ಕ್ಯಾಪ್ಟನ್ ಆಗಿ ಸೂರ್ಯ ಕಂಬ್ಯಾಕ್ – ಟೆಸ್ಟ್‌ ಅಖಾಡಕ್ಕೆ ಬುಮ್ರಾ ಎಂಟ್ರಿ
40 Cr.. IPL ಪ್ಲೇಯರ್ಸ್ ಡಿಮ್ಯಾಂಡ್

ಕ್ಯಾಪ್ಟನ್ ಆಗಿ ಸೂರ್ಯ ಕಂಬ್ಯಾಕ್ –   ಟೆಸ್ಟ್‌ ಅಖಾಡಕ್ಕೆ ಬುಮ್ರಾ ಎಂಟ್ರಿ40 Cr.. IPL  ಪ್ಲೇಯರ್ಸ್ ಡಿಮ್ಯಾಂಡ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿ

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಪ್ರಮುಖ ಆರಂಭಿಕ ಆಟಗಾರ ಡೆವನ್ ಕಾನ್ವೇ ಕನ್ಕಷನ್ ಸಮಸ್ಯೆಯಿಂದಾಗಿ 2ನೇ ಪಂದ್ಯ ಸೇರಿದಂತೆ ಉಳಿದ ಎಲ್ಲಾ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಭ್ಯಾಸದ ವೇಳೆ ಸಹ ಆಟಗಾರನೊಂದಿಗೆ ಡಿಕ್ಕಿಯಾದ ಪರಿಣಾಮ ಗಾಯಗೊಂಡಿದ್ದ ಕಾನ್ವೇ, ವೈದ್ಯಕೀಯ ಪರೀಕ್ಷೆಯ ಬಳಿಕ ಸರಣಿಯಿಂದ ಹೊರಗುಳಿಯುವಂತಾಗಿದೆ. ಅವರ ಸ್ಥಾನಕ್ಕೆ ನಿಕ್ ಕೆಲ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ರೆಡ್ ಬಾಲ್ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಎ ತಂಡದ ಪರ ನಾಳೆ ಲಿಂಕನ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆಡಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಬುಮ್ರಾ ಅವರ ಫಿಟ್ನೆಸ್ ಮೇಲೆ ಎಲ್ಲರ ಕಣ್ಣಿದೆ.

ಇದನ್ನೂ ಓದಿ: ಮೊದಲು ಆಟ.. ಆಮೇಲೆ ಪಟ್ಟ – ವೈಭವ್ ವಿರುದ್ಧ ಸಚಿನ್ ಸಿಡಿಮಿಡಿ

ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯುವ ಸ್ಥಳ ಬದಲಾಗಿದೆ. ಡಿಸೆಂಬರ್ 13ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಇದೀಗ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿ ಕ್ರಿಕೆಟ್ ಸಂಸ್ಥೆಯ ಮನವಿ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಹವಾಮಾನ ವೈಪರೀತ್ಯ ಮತ್ತು ಕ್ರೀಡಾಂಗಣದ ನವೀಕರಣ ಕಾರ್ಯವೂ ಈ ಬದಲಾವಣೆಗೆ ಕಾರಣವಾಗಿದೆ.

ಟಿ-20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್‌ಗೆ ಮತ್ತೆ ಅದೃಷ್ಟ ಒಲಿದಿದೆ. ದೇಶಿಯ ಟೂರ್ನಿಗಳಲ್ಲಿ ನಾಯಕರಾಗಿ ಕಂಬ್ಯಾಕ್ ಮಾಡಿದ್ದು, ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ನೀಡಲು ಸುವರ್ಣ ಅವಕಾಶ ಸಿಕ್ಕಿದೆ. ದೇಸಿಯ ಟೂರ್ನಿಗೆ ಮತ್ತೆ ನಾಯಕನಾಗಿ ಸೂರ್ಯ ಎಂಟ್ರಿ ಕೊಟ್ಟಿದ್ದು, ಸೈಯದ್ ಮುಷ್ತಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗೆ ತಂಡದ ನಾಯಕನನ್ನಾಗಿ ನೇಮಕ ಮಾಡಲಾಗಿದೆ.

ಐಪಿಎಲ್ 2027ರ ಸೀಸನ್‌ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಮಹತ್ವದ ಆಟಗಾರರ ವರ್ಗಾವಣೆ ನಡೆದಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜ್ಯಾಕ್ ಎಡ್ವರ್ಡ್ಸ್ ಚೆನ್ನೈ ತಂಡ ಸೇರಲಿದ್ದು, ಖಲೀಲ್ ಅಹ್ಮದ್ ಮತ್ತು ನಾಥನ್ ಎಲ್ಲಿಸ್ ಹೈದರಾಬಾದ್ ತಂಡಕ್ಕೆ ತೆರಳಲಿದ್ದಾರೆ. ಈ ನಾಲ್ವರು ಆಟಗಾರರ ವರ್ಗಾವಣೆ ಮುಂದಿನ ಸೀಸನ್‌ನ ತಂಡಗಳ ಬಲಾಬಲದ ಮೇಲೆ ಪರಿಣಾಮ ಬೀರಲಿದೆ.

ಐಪಿಎಲ್ 2028ರ ಮೆಗಾ ಹರಾಜಿಗೂ ಮುನ್ನ ಕೆಲವು ಸ್ಟಾರ್ ಆಟಗಾರರು ತಮ್ಮ ತಂಡದಲ್ಲೇ ಉಳಿಯಲು ₹40 ಕೋಟಿ ಬೇಡಿಕೆ ಇಟ್ಟಿದ್ದಾರೆ.  ಕನಿಷ್ಠ ಇಬ್ಬರು ಪ್ರಮುಖ ಆಟಗಾರರು ತಮಗೆ ಕೇಳಿದಷ್ಟು ಮೊತ್ತ ನೀಡದಿದ್ದರೆ ಹಾಲಿ ತಂಡವನ್ನು ತೊರೆಯುವುದಾಗಿ ಫ್ರಾಂಚೈಸಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.  ಹಾಲಿ ತಂಡದೊಂದಿಗೆ ರಿಟೆನ್ಷನ್ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ಮುಕ್ತ ಹರಾಜಿನಲ್ಲಿ ಭಾಗವಹಿಸಿದರೆ ಹೆಚ್ಚಿನ ಹಣ ಗಳಿಸಬಹುದು ಎಂಬುದು ಈ ಆಟಗಾರರ ಲೆಕ್ಕಾಚಾರ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಸೌರವ್ ಗಂಗೂಲಿ ಹರಾಜಿಗೂ ಮುನ್ನವೇ ತಮ್ಮ ಫ್ರಾಂಚೈಸಿಯ ಮಹತ್ವದ ಯೋಜನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಜೇಕ್ ಫ್ರೇಸರ್-ಮೆಕ್​ಗುರ್ಕ್ ಮತ್ತು ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಅವರನ್ನು ಮರಳಿ ತಂಡಕ್ಕೆ ತರಲು ಡಿಸಿ ಬಯಸಿದೆ ಎಂದು ಗಂಗೂಲಿ ಬಹಿರಂಗ ಪಡಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ಕಳಪೆ ಪ್ರದರ್ಶನಕ್ಕೆ ಕೋಚ್ ವಿಜಯ್ ದಹಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಜವಾಬ್ದಾರಿಯ ಕೊರತೆ ಮತ್ತು ವೈಯಕ್ತಿಕ ಅಹಂಕಾರ ಆಟಗಾರರ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಆಯುಷ್ ಬಡೋನಿ ವಿಚಾರದಲ್ಲಿ ತಂಡದೊಳಗಿನ ಪರಿಸ್ಥಿತಿ ಚರ್ಚೆಗೆ ಬಂದಿದೆ. ಮುಂದಿನ ಪಂದ್ಯಗಳಲ್ಲಿ ಆಟಗಾರರು ಜವಾಬ್ದಾರಿಯಿಂದ ಆಡಬೇಕೆಂದು ಕೋಚ್ ಸೂಚಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೈಟ್ ಗ್ರೂಪ್ ‘ಬಿ’ ಪಂದ್ಯದಲ್ಲಿ ಹೈದರಾಬಾದ್ ತಂಡವು ಛತ್ತೀಸ್‌ಗಢ್ ವಿರುದ್ಧ 1 ವಿಕೆಟ್‌ಗಳ ರೋಮಾಂಚಕ ಜಯ ದಾಖಲಿಸಿದೆ. ಹೈದರಾಬಾದ್‌ನ ಜಿಮ್ಖಾನಾ ಮೈದಾನದಲ್ಲಿ ನಡೆದ ಈ ಉಸಿರುಬಿಗಿ ಹಿಡಿಯುವ ಪಂದ್ಯದ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಕರ್ನಾಟಕವನ್ನು ಹಿಂದಿಕ್ಕಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್  2026ರ  ಆಕ್ಷನ್‌ನಲ್ಲಿ  ಭಾರತದ ಮೂವರು ಅನುಭವಿ ಆಟಗಾರರು ಯಾರೂ ಖರೀದಿಸದೆ ಅನ್‌ಸೋಲ್ಡ್ ಆಗಿ ಉಳಿದಿದ್ದಾರೆ. ಈ ಹರಾಜಿನಲ್ಲಿ ‘ಗೋಲ್ಡ್ ಕ್ಯಾಟಗರಿ’ ಅಡಿಯಲ್ಲಿ ಶಾರ್ಟ್‌ಲಿಸ್ಟ್ ಆಗಿದ್ದ ಭಾರತದ ವಿಜಯ ಶಂಕರ್ , ಕೆ. ಎಸ್. ಭರತ್ ಮತ್ತು ತಮಿಳುನಾಡಿನ ಸ್ಪಿನ್ನರ್ ಮುರುಗನ್ ಅಶ್ವಿನ್ ಅವರು ಅಂತಿಮವಾಗಿ ಅನ್‌ಸೋಲ್ಡ್ಆಗಿ ಉಳಿದಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ, ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್‌ನಂತಹ ಬಲಿಷ್ಠ ತಂಡಗಳನ್ನು ಪ್ರತಿನಿಧಿಸಿದ ಅನುಭವ ಹೊಂದಿದ್ದರೂ, ಯುಎಇ ಪಿಚ್‌ಗಳ ಲೆಕ್ಕಾಚಾರದಲ್ಲಿ ಫ್ರಾಂಚೈಸಿಗಳು ಇವರನ್ನು ಕಡೆಗಣಿಸಿವೆ.

 

 

Kishor KV

Leave a Reply

Your email address will not be published. Required fields are marked *