ICC ಟೂರ್ನಿಗಳಂದ್ರೆ ಇಂಡೋ-ಪಾಕ್ ಫೈಟ್ ಫಿಕ್ಸ್ – ಒಂದು ಪಂದ್ಯದಿಂದ ಅದೆಷ್ಟು ಲಾಭ?

ಭಾರತೀಯರ ಪಾಲಿಗೆ ಈ ಸಂಡೇ ಸೂಪರ್ ಡೂಪರ್ ಸಂಡೇ.. ಒಂದ್ಕಡೆ ಕ್ರಿಕೆಟ್ ಅಭಿಮಾನಿಗಳಿಗೆ ಇಂಡೋ-ಪಾಕ್ ಫೈಟ್ ಹಬ್ಬ.. ಇನ್ನೊಂದ್ಕಡೆ ಮಹಾಶಿವರಾತ್ರಿ ಹಬ್ಬ.. ಲಂಕಾದಲ್ಲಿ ನಡೆಯಲಿಯೋ ಈ ಹೈವೋಲ್ಟೇಜ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸಮರ ನೋಡೋಕೆ ಇಡೀ ಜಗತ್ತೇ ಕಾಯ್ತಿದೆ. ಌಂಡ್ ನಿಮ್ಗೆಲ್ಲಾ ಅನ್ನಿಸ್ಬೋದು ಐಸಿಸಿ ಈವೆಂಟ್ಸ್ ಅಂತಾ ಬಂದಾಗ ಯಾಕೆ ಭಾರತ ಮತ್ತು ಪಾಕ್ ಪಂದ್ಯ ಇದ್ದೇ ಇರುತ್ತೆ ಅಂತಾ. ಅದಕ್ಕೆ ಒಂದಷ್ಟು ರೀಸನ್ಸ್ ಇದೆ.
ಇದನ್ನೂ ಓದಿ : AUSಗೆ ಮಣ್ಣು ಮುಕ್ಕಿಸಿದ ಜಿಂಬಾಬ್ವೆ – ಕೂಸಿನೆದುರು ಗೆದ್ದೇ ಇಲ್ಲ ಕಾಂಗರೂ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಈ ಪಂದ್ಯ ಅಂದ್ರೆ ಕೇಳ್ಬೇಕಾ ಮೈದಾನದ ಒಳಗೂ ಹೊರಗೂ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಆಡ್ತಾರೆ ನೋಡ್ತಾರೆ. ದ್ವಿಪಕ್ಷೀಯ ಸರಣಿಗಳು ಬಂದ್ ಆದ್ಮೇಲೆ ಇಬ್ಬರೂ ಐಸಿಸಿ ಮತ್ತು ಏಷ್ಯಾಕಪ್ನಲ್ಲಿ ಮಾತ್ರ ಮುಖಾಮುಖಿ ಆಗ್ತಿದ್ದಾರೆ. ಌಂಡ್ ಐಸಿಸಿ ಈವೆಂಟ್ಸ್ ಅಂತಾ ಬಂದಾಗ ಒಂದಲ್ಲ ಒಂದು ಪಂದ್ಯ ಇಂಡೋ-ಪಾಕ್ ನಡುವೆ ಇರ್ಲೇಬೇಕು. ಅದ್ರಲ್ಲೂ 2012ರ ಬಳಿಕ ಐಸಿಸಿ ಟೂರ್ನಿಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಅಟ್ಲೀಸ್ಟ್ ಒಂದು ಪಂದ್ಯನಾದ್ರೂ ಇರ್ಲೇಬೇಕು. ಯಾಕೆ ಇಬ್ಬರನ್ನೂ ಬೇರೆ ಬೇರೆ ಗ್ರೂಪ್ಗೆ ಹಾಕಲ್ಲ ಅಂದ್ರೆ ಅದಕ್ಕೂ ಒಂದಷ್ಟು ರೀಸನ್ಸ್ ಇದೆ.
ನಂಬರ್ 1
ಇಂಡಿಯಾ ಪಾಕ್ ಪಂದ್ಯಗಳಿಗೆ ಮಿಲಿಯನ್ ಗಟ್ಟಲೆ ವೀಕ್ಷಣೆ!
ಇಂಡೋ-ಪಾಕ್ ತಂಡಗಳನ್ನ ಒಂದೇ ಗ್ರೂಪ್ನಲ್ಲಿ ಇಡೋಕೆ ಮುಖ್ಯ ಕಾರಣವೇ ಈ ಪಂದ್ಯಕ್ಕಿರೋ ಕ್ರೇಜ್. ಐಸಿಸಿ ಟೂರ್ನಿಗಳ ಇತಿಹಾಸ ಕೆದಕಿದ್ರೆ ಈ ಪಂದ್ಯಗಳಿಗೆ ಇರುವಂಥ ಕ್ರೇಜ್ ಬೇರೆ ಯಾವ ಫೈನಲ್ ಪಂದ್ಯಗಳಿಗೂ ಸಿಕ್ಕಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ -10 ಪಂದ್ಯಗಳಲ್ಲಿ 6 ಪಂದ್ಯಗಳು ಭಾರತ-ಪಾಕಿಸ್ತಾನ ಪಂದ್ಯಗಳೇ ಆಗಿವೆ. ಭಾರತದಲ್ಲಿ ಈ ಪಂದ್ಯಗಳನ್ನು ಏನಿಲ್ಲ ಅಂದ್ರೂ 20 ರಿಂದ 22 ಕೋಟಿ ಜನ ನೋಡ್ತಾರೆ. ವರ್ಲ್ಡ್ವೈಡ್ 27 ರಿಂದ 28 ಕೋಟಿ ತಲುಪುತ್ತೆ. ಈಗ ಡಿಜಿಟಲ್ ಪ್ಲಾಟ್ಫಾರ್ಮ್ ಇರೋದ್ರಿಂದ ಈ ಸಂಖ್ಯೆ ಇನ್ನೂ ಜಾಸ್ತಿ ಇದೆ. ಹೀಗಾಗೇ ಐಸಿಸಿ ಪ್ರತಿ ಪಂದ್ಯಾವಳಿಯಲ್ಲೂ ಕನಿಷ್ಠ ಒಂದು ಪಂದ್ಯವನ್ನಾದ್ರೂ ಇಬ್ಬರ ನಡುವೆ ಫಿಕ್ಸ್ ಮಾಡುತ್ತೆ. 2019 ರ ಏಕದಿನ ವಿಶ್ವಕಪ್ನಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗಿದ್ದು, ಅವುಗಳನ್ನು ಟಿವಿ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ 706 ಮಿಲಿಯನ್ ವ್ಯೂವರ್ಸ್ ನೋಡಿದ್ರು. ಪ್ರತಿ ಪಂದ್ಯಕ್ಕೆ ಸರಿಸುಮಾರು 14.7 ಮಿಲಿಯನ್ ವೀಕ್ಷಕರ ಲೆಕ್ಕ ಅದು. ಆದ್ರೆ ಭಾರತಪಾಕ್ ಪಂದ್ಯವನ್ನ 270 ಮಿಲಿಯನ್ ವೀಕ್ಷಕರು ನೋಡಿದ್ರು. ಇನ್ನು ಇಂಡೋ-ಪಾಕ್ ನಡುವೆ ಅತೀಹೆಚ್ಚು ವೀಕ್ಷಿಸಲಪ್ಪ ಮ್ಯಾಚ್ ಅಂದ್ರೆ 2011 ರ ವಿಶ್ವಕಪ್ ಸೆಮಿಫೈನಲ್. ಇದನ್ನು ಬರೋಬ್ಬರಿ 495 ಮಿಲಿಯನ್ ಜನ ನೋಡಿದ್ರು. ಸೋ ಅಲ್ಲಿಗೆ ಭಾರತ-ಪಾಕ್ ಅಂದ್ರೆ ಗ್ರೂಪ್ ಸ್ಟೇಜ್, ನಾಕೌಟ್, ಸೆಮೀಸ್ನಲ್ಲೂ ದಾಖಲೆ ಮಟ್ಟದ ವ್ಯೂವರ್ಶಿಪ್ ಸಿಗುತ್ತೆ. ಬೇರೆ ತಂಡಗಳ ಫೈನಲ್ ಪಂದ್ಯಗಳಿಗೂ ಸಿಗದಷ್ಟು ವ್ಯೂಸ್ ಇಲ್ಲಿ ಇರುತ್ತೆ. ಸೋ ಇದು ಕೂಡ ಒಂದು ರೀಸನ್.
ನಂಬರ್ 2
ನೀರಿನಂತೆ ಹರಿಯೋ ಹಣಕ್ಕಾಗಿ ಐಸಿಸಿ ಐಡಿಯಾ!
ಇನ್ನು ಭಾರತ-ಪಾಕ್ ಪಂದ್ಯ ನಡೆದಷ್ಟೂ ಐಸಿಸಿಗೆ ಹಣದ ಹೊಳೆಯೇ ಹರಿಯುತ್ತೆ. ಇದೂ ಕೂಡ ಒಂದು ಕಾರಣ. ಐಸಿಸಿ 2024 ರಿಂದ 2027 ರವರೆಗಿನ ಮಾಧ್ಯಮ ಹಕ್ಕುಗಳನ್ನು ಜಿಯೋಸ್ಟಾರ್ಗೆ 3 ಬಿಲಿಯನ್ ಡಾಲರ್ಗಳಿಗೆ ಅಂದ್ರೆ ಸುಮಾರು 24 ಸಾವಿರ ಕೋಟಿ ರೂಪಾಯಿಗಳಿಗೆ ಸೇಲ್ ಮಾಡಿದೆ. ಇಂಡಿಯಾ-ಪಾಕ್ ಪಂದ್ಯಗಳೇ ಪ್ರಸಾರಕರಿಗೂ ಲಾಭದಾಯಕ. ಹಾಗೇನಾದ್ರೂ ನಾಕೌಟ್, ಸೆಮೀಸ್ ಹಾಗೇ ಫೈನಲ್ನಲ್ಲಿ ಮುಖಾಮುಖಿ ಆಗ್ತಾರೆ ಅನ್ಕೊಂಡ್ರೆ ಯಾವುದಾದ್ರೂ ಒಂಡು ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ರೆ ನಷ್ಟ ಆಗ್ಬೋದು. ಹೀಗಾಗಿ ಗುಂಪು ಹಂತದಲ್ಲಿ ಭಾರತ-ಪಾಕಿಸ್ತಾನ ಪಂದ್ಯಗಳನ್ನು ನಡೆಸುವುದರಿಂದ ಐಸಿಸಿ ಮತ್ತು ಪ್ರಸಾರಕರಿಗೆ ಹೆಚ್ಚಿನ ಟಿಆರ್ಪಿ ಸಿಗುತ್ತೆ. ಌಂಡ್ ಒನ್ ಮೋರ್ ಥಿಂಗ್ ಅಂದ್ರೆ ಆಲ್ಮೋಸ್ಟ್ ಇಂಡೋಪಾಕ್ ಫೈಟ್ ಭಾನುವಾರವೇ ಇರುತ್ತೆ. ಈ ಬಾರಿಯೂ ಇದೇ ಕಾರಣಕ್ಕೆ ಭಾನುವಾರವೇ ಪಂದ್ಯವನ್ನ ಇಡಲಾಗಿದೆ. ಇದ್ರಿಂದ ವೀಕ್ಷಕರ ಸಂಖ್ಯೆ ಇನ್ನೂ ಜಾಸ್ತಿಯಾಗುತ್ತೆ.
ನಂಬರ್ 3
ಟೂರ್ನಿ ಹೋಸ್ಟ್ ಮಾಡುವ ತಂಡಗಳಿಗೂ ಭರ್ಜರಿ ಲಾಭ!
ಭಾರತ-ಪಾಕಿಸ್ತಾನ ಪಂದ್ಯ ಅಂದ್ರೆ ಯಾವಾಗ್ಲೂ ಹೌಸ್ಫುಲ್ ಆಗಿರುತ್ತೆ. ಟಿಕೆಟ್ಗಳ ರೇಟ್ ಎರ್ರಾಬಿರ್ರಿ ಜಾಸ್ತಿ ಇರುತ್ತೆ. ಟೂರ್ನಮೆಂಟ್ನ ಫೈನಲ್ ಪಂದ್ಯದ ಟಿಕೆಟ್ಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತೆ. ಪ್ರಸಾರ ಹಕ್ಕುಗಳು, ಜಾಹೀರಾತು ಮತ್ತು ಡಿಜಿಟಲ್ ವ್ಯೂವರ್ಶಿಪ್ನಲ್ಲೂ ಎಲ್ಲಾ ಪಂದ್ಯಗಳನ್ನೂ ಮೀರಿಸುತ್ತೆ. ಭಾರತ-ಪಾಕಿಸ್ತಾನ ಪಂದ್ಯವು ಇಡೀ ಪಂದ್ಯಾವಳಿಯ ಫೈನಾನ್ಶಿಯಲ್ ಗ್ರಾಫ್ನೇ ಮೇಲೇರಿಸುತ್ತೆ. ಜೊತೆಗೆ ಟೂರ್ನಿ ಹೋಸ್ಟ್ ಮಾಡೋ ರಾಷ್ಟ್ರಗಳಿಗೂ ಭರ್ಜರಿ ಲಾಭ. ಭಾರತಪಾಕ್ ಪಂದ್ಯ ಅಂದ್ರೆ ಎಲ್ಲೇ ಪಂದ್ಯ ನಡೆದ್ರೂ ಸಾವಿರಾರು ಜನ ಆ ರಾಷ್ಟ್ರಕ್ಕೆ ಟ್ರಾವೆಲ್ ಮಾಡ್ತಾರೆ. ಫ್ಲೈಟ್ ಚಾರ್ಜಸ್, ಹೋಟೆಲ್ ರೂಂ ಬುಕ್ಕಿಂಗ್, ಪ್ರವಾಸೋಧ್ಯಮ ಎಲ್ಲವಕ್ಕೂ ಭರ್ಜರಿ ಲಾಭವೇ ಸರಿ. ಫಾರ್ ಎಕ್ಸಾಂಪಲ್ 2015ರ ವಿಶ್ಬಕಪ್ನಲ್ಲಿ ಮೆಲ್ಬೋರ್ನ್ಗೆ ಸುಮಾರು 30 ಸಾವಿರ ಅಭಿಮಾನಿಗಳು ತೆರಳಿದ್ರು. ಇದನ್ನ ನೋಡಿದ್ರೇನೇ ಗೊತ್ತಾಗುತ್ತೆ.
ನಂಬರ್ 4
ಭಾರತ ಮತ್ತು ಪಾಕ್ ಬರೀ ಪಂದ್ಯವಲ್ಲ ಎಮೋಷನ್ಸ್!
ಇನ್ನು ಭಾರತ ಪಾಕ್ ಪಂದ್ಯಕ್ಕಿರೋ ಅತಿದೊಡ್ಡ ಶಕ್ತಿ ಅಂದ್ರೆ ಇದೊಂದು ಎಮೋಷನಲ್ ಗೇಮ್. ಉಭಯ ತಂಡಗಳಿಗೂ ಸೋಲು ಗೆಲುವಿನ ಭಾವನಾತ್ಮಕ ಅನುಬಂಧ ಇರುತ್ತೆ. ಅದು ಮೈದಾನದ ಒಳಗೂ ಹೊರಗೂ. ಹಾಗೇ ಆಟಗಾರರು ಅಲ್ಲಿ ಪ್ರತೀ ಹೆಜ್ಜೆಯಲ್ಲೂ ಅಗ್ರೆಸ್ಸಿವ್ ಆಗಿಯೇ ಸೆಲೆಬ್ರೇಟ್ ಮಾಡ್ತಿರ್ತಾರೆ. 1992 ರ ವಿಶ್ವಕಪ್ನಲ್ಲಿ ಜಾವೇದ್ ಮಿಯಾಂದಾದ್ ಕಿರಣ್ ಮೋರ್ ಅವರನ್ನು ಮಿಮಿಕ್ ಮಾಡಿದ್ದು ಇರ್ಬೋದು ಅಥವಾ 1996 ರ ವಿಶ್ವಕಪ್ನಲ್ಲಿ ಆಮಿರ್ ಸೊಹೈಲ್ ಅವರನ್ನು ಔಟ್ ಮಾಡಿ ವೆಂಕಟೇಶ್ ಪ್ರಸಾದ್ ಸೆಂಡ್ ಆಫ್ ಕೊಟ್ಟಿದ್ದು ವರ್ಷಗಟ್ಟಲೆ ಟ್ರೆಂಡಿಂಗ್ನಲ್ಲಿರುತ್ವೆ. ಈ ಭಾವನಾತ್ಮಕವಾದ ಆಟದಿಂದ ಐಸಿಸಿ ಲಾಭ ಪಡೆಯುತ್ತೆ. ಹೀಗಾಗಿ ಭಾರತ-ಪಾಕಿಸ್ತಾನ ಪಂದ್ಯವು ಕೇವಲ ಕ್ರಿಕೆಟ್ ಆಟವಲ್ಲ, ಗಳಿಕೆ ಮತ್ತು ಕ್ರೇಜ್ ಎರಡರನ್ನೂ ಹಿಡಿದಿಟ್ಟುಕೊಂಡಿದೆ.
ನಂಬರ್ 5
ಕ್ರಿಕೆಟ್ ಲೋಕದ ಹೈವೋಲ್ಟೇಜ್ ಮ್ಯಾಚ್!
ಕ್ರಿಕೆಟ್ ಲೋಕದಲ್ಲಿ ಒನ್ ಆಫ್ ದಿ ಬೆಸ್ಟ್ ರೈವಲ್ರಿ ಅಂದ್ರೆ ಅದು ಇಂಡೋಪಾಕ್ ಫೈಟ್. ಫುಟ್ಬಾಲ್ನಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಅಥವಾ ಬ್ರೆಜಿಲ್ ಮತ್ತು ಅರ್ಜೆಂಟೀನಾ ನಡುವಿನ ಪೈಪೋಟಿಯು ಜಗತ್ತಿನಾದ್ಯಂತ ಹೇಗೆ ಪ್ರಾಮುಖ್ಯತೆ ಹೊಂದಿದೆಯೋ ಹಾಗೇ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಒಂದು ಸಾಂಪ್ರದಾಯಿಕ ಪೈಪೋಟಿಯಾಗಿದೆ. ಹೀಗಾಗಿ ಶೆಡ್ಯೂಲ್ನಲ್ಲಿ ಏನೇ ಆದ್ರೂ ರತ-ಪಾಕಿಸ್ತಾನ ಮುಖಾಮುಖಿಯನ್ನು ಹೊರಗಿಡುವುದು ಈಗ ಅಸಾಧ್ಯವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿಯೇ ಐಸಿಸಿ ಭಾರತ-ಪಾಕ್ ಪಂದ್ಯವನ್ನ ಅಟ್ಲೀಸ್ಟ್ ಒಂದು ಪಂದ್ಯವನ್ನಾದ್ರೂ ಶೆಡ್ಯೂಲ್ ಮಾಡುತ್ತೆ. 2012 ರಿಂದ ಪ್ರತಿ ಐಸಿಸಿ ಪಂದ್ಯಾವಳಿಯಲ್ಲೂ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. 1992 ರಲ್ಲಿ ವಿಶ್ವಕಪ್ ಹಂತದಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಅಂದಿನಿಂದ ಈ 34 ವರ್ಷಗಳಲ್ಲಿ, 9 ಏಕದಿನ ವಿಶ್ವಕಪ್ಗಳು, 9 ಟಿ20 ವಿಶ್ವಕಪ್ಗಳು ಮತ್ತು 9 ಚಾಂಪಿಯನ್ಸ್ ಟ್ರೋಫಿಗಳು ನಡೆದಿವೆ. 27 ಪಂದ್ಯಾವಳಿಗಳಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ 22 ಪಂದ್ಯಗಳು ನಡೆದಿವೆ. ಅದ್ರಲ್ಲಿ ಭಾರತ 18 ಪಂದ್ಯಗಳನ್ನು ಗೆದ್ದಿದ್ರೆ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಹಿಸ್ಟರಿಯನ್ನ ನೋಡಿದಾಗ ಭಾರತವೇ ಕಂಪ್ಲೀಟ್ ಡಾಮಿನೇಟ್ ಮಾಡಿದೆ. ಟಿ-20 ವಿಶ್ವಕಪ್ನಲ್ಲಿ ಭಾರವೇ ಬಾಸ್ ಆಗಿದೆ. ಪಾಕಿಸ್ತಾನ ಜಸ್ಟ್ 1 ಪಂದ್ಯವನ್ನಷ್ಟೇ ಗೆದ್ದಿದೆ. ಈ ಸಲವೂ ಭಾರತವೇ ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

