4 ಸಾವಿರ ವರ್ಷಗಳಷ್ಟು ಹಳೆಯ ಸಮಾಧಿಯಲ್ಲಿ ಪತ್ತೆಯಾಯ್ತು ಬೆಲೆಬಾಳುವ ವಸ್ತುಗಳು!

4 ಸಾವಿರ ವರ್ಷಗಳಷ್ಟು ಹಳೆಯ ಸಮಾಧಿಯಲ್ಲಿ ಪತ್ತೆಯಾಯ್ತು ಬೆಲೆಬಾಳುವ ವಸ್ತುಗಳು!

ಆಂಸ್ಟರ್ಡ್ಯಾಮ್: ಸುಮಾರು 4 ಸಾವಿರಗಳಷ್ಟು ಹಳೆಯ ರುದ್ರಭೂಮಿಯೊಂದು ಪತ್ತೆಯಾಗಿದೆ. ನೆದರ್‍ಲ್ಯಾಂಡ್‍ನ ಸ್ಟೋನ್‌ಹೆಂಜ್ ಎಂದು ಕರೆಯಲ್ಪಡುವ ಈ ರುದ್ರಭೂಮಿಯನ್ನು ಡಚ್ ಪುರಾತತ್ವಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ನೆದರ್‍ಲ್ಯಾಂಡ್‍ನ ಟೈಲ್ ನಗರಪಾಲಿಕೆಗೆ 70 ಕಿಮೀ ದೂರದಲ್ಲಿರುವ ರೂಟರ್‌ಡ್ಯಾಮ್‌ನ ಪೂರ್ವದಲ್ಲಿ ಈ ಪುರಾತನ ಸಮಾಧಿ ಸ್ಥಳವನ್ನು ಪುರಾತತ್ವ ಶಾಸ್ತ್ರಜ್ಞರು ಉತ್ಖನನ ಮಾಡಿದ್ದಾರೆ. ಈ ಸಮಾಧಿಯ ಸ್ಥಳದಲ್ಲಿ ಪ್ರಾಣಿಗಳ ಅಸ್ಥಿಪಂಜರಗಳು, ಮಾನವನ ತಲೆಬುರುಡೆಗಳು, ಕಂಚಿನ ಈಟಿಯಂತಹ ಬೆಲೆಬಾಳುವ ವಸ್ತು ಪತ್ತೆಯಾಗಿದೆ.

ಇದನ್ನೂ ಓದಿ:  ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!

ಸಮಾಧಿಯ ದಿಬ್ಬಗಳನ್ನು ಒಳಗೊಂಡಿರುವ ಈ ಸ್ಥಳವು 65 ಅಡಿ ವಿಸ್ತೀರ್ಣವಿದೆ. 60 ಪುರುಷರು ಹಾಗೂ ಮಹಿಳೆಯರು ಮತ್ತು ಮಕ್ಕಳ ಅವಶೇಷಗಳು ಪತ್ತೆಯಾಗಿದೆ. ಇಂಗ್ಲೆಂಡ್‌ನ ಸ್ಟೋನ್‌ಹೆಂಜ್‌ನ ಪ್ರಸಿದ್ಧ ಕಲ್ಲುಗಳಂತೆಯೇ ಅತಿದೊಡ್ಡ ದಿಬ್ಬವು ಸೂರ್ಯನ ಕ್ಯಾಲೆಂಡರ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅಭಯಾರಣ್ಯದಲ್ಲಿ ಜನರು ವರ್ಷದ ವಿಶೇಷ ದಿನಗಳನ್ನ ಆಚರಿಸುತ್ತಾರೆ. ಧಾರ್ಮಿಕ ಕ್ರಿಯೆಗಳನ್ನ ನೆರವೇರಿಸುತ್ತಾರೆ. ಜೊತೆಗೆ ಅಂತ್ಯಸಂಸ್ಕಾರ ನೆರವೇರಿಸುವ ಮಹತ್ವದ ಸ್ಥಳವಾಗಿರಬೇಕು. ಏಕೆಂದರೆ ಮೆರವಣಿಗೆಗಾಗಿ ಬಳಸುವ ಮಾರ್ಗಗಳ ಉದ್ದಕ್ಕೂ ಸಾಲುಗಂಬಗಳಿರುವುದು ಕಂಡುಬಂದಿದೆ ಎಂದು ಡಚ್ ಸಂಶೋಧಕರು ಮಾಹಿತಿ ನೀಡಿದ್ದಾರೆ.

2017ರಲ್ಲಿ ಡಚ್ ಸಂಶೋಧಕರು ಉತ್ಖನನ ಮಾಡುವಾಗ ಅನೇಕ ಸಮಾಧಿಗಳನ್ನೂ ಸಹ ಕಂಡುಹಿಡಿದಿದ್ದಾರೆ. ಅದರಲ್ಲಿ ಇಂದಿನ ಇರಾಕ್‌ನ ಮೆಸಪಟೋಮಿಯಾದ ಮಹಿಳೆಯದ್ದಾಗಿತ್ತು. ಇದೀಗ ಮತ್ತೆ ನೆದರ್‌ಲ್ಯಾಂಡ್‌ನಲ್ಲಿ 4 ಸಾವಿರ ವರ್ಷಗಳ ಹಿಂದಿನ ಸಮಾಧಿಯನ್ನ ಪತ್ತೆಹಚ್ಚಿದ್ದು, ಇಲ್ಲಿನ ಪ್ರದೇಶದ ಜನರು ಸುಮಾರು 5,000 ಕಿಮೀ ವರೆಗಿನ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಡಚ್‌ ಸಂಶೋಧಕರು ಅಂದಾಜಿಸಿದ್ದಾರೆ.

ಈ ಸಮಾಧಿಯನ್ನ ಪತ್ತೆಹಚ್ಚಿದ ಸಂಶೋಧಕರು, ಕಳೆದ 6 ವರ್ಷಗಳಲ್ಲಿ ಶಿಲಾಯುಗ, ಕಂಚಿನ ಯುಗ, ಕಬ್ಬಿಣಯುಗ, ರೋಮನ್ ಸಾಮ್ರಾಜ್ಯ ಮತ್ತು ಮಧ್ಯಯುಗಗಳಿಂದ ಉತ್ಖನನಗೊಂಡ ಮಿಲಿಯನ್‌ಗಿಂತಲೂ ಹೆಚ್ಚು ವಸ್ತುಗಳನ್ನ ಸಂಶೋಧಿಸಿದ್ದಾರೆ ಎಂದು ವರದಿಯಾಗಿದೆ.

suddiyaana