400 ಕೋಟಿ ರೂಪಾಯಿ ಬಾಚಿದ ‘ಜೈಲರ್’ ಸಿನಿಮಾ – ಚಿತ್ರ ಗೆದ್ದ ಖುಷಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ‘ಜೈಲರ್’ ಸಿನಿಮಾ ತಮಿಳುನಾಡಿನಲ್ಲಿ ಆರು ದಿನಕ್ಕೆ 134 ಕೋಟಿ ರೂಪಾಯಿ ಬಾಚಿಕೊಂಡಿದೆ. ಆಂಧ್ರ ಪ್ರದೇಶ-ನಿಜಾಮ್ ಭಾಗದಲ್ಲಿ ಜೈಲರ್ ಸಿನಿಮಾ 49 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇದನ್ನೂ ಓದಿ: ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಸೂಪರ್ ಸ್ಟಾರ್ ರಜಿನಿಕಾಂತ್ – ಎರಡೇ ದಿನದಲ್ಲಿ 100 ಕೋಟಿ ಬಾಚಿದ ಜೈಲರ್

ನಟ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿದೆ. ವಿಶ್ವಮಟ್ಟದಲ್ಲಿ ಜೈಲರ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆರು ದಿನಕ್ಕೆ ಈ ಚಿತ್ರದ ಒಟ್ಟಾರೆ ಗಳಿಕ 400 ಕೋಟಿ ರೂಪಾಯಿ ಆಗಿದೆ. ರಜನಿಕಾಂತ್ ವೃತ್ತಿ ಜೀವನದಲ್ಲಿ ಈ ಚಿತ್ರ ಪ್ರಮುಖ ಎನಿಸಿಕೊಂಡಿದೆ. ಈ ಚಿತ್ರ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿದ್ದರಿಂದ ತೆಲುಗು ಭಾಗದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿದೆ. ತೆಲುಗಿನಲ್ಲಿ ರಿಲೀಸ್ ಆದ ‘ಭೋಲಾ ಶಂಕರ್’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು ‘ಜೈಲರ್’ ಚಿತ್ರದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗ್ತಿದೆ. ಕೇರಳದಲ್ಲಿ ಈ ಚಿತ್ರ 33 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ಮಲಯಾಳಂ ನಟರಾದ ಮೋಹನ್‌ಲಾಲ್ ಹಾಗೂ ವಿನಾಯಕನ್ ಅಭಿನಯಿಸಿದ್ದಾರೆ. ವಿನಾಯಕನ್ ಅವರು ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇನ್ನು ಕರ್ನಾಟಕದಲ್ಲೂ ಜೈಲರ್ ಸಿನಿಮಾ 44 ಕೋಟಿ ರೂಪಾಯಿ ಬಾಚಿಕೊಂಡಿದೆ. ಶಿವರಾಜ್‌ ಕುಮಾರ್ ಅವರ ಮಾಸ್ ಎಂಟ್ರಿಗೆ ಜನರು ಫಿದಾ ಆಗಿದ್ದಾರೆ. ಇದು ಕರ್ನಾಟಕದ ಕಲೆಕ್ಷನ್ ಹೆಚ್ಚಲು ಪ್ರಮುಖ ಕಾರಣ. ಉಳಿದ ರಾಜ್ಯಗಳಿಂದ ಚಿತ್ರಕ್ಕೆ 7 ಕೋಟಿ ರೂಪಾಯಿ ಸಿಕ್ಕಿದೆ. ವಿದೇಶದಲ್ಲೂ ಈ ಚಿತ್ರ ರಿಲೀಸ್ ಆಗಿದೆ. ಅಲ್ಲಿಯೂ ರಜನಿಗೆ ಅಭಿಮಾನಿಗಳಿದ್ದಾರೆ. ಈ ಸಿನಿಮಾಗೆ ವಿದೇಶದಲ್ಲಿ 145 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಈ ಚಿತ್ರದ ಗಳಿಕೆ 410 ಕೋಟಿ ರೂಪಾಯಿ ಆಗಿದೆ.

suddiyaana