ಟಾಸ್.. ಚೇಸಿಂಗ್.. ಬೌಲಿಂಗ್ ಟಾಸ್ಕ್ – CSK ಮಣಿಸಲು RCBಗೆ 5 ಸವಾಲು
ಕೊಹ್ಲಿ ಕೆರಳಿದ್ರೆ ಧೋನಿ ಪಡೆ OUT
ಐಪಿಎಲ್ ಸೀಸನ್ 17 ಪ್ಲೇ ಆಫ್ಗೆ ಈಗಾಗ್ಲೇ ಮೂರು ತಂಡಗಳು ಫೈನಲ್ ಆಗಿವೆ. ಉಳಿದಿರೋ 1 ಸ್ಥಾನಕ್ಕಾಗಿ ಶನಿವಾರ ಬೆಂಗಳೂರು ಮತ್ತು ಚೆನ್ನೈ ನಡುವೆ ನಿರ್ಣಾಯಕ ಪಂದ್ಯ ನಡೆಯಲಿದೆ. ಈ ಮ್ಯಾಚ್ನಲ್ಲಿ ಗೆದ್ದವ್ರು ಟಾಪ್ 4ಗೆ ಎಂಟ್ರಿ ಕೊಡಲಿದ್ದಾರೆ. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲೇ ಇರೋ ಸಿಎಸ್‌ಕೆ ತಂಡ ಆರ್‌ಸಿಬಿ ವಿರುದ್ಧ ಗೆದ್ರೆ ಸಾಧಿಸಿದ್ರೆ ನೇರವಾಗಿ ಪ್ಲೇ ಆಫ್ಗೆ ಕ್ವಾಲಿಫೈ ಆಗಲಿದೆ. ಆದ್ರೆ ಆರ್‌ಸಿಬಿ ಸ್ಥಿತಿ ಹೀಗಿಲ್ಲ. ಚೆನ್ನೈ ವಿರುದ್ಧ ಸಾಧಾರಣ ಗೆಲುವು ಸಾಕಾಗೋದಿಲ್ಲ. ಭರ್ಜರಿ ರನ್ಗಳ ಅಂತರದಲ್ಲೇ ವಿಕ್ಟರಿ ಪಡೀಬೇಕು. ಇದೇ ಕಾರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದೆ ಸಾಲು ಸಾಲು ಸವಾಲುಗಳಿವೆ. ಅಷ್ಟಕ್ಕೂ ಚೆನ್ನೈಯನ್ನ ಮಣಿಸಲು ಬೆಂಗಳೂರು ತಂಡಕ್ಕಿರೋ ಚಾಲೆಂಜಸ್ ಏನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್ ಮ್ಯಾಚ್ – ಈ ರಸ್ತೆಯಲ್ಲಿ ಸಂಚಾರದಲ್ಲಿ ಭಾರಿ ಬದಲಾವಣೆ
ಆರ್ಬಿಸಿ ವರ್ಸಸ್ ಸಿಎಸ್‌ಕೆ ಬಿಗ್ ಬ್ಯಾಟಲ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಧೋನಿ ಮತ್ತು ಕೊಹ್ಲಿ ನಡುವಿನ ಕದನ ನೋಡೋಕೆ ಕ್ರಿಕೆಟ್ ಲೋಕವೇ ಕಾಯ್ತಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿ ಅಂಗಳದಲ್ಲಿ ಲಾಯಲ್ ಫ್ಯಾನ್ಸ್ ಎದುರು ಹೈಪ್ರೆಷರ್ ಗೇಮ್ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾದ ಪ್ರೆಶರ್ನಲ್ಲಿದೆ. ಸತತ 5 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿದೆ ನಿಜ. ಆದ್ರೂ ಸಿಎಸ್‌ಕೆ ಎದುರು ಶನಿವಾರ ಗೆಲ್ಲೋದು ಟಫ್ ಟಾಸ್ಕ್. ಹಿಂದಿನ ಐಪಿಎಲ್ ಸೀಸನ್ಗಳಲ್ಲಿ ಚೆನ್ನೈ ಎದುರು ಕಳಪೆ ರೆಕಾರ್ಡ್ ಹೊಂದಿರೋ ಆರ್ಸಿಬಿಗೆ ಸಾಮಾನ್ಯವಾದ ಜಯ ಸಾಧಿಸೋದೆ ಸವಾಲಿನ ವಿಚಾರ. ಹೀಗಿರುವಾಗ ಮೇ 18ರಂದು ಭರ್ಜರಿ ಗೆಲುವನ್ನ ಸಾಧಿಸಬೇಕಿದೆ. ಜಯದ ಜೊತೆಗೆ ರನ್ರೇಟ್ ಹೆಚ್ಚಿಸಿಕೊಂಡರೆ ಮಾತ್ರ ಪ್ಲೇ ಆಫ್ ಡೋರ್ ಓಪನ್ ಆಗಲಿದೆ. ಇದೆಲ್ಲಾ ಸಾಧ್ಯವಾಗಬೇಕಂದ್ರೆ ಹಲವು ಸವಾಲುಗಳನ್ನ ಆರ್‌ಸಿಬಿ ಮೆಟ್ಟಿನಿಲ್ಲಬೇಕಿದೆ.
ಚಾಲೆಂಜ್ ನಂಬರ್ 1 – ಟಾಸ್ ಗೆದ್ದು ಫಸ್ಟ್ ಬೌಲಿಂಗ್ ಆಯ್ಕೆ ಮಾಡಿಕೊಳ್ಬೇಕು
ಆರ್ಸಿಬಿಗೆ ಇರೋ ಮೊದಲನೇ ಚಾಲೆಂಜ್ ಅಂದ್ರೆ ಅದು ಟಾಸ್ ವಿನ್ ಆಗೋದು. ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಡಿಸೈಡಿಂಗ್ ಫ್ಯಾಕ್ಟರ್. ಆರ್‌ಸಿಬಿ ಸ್ಟ್ರೆಂಥ್ ಚೇಸಿಂಗ್. ಹೀಗಾಗಿ ಟಾಸ್ ಗೆದ್ದು, ಚೇಸಿಂಗ್ ಆಯ್ಕೆ ಮಾಡಿಕೊಂಡರೆ ಆರ್‌ಸಿಬಿ ಅರ್ಧ ಪಂದ್ಯ ಗೆದ್ದಂತೆ. ಮೊದ್ಲೇ ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿ ವಿರಾಟ ರೂಪ ತಾಳಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವ್ರ ಆರ್ಭಟ ಜೋರಾಗ್ತಾನೇ ಇದೆ. ಇದೀಗ ಪ್ಲೇಆಫ್ ಮ್ಯಾಚ್ ಅಂದ್ರೆ ಬಿಡ್ತಾರಾ. ಹೀಗಾಗಿ ವಿರಾಟ್ ಕೊಹ್ಲಿಯಂಥ ಚೇಸ್ ಮಾಸ್ಟರ್, ದಿನೇಶ್ ಕಾರ್ತಿಕ್ರಂತ ಬೆಸ್ಟ್ ಫಿನಿಷರ್ ಇರೋದ್ರಿಂದ ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ಆರ್ಸಿಬಿಗೆ ಸುಲಭವಾಗಲಿದೆ.
ಚಾಲೆಂಜ್ ನಂಬರ್ 2 – ಚೆನ್ನೈ ಟೀಂ ಫಸ್ಟ್ ಬ್ಯಾಟ್ ಮಾಡಿದ್ರೆ 170 ರನ್ ದಾಟಬಾರದು
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ ಫಸ್ಟ್ ಬ್ಯಾಟಿಂಗ್ಗೆ ಇಳಿದ್ರೆ ನಮ್ಮ ಬೌಲರ್ಸ್ ತುಂಬಾ ಜವಾಬ್ದಾರಿಯುತವಾಗಿ ಆಡ್ಬೇಕು. 170 ರನ್ಗಳ ಒಳಗೆ ಸಿಎಸ್‌ಕೆ ತಂಡವನ್ನ ಕಟ್ಟಿ ಹಾಕಬೇಕು. ಕಳಪೆ ಫಾರ್ಮ್ನಿಂದ ಹೊರ ಬಂದಿರುವ ಆರ್‌ಸಿಬಿ ಬೌಲರ್ಸ್ ಡೆಲ್ಲಿ, ಗುಜರಾತ್ ವಿರುದ್ಧ ಮಾಡಿದಂತೆ, ಚೆನ್ನೈ ವಿರುದ್ಧವೂ ಸೂಪರ್ಬ್ ಬೌಲಿಂಗ್ ಪರ್ಫಾಮೆನ್ಸ್ ನೀಡಬೇಕು. ಕನಿಷ್ಟ 160ರಿಂದ 170ರೊಳಗೆ ಸಿಎಸ್‌ಕೆ ಆಲೌಟ್ ಮಾಡಿದ್ರೆ, ವೇಗವಾಗಿ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗುತ್ತೆ. ಅಂದ್ರೆ 18 ಓವರ್ಗಳಲ್ಲೇ ಚೇಸಿಂಗ್ ಮಾಡಿ ರನ್ರೇಟ್ ಹೆಚ್ಚಿಸಿಕೊಳ್ಳಲೂ ನೆರವಾಗುತ್ತೆ.
ಚಾಲೆಂಜ್ ನಂಬರ್ 3 – ಋತುರಾಜ್, ಶಿವಂ ದುಬೆ ಅಬ್ಬರಕ್ಕೆ ಆರಂಭದಲ್ಲೇ ಕಡಿವಾಣ
ಆರ್‌ಸಿಬಿ ಬೌಲರ್ಗಳ ಮುಂದೆ ಇರೋ ಮೇನ್ ಚಾಲೆಂಜ್ ಅಂದ್ರೆ ಇದೇ. ಎದುರಾಳಿ ತಂಡಕ್ಕೆ ಹೆಚ್ಚು ರನ್ ಕೊಡ್ಬಾರ್ದು. ಅದ್ರಲ್ಲೂ ಈ ಸಲ ಸಿಎಸ್‌ಕೆ ಪರ ಅಬ್ಬರಿಸುತ್ತಿರೋ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ಸ್ಫೋಟಕ ಬ್ಯಾಟರ್ ಶಿವಂ ದುಬೆಗೆ ಸೆಟಲ್ ಆಗಲು ಅವಕಾಶವನ್ನೇ ನೀಡಬಾರದು. ಈ ಇಬ್ಬರು ಸೆಟಲ್ ಆದ್ರೆ, ಸಿಕ್ಕಾಪಟ್ಟೇ ಡೇಂಜರಸ್. ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ಸುಲಭವಾಗಿ ರನ್ ಮಳೆ ಹರಿಸ್ತಾರೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗ ಪೆವಿಲಿಯನ್ ದಾರಿ ತೋರಿಸ್ಬೇಕು.
ಚಾಲೆಂಜ್ ನಂಬರ್ 4 – ಸಿಎಸ್ ಕೆ ಸ್ಪಿನ್ನರ್ಸ್ ಎದುರು ಎಚ್ಚರಿಕೆಯ ಆಟ
ಚೆನ್ನೈ ತಂಡದಲ್ಲಿ ಬ್ಯಾಟಿಂಗ್ ಅಷ್ಟೇ ಅಲ್ಲ. ಬೌಲಿಂಗ್ ತಂಡವೂ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ. ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನೆರ್, ಮಹೀಶ ತೀಕ್ಷಣ ಚೆನ್ನೈ ತಂಡದ ಬೌಲಿಂಗ್ ಬೆನ್ನೆಲುಬಾಗಿದ್ದಾರೆ. ತಮ್ಮ ಸ್ಪಿನ್ ಮೋಡಿಯಿಂದಲೇ ಎದುರಾಳಿಗಳ ಆಟಕ್ಕೆ ಅಂತ್ಯ ಹಾಡೋ ಸಾಮರ್ಥ್ಯವಿದೆ. ಚಿನ್ನಸ್ವಾಮಿ ಪಿಚ್ ಸ್ಪಿನ್ಗೆ ನೆರವು ನೀಡೋ ಸಾಧ್ಯತೆಯಿದ್ದು, ಆರ್‌ಸಿಬಿ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ.
ಚಾಲೆಂಜ್ ನಂಬರ್ 5 – ಎಲಿಮಿನೇಟರ್ ಪಂದ್ಯದಲ್ಲಿ ಒತ್ತಡ ಪಕ್ಕಕ್ಕಿಟ್ಟು ಪ್ರದರ್ಶನ
ಶನಿವಾರದ ಪಂದ್ಯ ಚೆನ್ನೈ ಹಾಗೂ ಬೆಂಗಳೂರಿಗೆ ಎಲಿಮಿನೇಟರ್ ಪಂದ್ಯ. ಲೀಗ್ ಪಂದ್ಯವಾದ್ರೂ ಇದಕ್ಕೆ ಎಲಿಮಿನೇಟರ್ ಟಚ್ ಸಿಕ್ಕಿದೆ. ಬಲಿಷ್ಟ ಸಿಎಸ್‌ಕೆ ಎದುರು, ಬಿಗ್ ಮಾರ್ಜಿನ್ನಲ್ಲಿ ಗೆಲ್ಲಬೇಕಾಗಿರೋದ್ರಿಂದ ಆರ್‌ಸಿಬಿ ಆಟಗಾರರ ಮೇಲೆ ಪ್ರೆಶರ್ ಇದ್ದೇ ಇರುತ್ತೆ. ಹಾಗೇನಾದ್ರೂ ಆರ್‌ಸಿಬಿ ಆಟಗಾರರು ಒತ್ತಡಕ್ಕೆ ಒಳಗಾದ್ರೆ ಸೋಲು ಕಟ್ಟಿಟ್ಟ ಬುತ್ತಿ. ಹೀಗಾಗಿ ಕಳೆದ ಐದು ಪಂದ್ಯಗಳಲ್ಲಿ ಹೇಗೆ ಸಿಂಹಗಳಂತೆ ಗರ್ಜಿಸಿ ಗೆದ್ರೂ ಈ ಪಂದ್ಯದಲ್ಲೂ ಅದನ್ನೇ ಮಾಡ್ಬೇಕಿದೆ.
ಹೀಗೆ ಈ ಐದೂ ಚಾಲೆಂಜ್ಗಳನ್ನ ಗೆದ್ರೆ ಆರ್ಸಿಬಿಗೆ ಪ್ಲೇ ಆಫ್ ಪ್ರವೇಶ ಮಾಡೋದು ಕಷ್ಟವೇನೂ ಅಲ್ಲ. ಸತತ 5 ಪಂದ್ಯ ಗೆದ್ದು, ಗೆಲುವಿನ ನಾಗಾಲೋಟ ಮುಂದುವರೆಸಿರೋ ಆರ್‌ಸಿಬಿ ಚೆನ್ನೈಯನ್ನೂ ದಿಟ್ಟವಾಗಿ ಎದುರಿಸಿದ್ರೆ 6ನೇ ಪಂದ್ಯದಲ್ಲೂ ಗೆಲ್ಲಬಹುದು. ಅಲ್ದೇ ಟೂರ್ನಿಯ ಫಸ್ಟ್ ಮ್ಯಾಚ್ನಲ್ಲೇ ಸಿಎಸ್‌ಕೆ ಎದುರು ಸೋತಿದ್ದ ಆರ್ಸಿಬಿಗೆ ಸೇಡು ತೀರಿಸಿಕೊಳ್ಳೋಕೆ ಒಂದೊಳ್ಳೆ ಅವಕಾಶ. ಆದ್ರೆ ಈ ಪಂದ್ಯದಲ್ಲಿ ಅಪ್ಪಿ ತಪ್ಪಿಯೂ ಸ್ವಲ್ಪ ಲಯ ಕಳ್ಕೊಂಡ್ರೂ ಚೆನ್ನೈ ವಿರುದ್ಧ ಸೋಲೋದ್ರ ಜೊತೆಗೆ ಟೂರ್ನಿಯಿಂದಲೇ ಹೊರ ಬೀಳಬೇಕಾಗುತ್ತೆ. ಆದ್ರೆ ಹೀಗಾಗೋದು ಬೇಡ. ಆರ್‌ಸಿಬಿ ಗೆಲ್ಲಲಿ, ಪ್ಲೇ ಆಫ್ ಪ್ರವೇಶ ಮಾಡ್ಲಿ, ಡಬ್ಲ್ಯೂಪಿಎಲ್ನಂತೆಯೇ ಆರ್ಸಿಬಿಯ ಹುಡುಗ್ರೂ ಕೂಡ ಕಪ್ ಗೆಲ್ಲಲಿ ಅಂತಾ ಅಭಿಮಾನಿಗಳು ಹಾರೈಸುತ್ತಿದ್ದಾರೆ.