ಚಳಿಗಾಲದಲ್ಲಿ ಟ್ರಿಪ್ ಹೋಗುವ ಪ್ಲಾನ್ ಇದ್ಯಾ? – ಈ ಸ್ಥಳಗಳು ಪರ್ಫೆಕ್ಟ್
ಸಾಮಾನ್ಯವಾಗಿ ಪ್ರವಾಸ ಮಾಡಲು ಬೆಸ್ಟ್ ಟೈಮ್ ಅಂದ್ರೆ ಅದು ಚಳಿಗಾಲ. ಏಕೆಂದರೆ ಭಾರತದ ಬಹುತೇಕ ಪ್ರವಾಸಿ ಸ್ಥಳಗಳು ಈ ಸಮಯದಲ್ಲಿ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಹಿಮಭರಿತ ಪರ್ವತಗಳಿಂದ ಹಿಡಿದು ಕಡಲತೀರಗಳವರೆಗೆ ಮಾಂತ್ರಿಕ ಸೊಬಗನ್ನು ಹೊಂದಿರುತ್ತದೆ. ಹಾಗಾದರೆ ಭಾರತದಲ್ಲಿ ಚಳಿಗಾಲದ ಪರ್ಫೆಕ್ಟ್ ಪ್ರವಾಸ ತಾಣಗಳು ಯಾವೆಲ್ಲಾ ಅನ್ನೋದ್ದನ್ನ ನೋಡೋಣ.
ಹಿಮಾಚಲ ಪ್ರದೇಶ
ಹಿಮಾಚಲ ಪ್ರದೇಶದ ಅತ್ಯಂತ ಸೊಗಸಾದ ಗಿರಿಧಾಮಗಳಲ್ಲಿ ಶಿಮ್ಲಾ ಒಂದಾಗಿದೆ. ಇದು ಹಿಮಾಚಲ ಪ್ರದೇಶದ ಹೆಗ್ಗುರುತು ಕೂಡ ಹೌದು. ನವಜೋಡಿಗಳು ಏಕಾಂತವನ್ನು ಕಳೆಯಲು ಶಿಮ್ಲಾದಂತಹ ರೋಮ್ಯಾಂಟಿಕ್ ಗಿರಿಧಾಮಕ್ಕೆ ಭೇಟಿ ನೀಡುತ್ತಾರೆ. ನೀವು ಕುಟುಂಬದ ಜೊತೆ ಹಿಮಪಾತದ ಲೋಕಕ್ಕೆ ಭೇಟಿ ನೀಡಲು ಶಿಮ್ಲಾಗೆ ಹೋಗಬಹುದು. ಇದು ತನ್ನ ಶೀತದ ವಾತಾವರಣದ ಕಾರಣ ಅಸಾಧಾರಣವಾದ ನೋಟವನ್ನು ಹೊಂದಿರುತ್ತದೆ. ಇಲ್ಲಿ ನೀವು ಸಾಕಷ್ಟು ರೋಮಾಂಚಕ ಸ್ಥಳಗಳನ್ನು ಪರಿಶೀಲಿಸಬಹುದು. ಹಿಡಿಂಬ ದೇವಾಲಯದಿಂದ ಹಿಡಿದು ಸುಂದರವಾದ ಜಲಪಾತಗಳವರೆಗೆ ಇಲ್ಲಿ ನೋಡಲು ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಕಲ್ಕಾ ಮತ್ತು ಶಿಮ್ಲಾ ನಡುವಿನ ಆಟಿಕೆ ರೈಲು ಪ್ರಯಾಣವು ನಿಮಗೆ ಮರೆಯಲಾಗದಂತಹ ಅನುಭೂತಿಯನ್ನು ಉಂಟುಮಾಡುತ್ತದೆ. ಸ್ಕೀಯಿಂಗ್ ಮತ್ತು ಐಸ್ ಸ್ಕೇಟಿಂಗ್ನಂತಹ ಸಾಹಸವನ್ನು ಇಲ್ಲಿ ನೀವು ಮಾಡಬಹುದು.
ಮನಾಲಿ
ಹಿಮಾಚಲ ಪ್ರದೇಶದ ಮತ್ತೊಂದು ಆಕರ್ಷಕವಾದ ಗಿರಿಧಾಮವೆಂದರೆ ಅದು ಮನಾಲಿಯಾಗಿದೆ. ಚಳಿಗಾಲವನ್ನು ಆನಂದಿಸಲು ಮನಾಲಿ ದಿ ಬೆಸ್ಟ್ ಆಗಿದೆ. ಇದು ಹಿಮಭರಿತ ಪರ್ವತಗಳು ಮತ್ತು ಎತ್ತರದ ಪೈನ್ ಮರಗಳಿಂದ ಆವೃತವಾಗಿರುತ್ತದೆ. ಇಲ್ಲಿ ನೀವು ರೋಹ್ಟಾಂಗ್ ಪಾಸ್ ಮತ್ತು ಸೋಲಾಂಗ್ ಕಣಿವೆಗಳು ಪ್ರಮುಖ ಆಕರ್ಷಣೆಗಳಾಗಿವೆ. ಸ್ಕೀಯಿಂಗ್ ಮತ್ತು ಪ್ಯಾರಾಗ್ಲೈಡಿಂಗ್ ನಂತಹ ಸಾಹಸ ಚಟುವಟಿಕೆಗಳನ್ನು ಇಲ್ಲಿ ಪ್ರಯತ್ನಿಸಬಹುದು. ಸಾಹಸ ಮತ್ತು ನೈಸರ್ಗಿಕ ಸೌಂದರ್ಯ ಎರಡನ್ನೂ ಪ್ರೀತಿಸುವ ಮಂದಿಗೆ ಮನಾಲಿ ಅತ್ಯುತ್ತಮವಾಗಿದೆ.

ನೋಡಿರಿ

