ಆಂಧ್ರಪ್ರದೇಶ & ತೆಲಂಗಾಣದಲ್ಲಿರೋ ಈ 5 ಶಿವನ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ

ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಶಿವನ ದೇವಸ್ಥಾನಗಳಿವೆಯಾದರೂ, ಅಚ್ಚರಿಯನ್ನು ಹುಟ್ಟಿಸುವ ದೇವಸ್ಥಾನಗಳು ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯು ಇವೆ. ಹಾಗಾದರೆ ಆ ದೇವಸ್ಥಾನಗಳು ಯಾವುದು ಅನ್ನೋದ್ದನ್ನ ನೋಡೋಣ.
ತ್ರಿಕೂಟೇಶ್ವರ ದೇವಸ್ಥಾನ: ಕಾಗೆಗಳಿಲ್ಲದ ದೇವಸ್ಥಾನ
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್‌ಪೇಟೆಯಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿ ಒಂದು ಪ್ರಾಚೀನ ಶಿವಾಲಯವಿದೆ. ಈ ದೇವಸ್ಥಾನಕ್ಕೆ ದೇಶದ ಹಲವು ಮೂಲಗಳಿಂದ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಅಪಾರ ಸಂಖ್ಯೆಯ ಭಕ್ತರು ತ್ರಿಕೋಟೇಶ್ವರನನ್ನು ಪೂಜಿಸಲು ಬರುತ್ತಾರೆ. ವಿಚಿತ್ರ ಏನಪ್ಪಾ ಅಂದ್ರೆ, ಈ ದೇವಸ್ಥಾನದ ಆಸುಪಾಸಿನಲ್ಲಿ ನೀವು ಒಂದೇ ಒಂದು ಕಾಗೆಗಳನ್ನು ನೋಡುವುದಿಲ್ಲ. ಅದಕ್ಕಾಗಿಯೇ ಈ ಕೋಟೆಪ್ಪ ಬೆಟ್ಟವನ್ನು ‘ಕಾಗೆಗಳ ಬೆಟ್ಟ’ ಎಂದು ಕರೆಯಲಾಗುತ್ತದೆ. ಇಲ್ಲಿ ನೆಲೆಸಿರುವ ಸ್ವಾಮಿಯನ್ನು ಭೇಟಿ ಮಾಡಿದರೆ ಕುಟುಂಬ ಜೀವನದಲ್ಲಿ ಸಂತೋಷ, ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಅನೇಕ ಭಕ್ತರಲ್ಲಿದೆ. ಮುಖ್ಯವಾಗಿ ಕಾರ್ತಿಕ ಮಾಸದಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.
ಶ್ರೀಶೈಲಂ ದೇವಸ್ಥಾನ
ದಕ್ಷಿಣ ಭಾರತದ ಪ್ರಸಿದ್ದ ಶೈವ ಕ್ಷೇತ್ರವಾದ ಶ್ರೀಶೈಲಂ ದೇವಸ್ಥಾನವನ್ನು ‘ಶ್ರೀಶೈಲಂ ಮಲ್ಲಣ್ಣ ದೇವಸ್ಥಾನ’ ಎಂದೂ ಸಹ ಕರೆಯುತ್ತಾರೆ. ಇದು ಪವಿತ್ರ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 2 ನೇ ಶತಮಾನದಲ್ಲಿ ವಿಜಯನಗರ ರಾಜರು ನಿರ್ಮಿಸಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಈ ದೇವಾಲಯದಲ್ಲಿನ ಶಿವಲಿಂಗಕ್ಕೆ ವಿಜಯನಗರ ರಾಜರು ಮಾತ್ರ ಪೂಜಿಸಲಿಲ್ಲ, ಜೊತೆಗೆ ಕಾಕತೀಯ ರಾಜರು ಸಹ ಈ ದೇವಾಲಯವನ್ನು ಪೂಜಿಸಿದರು. ಈ ಶಿವ ದೇವಾಲಯಗಳಿಗೆ ಭೇಟಿ ನೀಡುವುದರಿಂದ ತಮ್ಮ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ಛಾಯಾ ಸೋಮೇಶ್ವರ ಸ್ವಾಮಿ ದೇವಸ್ಥಾನ
ಆಂಧ್ರಪ್ರದೇಶ ರಾಜ್ಯದ ಛಾಯಾ ಸೋಮೇಶ್ವರ ಸ್ವಾಮಿ ದೇವಸ್ಥಾನವು ನಲ್ಲಗೊಂಡ ಜಿಲ್ಲೆಯಲ್ಲಿದ್ದು, ಹೈದರಾಬಾದ್‌ನಿಂದ ಸುಮಾರು 102 ಕಿಲೋಮೀಟರ್ ದೂರದಲ್ಲಿದೆ. ಈ ದೇವಾಲಯವನ್ನು 11 ಮತ್ತು 12 ನೇ ಶತಮಾನಗಳಲ್ಲಿ ಇಕ್ಷ್ವಾಕು ರಾಜವಂಶದವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ನಡೆಯುವ ವಿಚಿತ್ರವೇನೆಂದರೆ, ಶಿವಲಿಂಗವು ಪ್ರತಿದಿನ ಶಾಶ್ವತ ನೆರಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಈ ದೇವಾಲಯಕ್ಕೆ ಛಾಯಾ ಸೋಮೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ರಾಮಪ್ಪ ದೇವಾಲಯ
ತೆಲುಗು ದೇಶದಲ್ಲಿರುವ ಅತ್ಯಂತ ಪ್ರಮುಖ ಶಿವ ದೇವಸ್ಥಾನಗಳಲ್ಲಿ ಈ ರಾಮಪ್ಪ ದೇವಾಲಯವು ಒಂದಾಗಿದೆ. ಈ ಹಳೆಯ ದೇವಸ್ಥಾನವನ್ನು 8 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ. ಇದು ವಿಶ್ವ ಪರಂಪರೆಯ ತಾಣವೆಂದು ಗುರುತಿಸಲಾಗಿದೆ. ವಾಸ್ತುಶಿಲ್ಪಿಯ ಹೆಸರನ್ನು ಹೊಂದಿರುವ ವಿಶ್ವದ ಏಕೈಕ ಶಿವ ದೇವಾಲಯ ಇದಾಗಿದ್ದು, ಕಾಕತೀಯರ ಕಾಲದಲ್ಲಿ ನಿರ್ಮಿಸಲಾಗಿರುವ ಅದ್ಭುತ ಶಿವಾಲಯವಾಗಿದೆ.

ನೋಡಿರಿ

