ಶೋರೂಂ ತಲುಪುವ ಮುನ್ನವೇ ಸುಟ್ಟು ಕರಕಲಾದ 40 ಬೈಕ್‌ಗಳು!

ಬಳ್ಳಾರಿಯಲ್ಲಿ ಭೀಕರ ಘಟನೆ ನಡೆದಿದೆ. ಯಮಹ ಕಂಪನಿಯ ಬೈಕ್‌ಗಳನ್ನ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದ್ರಿಂದಾಗಿ 40 ಬೈಕ್‌ಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ: ರಾಶಿಕಾ, ಚೈತ್ರಾ ಕಿತ್ತಾಟ ಮಜವೋ ಮಜಾ! – ರಕ್ಷಿತಾ ಬ್ರೈನ್ ವಾಶ್ ಮಾಡಲು ಮುಂದಾದ ಧ್ರುವಂತ್ ಶೇಪ್‌ಔಟ್!
ಈ ಘಟನೆ ಬಳ್ಳಾರಿ ನಗರದ ಅನಂತಪುರ ರಸ್ತೆಯ ಆಟೋನಗರದಲ್ಲಿ ನಡೆದಿದೆ. ಚೆನ್ನೈನಿಂದ ಯಮಹ ಕಂಪನಿಯ ಬೈಕ್‌ಗಳನ್ನು ಶೋರೂಂಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಲಾರಿ ಪೂರ್ತಿ ಆವರಿಸಿದೆ. ಲಾರಿಯಲ್ಲಿದ್ದ 45 ಲಕ್ಷ ರೂ. ಮೌಲ್ಯದ 40 ಬೈಕ್‌ಗಳು ಸುಟ್ಟು ಕರಕಲಾಗಿವೆ. ಲಾರಿಯಲ್ಲೇ ಕುಳಿತಿದ್ದ ಚಾಲಕ ಕೂಡಲೇ ಎಚ್ಚೆತ್ತುಕೊಂಡು ಲಾರಿಯಿಂದ ಕೆಳಗೆ ಇಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವಷ್ಟರಲ್ಲಿ ಲಾರಿಯಲ್ಲಿದ್ದ ಬೈಕ್‌ಗಳು ಸುಟ್ಟು ಕರಕಲಾಗಿದ್ದವು. ಘಟನೆ ಸಂಬಂಧ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

