ಎದೆ ಉರಿಯಿಂದ ಬಳಲುತ್ತಿದ್ದ 4 ವರ್ಷದ ಬಾಲಕ ಸಾವು – ಹೃದಯಾಘಾತಕ್ಕೆ ಬಲಿಯಾದ್ನಾ?

ಎದೆ ಉರಿಯಿಂದ ಬಳಲುತ್ತಿದ್ದ 4 ವರ್ಷದ ಬಾಲಕ ಸಾವು – ಹೃದಯಾಘಾತಕ್ಕೆ ಬಲಿಯಾದ್ನಾ?

ಸಾವು ಯಾವ ರೂಪದಲ್ಲಿ ಬರುತ್ತೆ ಅಂತ ಹೇಳೋದಿಕ್ಕೆ ಆಗಲ್ಲ.. ಇದೀಗ ಇಲ್ಲೊಂದು ಕಡೆ ಪುಟ್ಟ ಬಾಲಕ ವಿಧಿಯ ಆಟಕ್ಕೆ ಬಲಿಯಾಗಿದ್ದಾನೆ. ಬಾಲಕನಿಗೆ ಎದೆ ಉರಿ ಕಾಣಿಸಿಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಪ್ರಾಣ ಪಕ್ಷಿ ಹಾರಿಹೋಗಿದೆ.

ಇದನ್ನೂ ಓದಿ: ಕೆಣಕಿ ಕೆಟ್ಟ ಶ್ರೀಲಂಕಾ ಆಟಗಾರರಿಗೆ ಶಿಕ್ಷೆ – ವೈಭವ್ ಸೂರ್ಯವಂಶಿ ನಿರ್ದೋಷಿ

ಈ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿ ನಡೆದಿದೆ. ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ ವೈಷ್ಣವ್ (4) ಮೃತ ಬಾಲಕ. ವೈಷ್ಣವ್ ತನಗೆ ಎದೆ ಉರಿಯುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದಾನೆ. ಆರಂಭದಲ್ಲಿ ಪೋಷಕರು ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಭಾವಿಸಿ, ಮನೆಮದ್ದುಗಳನ್ನು ನೀಡಿದ್ದರು. ಆದರೆ, ವೈಷ್ಣವ್ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.

ಇನ್ನು ಮನೆಮದ್ದು ನೀಡಿದ್ರು ಬಾಲಕ ಸ್ಥಿತಿ ಗಂಭೀರವಾಗಿದೆ. ಕೂಡಲೇ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಬಾಲಕ ವೈಷ್ಣವ್ ಕೊನೆಯುಸಿರೆಳೆದಿದ್ದಾನೆ. ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Shwetha M

Leave a Reply

Your email address will not be published. Required fields are marked *