ಇಂಡೋ-ಪಾಕ್ FINAL – ಹಿಸ್ಟರಿಯ ಫಸ್ಟ್ VICTORY ಯಾರಿಗೆ?

 ಇಂಡೋ-ಪಾಕ್ FINAL – ಹಿಸ್ಟರಿಯ ಫಸ್ಟ್ VICTORY ಯಾರಿಗೆ?

ಏಷ್ಯಾಕಪ್​ ಟೂರ್ನಿ ಸದ್ಯ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು 2025ರ ಚಾಂಪಿಯನ್ಸ್ ಡಿಸೈಡ್ ಆಗೋಕೆ ಇನ್ನೊಂದೇ ಹೆಜ್ಜೆ ಬಾಕಿ. ಸೆಪ್ಟೆಂಬರ್ 28 ಅಂದ್ರೆ ಅಪ್​ಕಮಿಂಗ್ ಸಂಡೇ ಫೈನಲ್ ಫೈಟ್ ಫಿಕ್ಸ್ ಆಗಿದೆ. ಬಟ್ ಇಂಟ್ರೆಸ್ಟಿಂಗ್ ಟ್ವಿಸ್ಟ್ ಏನಪ್ಪಾ ಅಂದ್ರೆ ಭಾರತಕ್ಕೆ ಪಾಕಿಸ್ತಾನವೇ ಮತ್ತೊಮ್ಮೆ ಎದುರಾಳಿಯಾಗಿದೆ. ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಅಜೇಯವಾಗಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತ್ತು. ಇತ್ತ ಗುರುವಾರ ಡು ಆರ್ ಡೈ ಮ್ಯಾಚಲ್ಲಿ ಬಾಂಗ್ಲಾದೇಶವನ್ನ ಸೋಲಿಸಿ ಪಾಕಿಸ್ತಾನ ಕೂಡ ಫಿನಾಲೆಗೆ ಎಂಟ್ರಿ ಕೊಟ್ಟಿದೆ. ಸೋ ಅಲ್ಲಿಗೆ ಭಾನುವಾರ ಮತ್ತೊಂದು ಹೈವೋಲ್ಟೇಜ್ ಕಾಳಗ ನಡೆಯಲಿದೆ.

ಬಾಂಗ್ಲಾ ದೇಶವನ್ನ ಮಣಿಸಿ ಫೈನಾಲೆ ಟಿಕೆಟ್ ಪಡೆದ ಪಾಕ್!

ಏಷ್ಯಾಕಪ್ ಸೂಪರ್​ ಫೋರ್​ ಪಂದ್ಯದಲ್ಲಿ ಗುರುವಾರ ಬಾಂಗ್ಲಾದೇಶ ವಿರುದ್ಧ 11 ರನ್‌ಗಳಿಂದ ಗೆದ್ದು ಪಾಕಿಸ್ತಾನ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಇತಿಹಾಸದಲ್ಲೇ ಈ ಎರಡೂ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಇದೇ ಮೊದಲ ಆರಿಗೆ ಮುಖಾಮುಖಿಯಾಗಲಿವೆ. ಈ ಮ್ಯಾಚಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 135 ರನ್​ಗಳನ್ನ ಕಲೆ ಹಾಕಿತ್ತು. 136 ರನ್‌ಗಳ ಟಾರ್ಗೆಟ್ ಬೆನ್ನತ್ತಿದ  ಬಾಂಗ್ಲಾ 20 ಓವರ್‌ಗಳಲ್ಲಿ 124 ರನ್‌ಗಳಿಸಲಷ್ಟೇ ಸಾಧ್ಯವಾಯ್ತು. 11 ರನ್​ಗಳಿಂದ ಬಾಂಗ್ಲಾವನ್ನ ಸೋಲಿಸಿದ ಪಾಕ್ ಫೈನಲ್​ಗೆ ಲಗ್ಗೆ ಇಟ್ಟಿದೆ.

ಏಷ್ಯಾಕಪ್ ಇತಿಹಾಸದಲ್ಲಿ ಫಸ್ಟ್.. ಪ್ರಸ್ತುತ ಮೂರನೇ ಸಲ ಫೈಟ್!

ಪ್ರಸ್ತುತ ಟೂರ್ನಿಯಲ್ಲಿ ಉಭಯ ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗ್ತಿರೋದು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಏಷ್ಯಾ ಕಪ್ ಇತಿಹಾಸದಲ್ಲಿ ಈ ಎರಡೂ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಹೋರಾಡ್ತಿರೋದು ಇದೇ ಮೊದಲು. ಈ ಆವೃತ್ತಿಯಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆದ್ದಿದೆ. ಆದರೆ, ಈಗ ಫೈನಲ್ ಮ್ಯಾಚ್ ಆಗಿರೋದ್ರಿಂದ ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ತಂಡಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಮಸ್ಟ್ ಌಂಡ್ ಶುಡ್ ಗೆಲ್ಲಲೇಬೇಕು ಅನ್ನೋ ಮೈಂಡ್​ಸೆಟ್​ನಲ್ಲೇ ಕಣಕ್ಕಿಳೀತಾರೆ. ಯಾಕಂದ್ರೆ ಉಭಯ ತಂಡಗಳ ಆಟಗಾರರಿಗೆ ಇದು ಬರೀ ಪಂದ್ಯದ ಸೋಲು ಗೆಲುವಿನ ಪ್ರಶ್ನೆಯಲ್ಲ. ಎರಡೂ ರಾಷ್ಟ್ರಗಳ ನಡುವಿನ ಪ್ರತಿಷ್ಠೆಯ ವಿಚಾರವಾಗಿದೆ.

41 ವರ್ಷಗಳ ಬಳಿಕ ಇತಿಹಾಸ ಸೃಷ್ಟಿಸೋದ್ಯಾರು?

ಏಷ್ಯಾ ಕಪ್ ಪಂದ್ಯಾವಳಿ ಆರಂಭವಾಗಿ 41 ವರ್ಷಗಳೇ ಕಳೆದರೂ, ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಒಮ್ಮೆಯೂ ಮುಖಾಮುಖಿಯಾಗಿರಲಿಲ್ಲ. ಆದ್ರೆ ಈ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿವೆ. ಈ ಪಂದ್ಯ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಕ್ಷರಶಃ ಅಬ್ಬರಿಸಿದೆ. ಆಡಿದ ಐದೂ ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿ, ಒಂದೂ ಪಂದ್ಯ ಸೋಲದೆ ಫೈನಲ್‌ಗೆ ಕಾಲಿಟ್ಟಿದೆ. ಗುಂಪು ಹಂತ ಮತ್ತು ಸೂಪರ್ ಫೋರ್ ಹಂತಗಳಲ್ಲಿ ಎದುರಾಳಿಗಳನ್ನು ಧೂಳೀಪಟ ಮಾಡಿದ ಭಾರತೀಯ ಆಟಗಾರರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲಿತ ಪ್ರದರ್ಶನ ನೀಡ್ತಿದ್ದಾರೆ. ಆದ್ರೆ ಪಾಕಿಸ್ತಾನ 6 ಪಂದ್ಯಗಳ ಪೈಕಿ 2ರಲ್ಲಿ ಸೋತಿದೆ. ಆ ಎರಡೂ ಸಲವೂ ಭಾರತದ ಎದುರೇ ಶರಣಾಗಿದೆ. ಇನ್ನು ಉಭಯ ರಾಷ್ಟ್ರಗಳ ಕಳೆದ ಐದು ಟಿ-20ಐ ಪಂದ್ಯಗಳ ಪೈಕಿ ಭಾರತ ಐದಕ್ಕೆ ಐದರಲ್ಲೂ ಗೆದ್ದು ಕಂಪ್ಲೀಟ್ ಡಾಮಿನೇಟ್ ಮಾಡ್ತಿದೆ.ಇನ್ನು ಫೈನಲ್ ಪಂದ್ಯಕ್ಕೂ ಮುನ್ನ ಭಾರತ ಲಂಕಾ ವಿರುದ್ಧ ಮತ್ತೊಂದು ಮ್ಯಾಚ್​ಗಾಗಿ ಕಣಕ್ಕಿಳಿಯಲಿದೆ.

ಲಂಕಾವನ್ನ ಮಣಿಸಿ ಅಜೇಯವಾಗಿ ಫಿನಾಲೆ ಸೇರುತ್ತಾ ಭಾರತ?

ಟೀಂ ಇಂಡಿಯಾ ಈಗ ಆಲ್ರೆಡಿ ಏಷ್ಯಾಕಪ್ ಟೂರ್ನಿ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಆದ್ರೆ ಅದಕ್ಕೂ ಮುನ್ನ ಸೂಪರ್ 4 ಹಂತದಲ್ಲಿ ಶ್ರೀಲಂಕಾ ವಿರುದ್ಧ ಇನ್ನೊಂದು ಮ್ಯಾಚ್ ಆಡ್ಬೇಕಿದೆ. ಇವತ್ತು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯಲಿದ್ದು ಫಿನಾಲೆಗೂ ಮುನ್ನ ಭಾರತಕ್ಕೆ ಒಂದು ರೀತಿಯ ವಾರ್ಮ್ ಅಪ್ ಮ್ಯಾಚ್ ಇದ್ದಂತಾಗುತ್ತೆ. ಮತ್ತೊಂದೆಡೆ ಲಂಕಾ ಈಗಾಗಲೇ ಹೊರಬಿದ್ದಿದ್ದು ಇಂದು ಕೊನೆಯ ಪಂದ್ಯವನ್ನು ಆಡುವ ಮೂಲಕ ಏಷ್ಯಾಕಪ್​ ಅಭಿಯಾನವನ್ನು ಕೊನೆಗೊಳಿಸಲಿದೆ. ಭಾರತ ಮತ್ತು ಶ್ರೀಲಂಕಾ ತಂಡಗಳು ಇಲ್ಲಿಯವರೆಗೆ ಒಟ್ಟು 31 ಟಿ20 ಪಂದ್ಯಗಳನ್ನು ಆಡಿವೆ. ಈ ಪೈಕಿ 21 ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದರೇ, ಶ್ರೀಲಂಕಾ ಕೇವಲ 9 ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. ಈ ಅಂಕಿಅಂಶಗಳನ್ನು ನೋಡಿದರೆ, ಭಾರತವು ಶ್ರೀಲಂಕಾಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಜೊತೆಗೆ ಇಂದಿನ ಪಂದ್ಯವನ್ನು ಗೆಲ್ಲುವ ಫೆವರಿಟ್​ ತಂಡವಾಗಿದೆ. ಈ ಪಂದ್ಯವನ್ನೂ ಗೆದ್ದು ಅಜೇಯವಾಗಿ ಫಿನಾಲೆಗೆ ಲಗ್ಗೆ ಇಡೋಕೆ ನೋಡ್ತಿದೆ. ಇನ್ನು ಇವತ್ತಿನ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡದೇ ಇದ್ರೂ ಬ್ಯಾಟಿಂಗ್ ಆರ್ಡರ್ ನಲ್ಲಿ ಮತ್ತೆ ಎಕ್ಸ್​ಪೆರಿಮೆಂಟ್ ಮಾಡ್ತಾರಾ ಅನ್ನೋದೇ ಪ್ರಶ್ನೆ. ಯಾಕಂದ್ರೆ ಸ್ಲಾಟ್ ಚೇಂಜ್ ಮಾಡಿ ಹೊಡೆತ ತಿಂದಿರೋದ್ರಿಂದ ಯಾವುದೇ ಬದಲಾವಣೆ ಮಾಡದೇ ಇದ್ರೇ ಒಳ್ಳೇದು.

ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಅದು ಕೇವಲ ಪಂದ್ಯವಾಗಿ ಉಳಿಯೋದಿಲ್ಲ. ಎರಡು ದೇಶಗಳ ಪ್ರತಿಷ್ಠೆಯ ಫೈಟ್. ಆಟಗಾರರ ಮೇಲೆ ಪ್ರೆಶರ್ ಇರುತ್ತೆ. ಸಣ್ಣ ಸಣ್ಣ ತಪ್ಪುಗಳು ಕೂಡ ಪಂದ್ಯದ ಫಲಿತಾಂಶವನ್ನೇ ಬದಲಿಸಬಹುದು. ಈಗ ಆಲ್ರೆಡಿ ಎರಡು ಪಂದ್ಯಗಳನ್ನ ಗೆದ್ದಿರೋದ್ರಿಂದ ಭಾರತವೇ ಗೆಲ್ಲುವಂಥ ಚಾನ್ಸಸ್ ಜಾಸ್ತಿ ಇದೆ. ಹಾಗಂತ ಪಾಕಿಸ್ತಾನವನ್ನ ಕೇರ್​ಲೆಸ್ ಮಾಡೋಕೂ ಸಾಧ್ಯವಿಲ್ಲ.

Shantha Kumari