6 ಸಾವಿರ ಟ್ವೀಟ್ ಗಳಲ್ಲಿ 4 ಸಾವಿರ ಟ್ವೀಟ್ ಸಮಸ್ಯೆಗೆ ಪರಿಹಾರ – ಯಾರೀಕೆ “ಟ್ವಿಟರ್ ಗರ್ಲ್”

6 ಸಾವಿರ ಟ್ವೀಟ್ ಗಳಲ್ಲಿ 4 ಸಾವಿರ ಟ್ವೀಟ್ ಸಮಸ್ಯೆಗೆ ಪರಿಹಾರ – ಯಾರೀಕೆ “ಟ್ವಿಟರ್ ಗರ್ಲ್”

ಭುವನೇಶ್ವರ್: ಯುವಜನರು ಸಾಮಾಜಿಕ ಜಾಲತಾಣವನ್ನು ತಮ್ಮ ಪೋಸ್ಟ್, ರೀಲ್ಸ್ ಮಾಡಲು ಬಳಸುತ್ತಾರೆ. ಕೆಲವರು ಮನರಂಜನೆಗೆ ಬಳಸಿದರೆ, ಇನ್ನೂ ಕೆಲವರು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಸುತ್ತಾರೆ. ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಲವು ಸಮಸ್ಯೆಗಳನ್ನು ಪರಿಹರಿಸುತ್ತವೆ ಎಂಬುದನ್ನು ಕೇಳಿದ್ದೇವೆ. ಇಲ್ಲೊಬ್ಬಳು ಟ್ವೀಟ್ ಮಾಡುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದಾಳೆ. ಇದೀಗ ಆಕೆಯನ್ನು “ಟ್ವಿಟರ್ ಗರ್ಲ್” ಎಂದೇ ಖ್ಯಾತಿ ಪಡೆದಿದ್ದಾರೆ.

ಇದನ್ನೂ ಓದಿ: ನಂದಿಬೆಟ್ಟದಲ್ಲಿ ಹೊಸ ಜೇಡ ಪ್ರಬೇಧ ಪತ್ತೆ – “ಅರ್ಕಾವತಿ” ಎಂದು ನಾಮಕರಣ

ಒಡಿಶಾದ ಕಿಯೋಂಜಾರ್ ಜಿಲ್ಲೆಯ ಆನಂದಪುರ್ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ಬೆಲ್ ಬಹಲಿ ಗ್ರಾಮದ ನಿವಾಸಿ, ಶ್ರೀಲೇಖಾ ಕೇವಲ ಟ್ವೀಟ್ ಮಾಡುವ ಮೂಲಕ ಒಡಿಶಾದ ವಿವಿಧ ಭಾಗಗಳ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.

ಶ್ರೀಲೇಖಾ ಸಾಮಾಜಿಕ ಸಮಸ್ಯೆಗಳ ಕುರಿತು, ಇಲ್ಲಿವರೆಗೆ ಸುಮಾರು 6 ಸಾವಿರ ಟ್ವೀಟ್ ಮಾಡಿದ್ದು, ಅವುಗಳಲ್ಲಿ 4 ಸಾವಿರ ಟ್ವೀಟ್ ಸಮಸ್ಯೆಗೆ ಪರಿಹಾರ ಲಭಿಸಿದೆ. 2020ರಲ್ಲಿ ತಮ್ಮ ಗ್ರಾಮದ ಟ್ರಾನ್ಸ್ ಫಾರ್ಮರ್ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿ, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ತಕ್ಷಣವೇ ಆಕೆಯ ಟ್ವೀಟ್ ಗೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಸಮಸ್ಯೆ ಬಗೆಹರಿಸಿದ್ದಾರೆ. ಇದಾದ ಬಳಿಕ ಶ್ರೀಲೇಖಾ ತಮ್ಮ ಭಾಗದ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಾ ಬಂದಿದ್ದಾರೆ.

ಒಡಿಶಾದ ವಿವಿಧ ಭಾಗದ ಜನರ ಸಮಸ್ಯೆಗಳನ್ನು ಅರಿತು ಟ್ವೀಟ್ ಮಾಡಿ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾರೆ.  ಅಲ್ಲದೇ ಬಡ ಜನರಿಗೆ ಪರಿಹಾರ ನೀಡುವಂತೆ, ರೋಗಿಗಳ ಚಿಕಿತ್ಸೆಗಳಿಗೆ ನೆರವಾಗಲು, ಅಗತ್ಯವಿರುವವರಿಗೆ ದಾನಿಗಳಿಂದ ರಕ್ತ ವ್ಯವಸ್ಥೆ, ಪ್ರಾಣಿ – ಪಕ್ಷಿಗಳ ಚಿಕಿತ್ಸೆಗೆ ನೆರವಾಗುವಂತೆ, ರಸ್ತೆ, ನೀರು, ಮೂಲಭೂತ ಸೌಕರ್ಯ ಸಮಸ್ಯೆ ಕುರಿತು ನಿರಂತವಾಗಿ ಟ್ವೀಟ್ ಮಾಡಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಾ ಬಂದಿದ್ದಾರೆ. ಹೀಗಾಗಿ ಶ್ರೀಲೇಖಾ ಅವರನ್ನು ಟ್ವಿಟರ್ ಗರ್ಲ್ ಅಂತ ಫೇಮಸ್ ಆಗಿದ್ದಾರೆ.

suddiyaana