಲೆ ನಾಪತ್ತೆಯಾಗಿದ್ದ. ಈಗ ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ರೂಪಿಸಿರುವ ಆತಂಕ ಮೂಡಿಸಿದೆ.. ಶಸ್ತ್ರಾಸ್ತ್ರ ಖರೀದಿಗೆ ಹಣ ಕೊಡುತ್ತಿದ್ದು, ಈ ಪಿಸ್ತೂಲ್, ಗುಂಡುಗಳು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಬಂದಿರಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ದೊಡ್ಡ ಸಂಚು – ಐವರು ಶಂಕಿತ ಉಗ್ರರನ್ನ ಬಂಧಿಸಿದ ಸಿಸಿಬಿ ಪೊಲೀಸರು

ಸಿಸಿಬಿ ವಶಕ್ಕೆ ಪಡೆದಿರುವ ಪಿಸ್ತೂಲ್ ಮತ್ತು ಗುಂಡುಗಳು ಎರಡು ಮಾದರಿಯವು. ಒಂದು ಹೊರಗಿನ ಮಾರ್ಕೆಟ್​ನಲ್ಲಿ ಸೇಲ್ ಮಾಡಿದ್ರೆ, 15 ಗುಂಡುಗಳು ಒಪನ್ ಮಾರ್ಕೆಟ್​ನಲ್ಲಿ ಸೇಲ್ ಮಾಡುವಂತವು. ಈ ಗುಂಡುಗಳನ್ನ ಪೊಲೀಸರು, ಮಿಲಿಟರಿ ಮತ್ತು ವಿದೇಶಿ ಟೆರರ್ ಸಂಘಟನೆಗಳು ಬಳಸುತ್ತವೆ. ಇವು 303 ಹೆವೀ ರೈಫಲ್​ಗಿಂತ ಕೆಳ ಹಂತದ ವೆಪನ್​ಗೆ ಬಳಸುವ ಗುಂಡುಗಳಾಗಿವೆ. ಸದ್ಯಕ್ಕೆ ಸಿಸಿಬಿ ಪೊಲೀಸರ ತನಿಖೆ ವೇಳೆ ಮೂರು ಹಂತದಲ್ಲಿ ಈ ಮಾಡ್ಯೂಲ್ ಆಪರೇಟ್ ಆಗಿರುವುದು ಕಂಡು ಬಂದಿದೆ.

ಇನ್ನು ಕಾರ್ಯಚರಣೆ ವೇಳೆ ಶಂಕಿತ ಉಗ್ರರ ಬಳಿ ಸಿಕ್ಕಿರುವ ವಾಕಿಟಾಕಿ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿವೆ. ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಕಾಡಿನಲ್ಲಿ ಟ್ರೈನಿಂಗ್ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡದ ಮೇಲೆ ಅಟ್ಯಾಕ್ ಮಾಡಿದಾಗ ಪೊಲೀಸರು ಎಂಟ್ರಿ ಕೊಟ್ರೆ ಜಾಮರ್ ಬಳಸುತ್ತಾರೆ. ಈ ವೇಳೆ ಮೊಬೈಲ್ ವರ್ಕ್ ಆಗುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ವಾಕಿಟಾಕಿ ಬಳಕೆ ಮಾಡುವ ಸಾದ್ಯತೆ ಇದೆ. ಮುಂಬೈ ಅಟ್ಯಾಕ್ ಮಾದರಿಯಲ್ಲಿ ಕೃತ್ಯ ಎಸಗಿದ್ರೆ ವಾಕಿಟಾಕಿ ಸಹಾಯಕಾರಿ. ಹೀಗಾಗಿ ಬಂಧಿತರ ಅಸಲಿ ಪ್ಲ್ಯಾನ್​ ಏನು ಎಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಎನ್​ಐಎ ಅಧಿಕಾರಿಗಳು ಸಹ ಸಿಸಿಬಿ ತನಿಖೆಯ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅವಶ್ಯಕತೆ ಇದ್ದಲಿ ಕೇಸ್ ಮುಂದಿನ ಹಂತದಲ್ಲಿ ಎನ್ ಐ ಎ ತನಿಖೆ ನಡೆಸುವ ಸಾದ್ಯತೆಗಳಿವೆ.

suddiyaana