400 ಕೋಟಿ ಗಳಿಕೆ ಮಾಡಿ ದಾಖಲೆ ಬರೆದ ಕನ್ನಡದ ‘ಕಾಂತಾರ’
50 ದಿನ ಕಂಪ್ಲೀಟ್.. 400 ಕೋಟಿ ಕಲೆಕ್ಷನ್.. ಎಲ್ಲೆಡೆ ಕಾಂತಾರ ಅಬ್ಬರ

400 ಕೋಟಿ ಗಳಿಕೆ ಮಾಡಿ ದಾಖಲೆ ಬರೆದ ಕನ್ನಡದ ‘ಕಾಂತಾರ’50 ದಿನ ಕಂಪ್ಲೀಟ್.. 400 ಕೋಟಿ ಕಲೆಕ್ಷನ್.. ಎಲ್ಲೆಡೆ ಕಾಂತಾರ ಅಬ್ಬರ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದಾಖಲೆ ಮೇಲೆ ದಾಖಲೆ ಗಳಿಸಿ ಮುನ್ನುಗುತ್ತಿದೆ. ಕಳೆದವಾರವಷ್ಟೇ 50 ದಿನಗಳನ್ನು ಪೂರೈಸಿದ ಕನ್ನಡದ ಚಿತ್ರ ಕಾಂತಾರ ಈಗ ವಿಶ್ವದಾದ್ಯಂತ 400 ಕೋಟಿ ರೂಪಾಯಿ ಗಳಿಕೆ ಕಂಡು ಮತ್ತೊಂದು ದಾಖಲೆ ಬರೆದಿದೆ. ಸೆಪ್ಪೆಂಬರ್ 30ರಂದು ತೆರೆಕಂಡಿರುವ ‘ಕಾಂತಾರ’ ಸಿನಿಮಾ ಕರ್ನಾಟಕದಲ್ಲಿ ಸೂಪರ್ ಹಿಟ್ ಆಗಿತ್ತು.

ಇದನ್ನೂ ಓದಿ :  ‘ಕಥೆ ಕದಿಯುವುದೇ ನನ್ನ ಯಶಸ್ಸಿನ ಗುಟ್ಟು’- ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್

ಕರ್ನಾಟಕದಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಿದ ಕಾಂತಾರ ಚಿತ್ರ ಈಗ ಬರೋಬ್ಬರಿ 168 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಕಂಡಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲಿ 12.70 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಮತ್ತು ಕೇರಳದಲ್ಲಿ 19.20 ಕೋಟಿ ರೂ. ಗಳಿಕೆ ಆಗಿದೆ. ‘ಕಾಂತಾರ’ ಸಿನಿಮಾಗೆ ವಿದೇಶದಲ್ಲಿ ಸಿಕ್ಕಿರುವುದು ಬರೋಬ್ಬರಿ 44.50 ಕೋಟಿ ರೂ. ಕಲೆಕ್ಷನ್‌. ಹಾಗೆಯೇ, ಉತ್ತರ ಭಾರತದಲ್ಲಿ ಸುಮಾರು 96 ಕೋಟಿ ರೂಪಾಯಿ ನಿರ್ಮಾಪಕರಿಗೆ ಸಿಕ್ಕಿದೆ. ಒಟ್ಟು ವಿಶ್ವಾದ್ಯಂತ 400.90 ಕೋಟಿ ರೂಪಾಯಿಯನ್ನ ಕಾಂತಾರ ಚಿತ್ರ ಬಾಚಿಕೊಂಡಿದೆ. ಕಾಂತಾರ ಸಿನಿಮಾ ಮುಂದಿನ ವಾರ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಎರಡು ವಾರಗಳ ನಂತರ ಒಟಿಟಿಯಲ್ಲಿ ಕಾಂತಾರ ಚಿತ್ರ ರಿಲೀಸ್ ಆಗಲಿದೆ.

suddiyaana