IND ಟೀಂನಿಂದ ಐವರು ಔಟ್? ಕರುಣ್, ಕಾಂಬೋಜ್‌ಗೆ ಕೈ ತಪ್ಪಿದ ಚಾನ್ಸ್?
ಪ್ರಸಿದ್ಧ್, ಶಾರ್ದೂಲ್‌ಗೆ ಗೇಟ್‌ಪಾಸ್?

ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಜಾದು ಮಾಡಿದೆ. ಸೋಲುವ ಪಂದ್ಯವನ್ನ ಗೆದ್ದು ಸರಣಿ ಸಮಬಲ ಮಾಡಿಕೊಂಡಿದೆ. ಇದ್ದಕ್ಕೆ ಒಬ್ಬರ ಗೆಲುವು ಅನ್ನೋದ್ದಕ್ಕಿಂತ ತಂಡದ ಗೆಲುವು ಅಂತಾನೆ ಹೇಳಬಹುದು. ಕೊಹ್ಲಿ ರೋಹಿತ್ ನಿವೃತ್ತಿಯ ನಂತ್ರ ಗಿಲ್ ಪಡೆ ಅದ್ಭುತವಾಗಿ ಆಡಿದೆ. ಆದ್ರೆ ಕೆಲ ಆಟಗಾರರಿಗೆ ಒಳ್ಳೆಯ ಅವಕಾಶ ಸಿಕ್ಕಿದ್ರೂ ಅವರ ಆ ಚಾನ್ಸ್‌ನ ಸರಿಯಾಗಿ ಬಳಸಿಕೊಂಡಿಲ್ಲ. ಹೀಗಾಗಿ ಕರುಣ್ ನಾಯರ್ ಸೇರಿದಂತೆ ಐವರು ಆಟಗಾರರು ಮುಂದಿನ ಟೆಸ್ಟ್ ಸರಣಿಯಿಂದ ಗೇಟ್ ಪಾಸ್ ಸಿಗೋ ಚಾನ್ಸ್ ಸಿಗೋ ಸಾಧ್ಯತೆಯಿದೆ.
ಮುಂದಿನ ಪಂದ್ಯದಿಂದ ಕರುಣ್ ಔಟ್?
ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಶತಕಗಳ ಸರಮಾಲೆ ಕಟ್ಟಿದ್ದ ಕರುಣ್ ನಾಯರ್ ಇಂಗ್ಲೆಂಡ್ ಸರಣಿಯಲ್ಲಿ ~ಒಂದು ಅರ್ಧ ಶತಕ ಬಾರಿಸಿದ್ದು ಬಿಟ್ರೆ, ಹೇಳಿಕೊಳ್ಳುವಂತಹ ಆಟ ಆಡಿಲ್ಲ.. 8 ವರ್ಷಗಳ ಬಳಿಕ ಭಾರತದ ಬಾಗಿಲು ಕೂಡ ಓಪನ್ ಆಗಿತ್ತು. ಆದ್ರೆ ಆ ಅವಕಾಶ ಕರುಣ್ ನಾಯರ್ ಕೈ ಹಿಡೀತಿಲ್ಲ. 5ನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸೆಂಚುರಿ ಸಿಡಿಸಿದ್ದು ಬಿಟ್ರೆ ಮೊದಲು 3 ಪಂದ್ಯದಲ್ಲಿ ನೆಟ್ಟಗೆ ಆಟ ಆಡಿಲ್ಲ. ನಾಯರ್ 4 ಟೆಸ್ಟ್‌ಗಳ 8 ಇನ್ನಿಂಗ್ಸ್‌ಗಳಲ್ಲಿ ಸುಮಾರು 26 ರ ಸರಾಸರಿಯಲ್ಲಿ 205 ರನ್ ಗಳಿಸಿದ್ದಾರೆ ಅಷ್ಟೇ.. ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಬಿಸಿದ್ರೂ ಸಿಕ್ಕ ಅವಕಾಶವನ್ನ ನಾಯರ್ ಸರಿಯಾಗಿ ಬಳಸಿಕೊಂಡಿಲ್ಲ, ಹೀಗಾಗಿ ಮುಂದಿನ ಸರಣಿಯಲ್ಲಿ ಇವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
ಶಮಿ IN ಪ್ರಸಿದ್ಧ ಕೃಷ್ಣ OUT
ಓವಲ್ ಟೆಸ್ಟ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅದ್ಭುತ ಬೌಲಿಂಗ್ ಮಾಡಿದರು. ಅವರು ಪಂದ್ಯದಲ್ಲಿ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ ಮುಂದಿನ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯುವುದು ಕಷ್ಟ ಅಂತಾನೆ ಹೇಳಬಹುದು.. ಅದ್ದಕ್ಕೆ ಕಾರಣ ಶಮಿ. ಟೀಮ್ ಇಂಡಿಯಾ ತವರು ನೆಲದಲ್ಲಿ ಇಬ್ಬರು ವೇಗಿಗಳಿಗೆ ಮಾತ್ರ ಅವಕಾಶ ನೀಡುತ್ತದೆ. ಹೀಗಾಗಿ ಮೊಹಮ್ಮದ್ ಶಮಿ ಫಿಟ್ ಆಗಿದ್ದರೆ ಪ್ರಸಿದ್ಧ್ ಅವರು ತಂಡದಿಂದ ಹೊರಗುಳಿಯಬೇಕಾಗುತ್ತದೆ.
ಇನ್ನೂ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಅನ್ಶುಲ್ ಕಾಂಬೋಜ್ ಪಾದಾರ್ಪಣೆ ಮಾಡಿದರು. ಅವರಿಂದ ಸಾಕಷ್ಟು ನಿರೀಕ್ಷೆಗಳಿದ್ದವು ಆದರೆ ಅವರು ಸುಮಾರು 5 ಎಕಾನಮಿಯಲ್ಲಿ ರನ್ ನೀಡುವ ಮೂಲಕ ಕೇವಲ ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಅವರ ಸರಾಸರಿ ವೇಗ ಗಂಟೆಗೆ 130 ಕಿ.ಮೀ. ಗಿಂತ ಕಡಿಮೆಯಿತ್ತು.. ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಮುಂದೆ ಇವರಿಗೆ ಅವಕಾಶ ಸಿಗೋದು ಡೌಟ್
ಟೀಂ ಇಂಡಿಯಾದಿಂದ ಶಾರ್ದುಲ್ ಠಾಕೂರ್ ಔಟ್
ವೇಗಿ ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಪರ ಸುಮಾರು ಒಂದೂವರೆ ವರ್ಷಗಳ ನಂತರ ಅ ತಂಡಕ್ಕೆ ಮರಳಿದ್ರು. ಎರಡು ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತು.. ಆದ್ರೆ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳದ ಶಾರ್ದುಲ್ ಕೇವಲ ಎರಡು ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಹೀಗಾಗಿ ಇವರು ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುವುದು ಡೌಟ್. ಒಟ್ನಲ್ಲಿ ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯಕ್ಕೆ ಈ ಐವರನ್ನ ಕೈ ಬಿಡುವುದು ಬಹುತೇಕ ಫಿಕ್ಸ್ ಅಂತಾನೆ ಹೇಳಲಾಗುತ್ತಿದೆ.

ನೋಡಿರಿ

