ತಂಪಾದ ಗಾಳಿ, ಹಸಿರು ಬೆಟ್ಟ ಮನಮೋಹಕ ಕಾಫಿ ತೋಟಗಳು – ಚಿಕ್ಕಮಗಳೂರಿನ 5 ಅದ್ಭುತ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ನೀಡಿ

ತಂಪಾದ ಗಾಳಿ, ಹಸಿರು ಬೆಟ್ಟ ಮನಮೋಹಕ ಕಾಫಿ ತೋಟಗಳು – ಚಿಕ್ಕಮಗಳೂರಿನ 5 ಅದ್ಭುತ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ನೀಡಿ

ಮಲೆನಾಡಿನ ಸೌಂದರ್ಯ, ತಂಪಾದ ಗಾಳಿ, ಹಸಿರು ಬೆಟ್ಟಗಳು ಮತ್ತು ಮನಮೋಹಕ ಕಾಫಿ ತೋಟಗಳು… ಇವೆಲ್ಲವನ್ನೂ ಒಂದೇ ಕಡೆ ನೋಡಬೇಕು ಅಂದ್ರೆ, ಚಿಕ್ಕಮಗಳೂರು ಬೆಸ್ಟ್ ಡೆಸ್ಟಿನೇಷನ್!. ಹಾಗಿದ್ರೆ ಚಿಕ್ಕಮಗಳೂರಿನಲ್ಲಿ ಹೋಗಬಹುದಾದ ಬೆಸ್ಟ್ 5 ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ಮುಳ್ಳಯ್ಯನಗಿರಿ. ಸಮುದ್ರಮಟ್ಟದಿಂದ 1,930 ಮೀಟರ್ ಎತ್ತರದಲ್ಲಿರುವ ಇದು ಕರ್ನಾಟಕದ ಅತಿ ಎತ್ತರದ ಶಿಖರ. ಬೆಟ್ಟದ ಮೇಲಿನಿಂದ ಕಾಣುವ ಪ್ರಕೃತಿ ದೃಶ್ಯ ಮತ್ತು ಮೋಡಗಳ ನಡುವೆ ಸಾಗುವ ಅನುಭವವೇ ಅದ್ಭುತ.

ಎರಡನೆಯದು ಬಾಬಾಬುಡನಗಿರಿ. ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಈ ಬೆಟ್ಟ ಪ್ರದೇಶ, ಹಸಿರು ಕಣಿವೆಗಳು ಮತ್ತು ಸುಂದರ ವೀಕ್ಷಣಾ ಸ್ಥಳಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಮೂರನೆಯದು ಕೆಮ್ಮಣ್ಣುಗುಂಡಿ. ದಟ್ಟ ಕಾಡು, ಹಸಿರು ಬೆಟ್ಟಗಳು, ತಂಪಾದ ವಾತಾವರಣ ಮತ್ತು ಸುಂದರ ಉದ್ಯಾನಗಳಿಂದ ಕೂಡಿರುವ ಈ ಹಿಲ್ ಸ್ಟೇಷನ್ ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ. ಇಲ್ಲಿನ ಝಡ್ ಪಾಯಿಂಟ್ ಕೂಡ ವಿಶೇಷ ಆಕರ್ಷಣೆ.

ನಾಲ್ಕನೆಯದು ಹೆಬ್ಬೆ ಫಾಲ್ಸ್. ಸುಮಾರು 168 ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕುವ ಜಲಪಾತ, ದಟ್ಟ ಅರಣ್ಯದ ನಡುವೆ ಮತ್ತಷ್ಟು ರೋಮಾಂಚನ ನೀಡುತ್ತದೆ. ಇಲ್ಲಿಗೆ ಜೀಪ್ ಅಥವಾ ಟ್ರೆಕ್ಕಿಂಗ್ ಮೂಲಕ ತಲುಪಬಹುದು.

ಐದನೆಯದು ಭದ್ರಾ ವನ್ಯಜೀವಿ ಅಭಯಾರಣ್ಯ. ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ವೈವಿಧ್ಯಮಯ ವನ್ಯಜೀವಿಗಳನ್ನು ಕಾಣಬಹುದಾದ ಈ ಪ್ರದೇಶದಲ್ಲಿ ಸಫಾರಿ ಅನುಭವ ಕೂಡ ಸಿಗುತ್ತದೆ.

Kishor KV

Leave a Reply

Your email address will not be published. Required fields are marked *