41 ವರ್ಷದ ಕೇಕ್ ಹರಾಜಿನಲ್ಲಿ ಮಾರಾಟ: ಒಂದು ತುಂಡು ಕೇಕ್​ ಬೆಲೆ ಎಷ್ಟು ಗೊತ್ತಾ?
ಕಿಂಗ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ ವಿವಾಹದ ಕೇಕ್​

41 ವರ್ಷದ ಕೇಕ್ ಹರಾಜಿನಲ್ಲಿ ಮಾರಾಟ: ಒಂದು ತುಂಡು ಕೇಕ್​ ಬೆಲೆ ಎಷ್ಟು ಗೊತ್ತಾ?ಕಿಂಗ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ ವಿವಾಹದ ಕೇಕ್​

ಸುಮಾರು 41ಹಳೆಯ (1981) ಕಿಂಗ್ ಚಾರ್ಲ್ಸ್ III ಮತ್ತು ಪ್ರಿನ್ಸೆಸ್ ಡಯಾನಾ ಅವರ ವಿವಾಹದಲ್ಲಿ ಕತ್ತರಿಸಿದ್ದ ಕೇಕ್ ಅನ್ನು ಇಂಗ್ಲೆಂಡ್‌ನಲ್ಲಿ ಡೋರ್ ಮತ್ತು ರೀಸ್ ಹರಾಜುಗಳ ಮೂಲಕ ​ 16,266.64  ಬೆಲೆಗೆ (£ 170 ಅಥವಾ $ 190) ಇತ್ತೀಚೆಗೆ ಮಾರಾಟ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬಚ್ಚಲು ಮನೆಯಲ್ಲಿ ಬಳಸುವ ಹವಾಯಿ ಚಪ್ಪಲಿ ಬೆಲೆ 9000ರೂ!

ಈ ಕೇಕ್‌ನ ತುಂಡಿನ ಬೆಲೆ GBP 300 ರ ಹಿಂದಿನ ಮಾರಾಟ ಅಂದಾಜು ಬೆಲೆಯನ್ನು ಹೊಂದಿದ್ದು, ಇದು ರೂ 27,000 ಕ್ಕಿಂತ ಹೆಚ್ಚು ಮೌಲ್ಯದ್ದಾಗಿದೆ ಎಂಬುದು ತಿಳಿದು ಬಂದಿದೆ.

ಕೇಕ್ ಅನ್ನು ಅದರ ಮೂಲ ಬಾಕ್ಸ್‌ನಲ್ಲಿಯೇ ಪ್ಯಾಕ್ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಬೆಲೆಗೆ ಕೇಕ್ ತುಂಡನ್ನು ಮಾರಾಟ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ತಿಳಿಸಿರುವಂತೆ, ವಿವಾಹ ಸಮಾರಂಭಕ್ಕಾಗಿ ಸುಮಾರು 23 ಅಧಿಕೃತ ಕೇಕ್‌ಗಳನ್ನು ತಯಾರಿಸಲಾಗಿದ್ದರೂ ಕೇಕ್ ತುಂಡನ್ನು ಗಮನಿಸುವಾಗ ಐದು ಅಡಿ ಎತ್ತರದ ಹಣ್ಣಿನ ಕೇಕ್‌ನ ಮಧ್ಯಭಾಗದ ತುಂಡು ಇದಾಗಿದೆ ಎಂದು ತೋರುತ್ತದೆ ಎಂದು ತಿಳಿಸಿದೆ.

ನಿಗೆಲ್ ರಿಕೆಟ್ಸ್ ಎಂಬಾತ 1980-1985 ರಿಂದ ವಿಂಡ್ಸರ್ ಕ್ಯಾಸಲ್‌ನಲ್ಲಿ ಫ್ರೆಂಚ್ ಪಾಲಿಷರ್ ಮತ್ತು ಪೀಠೋಪಕರಣಗಳ ಪುನಃಸ್ಥಾಪಕರಾಗಿ ಕೆಲಸ ಮಾಡಿದ್ದು, ಅಲ್ಲದೇ ವಿವಾಹದ ಅತಿಥಿಗಳಲ್ಲಿ ಒಬ್ಬರಾಗಿದ್ದರು. ಅವರು ಕೇಕ್​ ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ವರ್ಷದ ಆರಂಭದಲ್ಲಿ ನಿಧನರಾದರು.

ಕೇಕ್​ ಅನ್ನು ಅದರ ಮೂಲ ಪ್ರಸ್ತುತಿ ಪೆಟ್ಟಿಗೆಯಲ್ಲಿ ಸಂರಕ್ಷಿಸಲಾಗಿದ್ದು, ಕೇಕ್ ಬಾಕ್ಸ್‌ನಲ್ಲಿ ಪ್ರಿನ್ಸ್ ಆಫ್ ವೇಲ್ಸ್‌ನ ಚಿಹ್ನೆಗಳು, ಕ್ಯಾಲಿಗ್ರಫಿಯಲ್ಲಿ C ಮತ್ತು D ಮೊದಲಕ್ಷರಗಳು ಮತ್ತು ಪೆಟ್ಟಿಗೆಯ ಕೆಳಭಾಗದಲ್ಲಿ ಬರೆಯಲಾದ ‘ಬಕಿಂಗ್ಹ್ಯಾಮ್ ಅರಮನೆ 29 ಜುಲೈ 1981’ ಅನ್ನು ಒಳಗೊಂಡಿದೆ.

ಇದೇ ಕೇಕ್‌ನ ತುಂಡೊಂದನ್ನು 2014 ರಲ್ಲಿ GBP 1,375 ಕ್ಕೆ ಹರಾಜು ಮಾಡಲಾಗಿತ್ತು. ಇದು 1,27,000 ಪ್ರಸ್ತುತ ದರಕ್ಕಿಂತಲೂ ಹೆಚ್ಚಿನ ಮೌಲ್ಯಕ್ಕೆ ಸಮನಾದುದು ಎಂಬುದು ವರದಿಯಾಗಿದೆ. ರಿಕೆಟ್ಸ್ ಹಾಗೂ ರಾಜಮನೆತನದ ಇತರ ಸದಸ್ಯರು ಚಾರ್ಲ್ಸ್ ಹಾಗೂ ಡಯಾನಾರ ವಿವಾಹ ಉಡುಗೊರೆಯಾಗಿ ಬರೆಯುವ ಮೇಜನ್ನು ಖರೀದಿಸಲು ಜೊತೆಯಾಗಿ ಹಣ ಸಂಗ್ರಹಿಸಿದ್ದರು ಹಾಗೂ ಈ ಪ್ರಸ್ತಾವನೆ ರಾಜಕುಮಾರ ಚಾರ್ಲ್ಸ್‌ಗೆ ಖುಷಿನೀಡಿತ್ತು ಎಂದು ವರದಿಯಾಗಿದೆ.

ಡೋರ್ ಹಾಗೂ ರೀಸ್ ವೆಬ್‌ಸೈಟ್ ಚಾರ್ಲ್ಸ್ ದಂಪತಿಗಳ ಕೈಬರಹದ ಧನ್ಯವಾದ ಸಮರ್ಪಿಸುವ ಟಿಪ್ಪಣಿಯನ್ನು ಕೂಡ ಒಳಗೊಂಡಿದೆ. ಡಯಾನಾ ಹಾಗೂ ನಾನು (ಚಾರ್ಲ್ಸ್) ನಮಗೆ ತುಂಬಾ ಉಪಯುಕ್ತವಾಗಿರುವ ಉಡುಗೊರೆಯನ್ನು ನೀಡಿದ್ದು ಇದರ ಹುಡುಕಾಟಕ್ಕಾಗಿ ತುಂಬಾ ಶ್ರಮವಹಿಸಿದ್ದೀರಿ ಎಂಬುದಂತೂ ನಿಜ. ನಾವಿಬ್ಬರೂ ನಿಮಗೆ ಆಶ್ವಾಸನೆ ನೀಡುವುದೇನೆಂದರೆ ಇದು ಶಿಥಿಲಗೊಂಡರೂ ನಾವು ಅದನ್ನು ಪಳೆಯುಳಿಕೆಯ ನಿಧಿಯಾಗಿ ಸಂಗ್ರಹಿಸಿಡುತ್ತೇವೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ.

suddiyaana