1 ಸೊಳ್ಳೆ ಹುಡುಕಿ ಕೊಟ್ಟವರಿಗೆ 400 ರೂಪಾಯಿ! – ಏನಿದು ವಿಚಿತ್ರ ಆಫರ್?

1 ಸೊಳ್ಳೆ ಹುಡುಕಿ ಕೊಟ್ಟವರಿಗೆ 400 ರೂಪಾಯಿ! – ಏನಿದು ವಿಚಿತ್ರ ಆಫರ್?

ಸೊಳ್ಳೆ ಅಂದ್ರೆ ಕೆಲವರಿಗೆ ಹೆದರಿಕೆ ಜಾಸ್ತಿ. ಸಣ್ಣ ಗಾತ್ರದಲ್ಲಿರೋ ಈ ಸೊಳ್ಳೆ ಕಚ್ಚಿದ್ರೆ ನೋವಿನ ಜೊತೆಗೆ ಕೆರೆತಾನು ಶುರುವಾಗಿ ಬಿಡುತ್ತೆ. ಅಲ್ಲದೇ ಸೊಳ್ಳೆಯಿಂದ ಕಚ್ಚಿಸಿಕೊಂಡ ಮೇಲೆ ಯಾವ ರೋಗ, ಯಾವಾಗ ಕಾಣಿಸಿಕೊಳ್ಳುತ್ತೋ ಅನ್ನೋ ಭಯವಂತೂ ಇದ್ದೇ ಇರುತ್ತೆ. ಹಾಗಾಗಿ ಸೊಳ್ಳೆ ಕಂಡ ತಕ್ಷಣ ಕೆಲವರು ಅದನ್ನ ಓಡಿಸುತ್ತಾರೆ. ಇನ್ನೂ ಕೆಲವರು ಏನೇನೋ ಔಷಧಿಗಳನ್ನು ಹಾಕಿ ಸಾಯಿಸುತ್ತಾರೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಸೊಳ್ಳೆ ಹಿಡಿದುಕೊಟ್ಟವರಿಗೆ ಕೈ ತುಂಬಾ ಹಣ ನೀಡಲಾಗುತ್ತಂತೆ!

ಇದನ್ನೂ ಓದಿ: ಜೀವಿತಾವಧಿಯಲ್ಲಿ 1 ಲಕ್ಷ ಲೀ. ಹಾಲು ಕೊಡುತ್ತವೆ ಈ ಹಸುಗಳು – ‘Super Cow’ಗಳ ಸ್ಪೆಷಾಲಿಟಿ ಏನು..!?

ಸೊಳ್ಳೆ ಅಂದ ತಕ್ಷಣ ಎಲ್ಲರೂ ಕಿರಿಕಿರಿ ಅನುಭವಿಸೋದು ಸಾಮಾನ್ಯ. ಯಾಕಂದ್ರೆ ಒಂದು ಸೊಳ್ಳೆ ಕಚ್ಚಿದ್ರೆ ಸಾಕು. ಗಂಟೆಗಟ್ಟಲೆ ಅದರ ಕೆರೆತ ಇರುತ್ತದೆ. ಇನ್ನೂ ಕೆಲವರಿಗಂತೂ ಸೊಳ್ಳೆ ಕಚ್ಚಿದ್ರೆ ಅಲರ್ಜಿ ಶುರುವಾಗಿ ಬಿಡುತ್ತೆ. ಹಾಗಾಗಿ ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ಏನೇನೋ ಸರ್ಕಸ್ ಮಾಡುತ್ತಾರೆ. ಆದ್ರೆ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಸೊಳ್ಳೆಗಳೇ ಇಲ್ವಂತೆ. ಇಲ್ಲಿ ಜನರು ಸೊಳ್ಳೆಯನ್ನು ಹುಡುಕೋದು ಕಷ್ಟ ಎಂದು ಗ್ರಾಮಸ್ಥರು ಹೇಳುತ್ತಾರೆ.  ಹಾಗೆಯೇ ಒಂದು ವೇಳೆ ಯಾರಾದರೂ ಸೊಳ್ಳೆ ಹುಡುಕಿ ಕೊಟ್ಟರೆ ಅವರಿಗೆ ಹಣವನ್ನು ನೀಡುತ್ತಾರಂತೆ. ಇದು ಕೇಳಿದಾಗ ನಗು ತರಿಸಿದ್ರೂ ಕೂಡ ಸತ್ಯ.

ಮಹಾರಾಷ್ಟ್ರದ ಹಿವ್ರೆ ಬಜಾರ್ ಎಂಬ ಹಳ್ಳಿಯಲ್ಲಿ305 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿ 80 ಜನ ಕೋಟ್ಯಾಧಿಪತಿಗಳಿದ್ದಾರಂತೆ. ಅಲ್ಲದೇ ಈ ಹಳ್ಳಿ ಸುತ್ತಲೂ ಹಚ್ಚ ಹಸುರಿನಿಂದ ಸಮೃದ್ಧವಾಗಿದೆ. ಇಲ್ಲಿ ವಾಸಿಸುವ ಜನರಿಗೆ ವಿದ್ಯುತ್​, ನೀರು ಹೀಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಆದ್ರೆ 80 ಮತ್ತು 90 ರ ದಶಕದಲ್ಲಿ ಇಲ್ಲಿನ ಜನರು ತೀವ್ರ ಬರಗಾಲವನ್ನು ಎದುರಿಸಿದ್ದರು. ಜನರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ವಲಸೆ ಬರಬೇಕಾಯಿತು. ಆದರೆ 90ರ ದಶಕದಲ್ಲಿ ‘ಜಂಟಿ ಅರಣ್ಯ ನಿರ್ವಹಣಾ ಸಮಿತಿ’ ರಚನೆಯಾಗಿ ಈ ಸ್ಥಳದ ಪರಿಸ್ಥಿತಿ ಬದಲಾಗಲು ಆರಂಭವಾಗಿದೆಯಂತೆ. ಈ ಹಳ್ಳಿಯ ಜನರ ಕಷ್ಟವನ್ನು ನೋಡಲಾಗದೆ ಅವರ ಸುಧಾರಣೆಗಾಗಿ ಇಲ್ಲಿನ ರಾಜ್ಯ ಸರ್ಕಾರ  ಹಣವನ್ನು ನೀಡಲು ಪ್ರಾರಂಭಿಸಿತು. ಈ ಗ್ರಾಮದಲ್ಲಿ ಸುಮಾರು 340 ಬಾವಿಗಳನ್ನು ಜನರೇ ನಿರ್ಮಿಸಿದ್ದಾರಂತೆ.

ಈ ಹಳ್ಳಿಯಲ್ಲಿ ಕೋಟ್ಯಾಧಿಪತಿಗಳ ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಹೆಚ್ಚಿದ್ಯಂತೆ. ಆದರೆ ಗ್ರಾಮದಲ್ಲಿ 3 ಕುಟುಂಬಗಳು ಮಾತ್ರ ಕಡು ಬಡವರಿದ್ದಾರಂತೆ. ಈ ಕುಟುಂಬದ ಆದಾಯ 10 ಸಾವಿರಕ್ಕಿಂತ ಕಡಿಮೆ ಇದೆಯಂತೆ. ಅಲ್ಲದೇ ಈ ಗ್ರಾಮ ಅತ್ಯಂತ ಸ್ವಚ್ಛ ಗಾಮ್ರವಾಗಿದೆಯಂತೆ. ಹಾಗಾಗಿ ಇಲ್ಲಿ ಒಂದೂ ಸೊಳ್ಳೆ ಇಲ್ಲವಂತೆ. ಅದಕ್ಕಾಗಿ ಇಲ್ಲಿನ ಜನರು ಯಾರಾದರೂ ಒಂದು ಸೊಳ್ಳೆ ತೋರಿಸಿದರೂ ಕೂಡ ಅವರಿಗೆ 400 ರೂಪಾಯಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ ಅಂತಾ ವರದಿಯಾಗಿದೆ.

suddiyaana