ಒಂದೇ ಬಾರಿಗೆ 64 ಮೊಬೈಲ್ ಗಳಲ್ಲಿ ಗೇಮ್ – 74 ವರ್ಷದ ಅಜ್ಜನಿಗೆ ಇದೆಂಥಾ ಚಟ?
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ದರ ವರೆಗೂ ಮೊಬೈಲ್ ಬಳಕೆ ಚಟವಾಗಿ ಪರಿಣಮಿಸಿದೆ. ಹೋದಲ್ಲೆಲ್ಲಾ ಮೊಬೈಲ್ ಹಿಡಿದುಕೊಂಡೇ ತಿರುಗಾಡುತ್ತಾರೆ. ಕೆಲವರು ಒಂದು ಮೊಬೈಲ್ ಸಾಲಲ್ಲ ಇನ್ನೊಂದು ಮೊಬೈಲ್ ಬೇಕು ಅಂತ ತಮ್ಮ ಬಳಿ ಎರಡೆರಡು ಫೋನ್ ಇಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರಂತೂ ಆನ್ ಲೈನ್ ಗೇಮ್ ಅಂತ ಮೊಬೈಲ್ ನಲ್ಲೇ ಕಾಲಕಳೆಯುತ್ತಾರೆ. ಅವರಿಗೆ ಆಟ ಆಡಲು ಹಗಲು, ರಾತ್ರಿ ಅನ್ನೋದಿಲ್ಲ. ನಿರಂತರವಾಗಿ ಗೇಮಿಂಗ್ ನಲ್ಲೇ ಕಾಲ ಕಳೆಯುತ್ತಾರೆ. ಇಲ್ಲೊಬ್ಬ ವ್ಯಕ್ತಿ ಆನ್ ಲೈನ್ ಗೇಮ್ ಚಟ ಬೆಳೆಸಿಕೊಂಡಿದ್ದು, ನಿತ್ಯ 64 ಮೊಬೈಲ್ ಗಳಲ್ಲಿ ಆಟವಾಡುತ್ತಾನಂತೆ!
ಇದನ್ನೂ ಓದಿ: ಅಬ್ಬಾ ಅದೃಷ್ಟ ಚೆನ್ನಾಗಿತ್ತು- ಸಿಂಹಗಳ ಬಾಯಿಂದ ಎಮ್ಮೆ ಗ್ರೇಟ್ ಎಸ್ಕೇಪ್!
ಇತ್ತೀಚಿನ ದಿನಗಳಲ್ಲಿ ಈ ʼಪೋಕೆಮಾನ್ ಗೋʼ ಎನ್ನುವ ಗೇಮ್ ವೊಂದು ಬಹಳ ಜನಪ್ರಿಯವಾಗಿದೆ. ಈ ಗೇಮ್ 8 ವರ್ಷದ ಮಕ್ಕಳಿಂದ ಹಿಡಿದು 80 ವರ್ಷ ದಾಟಿದ ವೃದ್ಧರಿಗೂ ಫೇವರಿಟ್ ಆಗಿದ್ಯಂತೆ. ಹಾಗಾಗಿ ಎಲ್ಲರೂ ಈ ಗೇಮ್ ಆಡಿ ಕಾಲ ಕಳೆಯುತ್ತಾರಂತೆ. ತೈವಾನ್ ಮೂಲದ ಚೆನ್ ಸ್ಯಾನ್-ಯುವಾನ್ ಎಂಬ 74 ವರ್ಷದ ಅಜ್ಜನೊಬ್ಬ ಈ ಗೇಮ್ ನ ದಾಸನಾಗಿದ್ದಾನೆ. ಅದು ನಮ್ಮ ನಿಮ್ಮ ಹಾಗೆ ಒಂದರ್ಧ ಗಂಟೆ ಗೇಮ್ ಆಡಿ, ಅಥವಾ ರೀಲ್ಸ್ ನೋಡುವ ದಾಸನಾಗಿ ಅಲ್ಲ. ಪ್ರತಿನಿತ್ಯ, ಪ್ರತಿ ನಿಮಿಷವೂ ಗೇಮ್ ನಲ್ಲೇ ಕಾಲ ಕಳೆಯುತ್ತಾನಂತೆ.
2018 ರಲ್ಲಿ ಚೆನ್ ಸ್ಯಾನ್-ಯುವಾನ್ ಅವರ ಮೊಮ್ಮಗ ಪೋಕೆಮಾನ್ ಗೋ ಮೊಬೈಲ್ ಗೇಮ್ ನ್ನು ಅಜ್ಜನಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಿನಿಂದ ಹಿಡಿದ ಚಟ ಇಂದಿಗೂ ಹೋಗಿಲ್ವಂತೆ. ಎಲ್ಲಿಯವರೆಗೆ ಅಂದರೆ ಗೇಮ್ ಆಡಲು ಈ ಅಜ್ಜ ಒಂದು ಸೈಕಲ್ ನಲ್ಲಿ ದೊಡ್ಡ ಪರದೆಯನ್ನೇ ಹಾಕಿರುವಂತೆ ಸ್ಟ್ಯಾಂಡ್ ವೊಂದನ್ನು ಇಟ್ಟು ಅದರಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 64 ಮೊಬೈಲ್ ಫೋನ್ ಇಟ್ಟಿದ್ದಾರೆ. ಅಲ್ಲದೇ ಈ ಮೊಬೈಲ್ ಗಳಲ್ಲಿ ನಿರಂತರವಾಗಿ ಗೇಮ್ ಆಡುತ್ತಾರೆ. ಹಾಗಾಗಿ ಈ ಅಜ್ಜನನ್ನು ಸ್ಥಳೀಯರು ʼಪೋಕೆಮಾನ್ ಗೋ ಅಜ್ಜʼ ಎಂದೇ ಕರೆಯುತ್ತಾರೆ. ಆ ಹೆಸರಿನಿಂದಲೇ ಇವರು ಖ್ಯಾತಿಯನ್ನು ಗಳಿಸಿದ್ದಾರೆ. ಇವರ ಈ ಗೇಮ್ ಚಟದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
View this post on Instagram