RCBಗೆ ಫಾರಿನರ್ಸ್ ಪವರ್ – ಸಾಲ್ಟ್ ಓಪನರ್.. ಟಿಮ್ ಫಿನಿಶರ್
ಜೇಕಬ್ ಡಫಿ ಬೆಂಚ್ ಕಾಯಿಸ್ಬೇಕಾ?

ರಜತ್ ಪಾಟಿದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರಲ್ಲೂ ಕಪ್ ಗೆಲ್ಲುವಂಥ ಸ್ಟ್ರಾಂಗೆಸ್ಟ್ ಟೀಂ ಎನಿಸಿಕೊಳ್ತಿದೆ. ಆಲ್ರೆಡಿ ಪ್ಲೇಯಿಂಗ್ 11 ಲೆಕ್ಕಾಚಾರವೂ ನಡೀತಿದೆ. ಌಂಡ್ ನಾಲ್ವರು ವಿದೇಶಿ ಆಟಗಾರರ ಕೋಟಾದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಅನ್ನೋ ಬ್ಲ್ಯೂಪ್ರಿಂಟ್ ಕೂಡ ರೆಡಿಯಾಗಿದೆ.
ಇದನ್ನೂ ಓದಿ : ನನ್ನ ಹಿಂದೆ ಬಿದ್ದು, ಪದೇ ಪದೆ ಮೆಸೆಜ್ ಮಾಡ್ತಿದ್ರು! – ಸೂರ್ಯಕುಮಾರ್ ಯಾದವ್ ಮೇಲೆ ಖ್ಯಾತ ನಟಿ ಆರೋಪ!
ಮೆಗಾ ಆಕ್ಷನ್ ಹಾಗೇ ಮಿನಿ ಆಕ್ಷನ್ನಲ್ಲಿ ದಿ ಬೆಸ್ಟ್ ಎನ್ನುವಂತ ಪ್ಲೇಯರ್ಗಳನ್ನೇ ಪಿಕ್ ಮಾಡಿರೋ ಆರ್‌ಸಿಬಿ ಮ್ಯಾನೇಜ್ಮೆಂಟ್ ಪ್ಲೇಯಿಂಗ್ 11ನಲ್ಲೂ ಚ್ಯೂಸಿಯಾಗಿರ್ತಾರೆ. ಒಂದೊಂದು ಸ್ಲಾಟ್ಗೂ ಸಾಕಷ್ಟು ಆಪ್ಶನ್ಸ್ ಇದ್ರೂ ಅಳೆದು ತೂಗಿ ಫೈನಲ್ ಟೀಂ ಸೆಟ್ ಮಾಡ್ತಾರೆ. ಌಂಡ್ ಫಾರಿನ್ ಕೋಟಾದಲ್ಲಿ ಈ ನಾಲ್ವರು ಅಖಾಡಕ್ಕಿಳಿಯೋದಂತೂ ಪಕ್ಕಾ. ಕಳೆದ ವರ್ಷವೇ ಕಪ್ ಗೆಲ್ಲಿಸಿಕೊಟ್ಟಿರೋ ಈ ನಾಲ್ವರೂ ಮುಂದಿನ ಆವೃತ್ತಿಯಲ್ಲೂ ರಿಯಲ್ ಗೇಮ್ ಚೇಂಜರ್ಸ್ ಆಗ್ತಾರೆ. ಅದ್ರಲ್ಲಿ ನಂಬರ್ 1 ಹೊಡಿಬಡಿ ಬ್ಯಾಟರ್ ಫಿಲ್ ಸಾಲ್ಟ್.
ಆರ್ ಸಿಬಿಗೆ ಡ್ಯಾಶಿಂಗ್ ಓಪನರ್ ಫಿಲ್ ಸಾಲ್ಟ್!
ನೆಕ್ಸ್ಟ್ ಸೀಸನ್ನಲ್ಲಿ ಆರ್‌ಸಿಬಿ ಪರ ಪ್ಲೇಯಿಂಗ್ 11ನಲ್ಲಿ ಸೆಲೆಕ್ಟ್ ಆಗುವಂಥ ಫಸ್ಟ್ ಪ್ಲೇಯರ್ ಅಂದ್ರೆ ಅದು ಫಿಲ್ ಸಾಲ್ಟ್. 2025 ರಲ್ಲಿ ಓಪನರ್ ಆಗಿ ಸಾಲ್ಟ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಜೊತೆ ಸಾಲಿಡ್ ಪಾರ್ಟ್ನರ್ಶಿಪ್ ನೀಡಿದ್ದಾರೆ. ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡೋದ್ರಿಂದ ಎದುರಾಳಿ ತಂಡದ ಬೌಲರ್ಗಳ ಕಾನ್ಫಿಡೆನ್ಸ್ನೇ ಡೌನ್ ಮಾಡಿದ್ರು. ಹೀಗಾಗಿ ನೆಕ್ಸ್ಟ್ ಸೀಸನ್ಗೂ ಕೊಹ್ಲಿ ಜೊತೆ ಇನ್ನಿಂಗ್ಸ್ ತೆರೆಯೋದು ಪಕ್ಕಾ. ಇನ್ನು ಐಪಿಎಲ್ನಲ್ಲಿ ಮೂರು ಸೀಸನ್ ಆಡಿರೋ ಸಾಲ್ಟ್ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ. 34 ಪಂದ್ಯಗಳಲ್ಲಿ 175.70 ರ ಸ್ಟ್ರೈಕ್ ರೇಟ್ ಮತ್ತು 34.06 ರ ಸರಾಸರಿಯಲ್ಲಿ 1,056 ರನ್ ಗಳಿಸಿದ್ದಾರೆ. ಇದ್ರಲ್ಲಿ 10 ಅರ್ಧಶತಕಗಳೂ ಸೇರಿವೆ.
ನ್ಯೂ ಬಾಲ್ & ಡೆತ್ ಓವರ್ ಸ್ಪೆಷಲಿಸ್ಟ್ ಜೋಶ್ ಹೇಜಲ್ ವುಡ್!
ಇನ್ನು ಬೌಲಿಂಗ್ನಲ್ಲಿ ಬೆಂಗಳೂರು ತಂಡದ ಬ್ರಹ್ಮಾಸ್ತ್ರವಾಗಿರೋ ಜೋಶ್ ಹೇಜಲ್ವುಡ್ ಕೂಡ ಕಣಕ್ಕಿಳಿಯೋದು ಪಕ್ಕಾ. ಅವ್ರ ಬೌಲಿಂಗ್ ಸ್ಕಿಲ್, ಸ್ವಿಂಗ್, ಲೈನ್ ಌಂಡ್ ಲೆಂಗ್ತ್, ವಿಕೆಟ್ ಟೇಕಿಂಗ್ ಎಬಿಲಿಟಿ ಎಲ್ಲವೂ ತಂಡಕ್ಕೆ ಪ್ಲಸ್ ಆಗಿದೆ. ಆರ್‌ಸಿಬಿ ಬೌಲಿಂಗ್ ದಾಳಿಯ ಮೇನ್ ವೆಪನ್ ಆಗಿದ್ದಾರೆ. ಇಂಜುರಿ ಅಥವಾ ಪ್ರೆಶರ್ ಬಿಟ್ರೆ 2026ರ ಐಪಿಎಲ್ನಲ್ಲೂ ಆರ್ಸಿಬಿಯ ಫಸ್ಟ್ ಪ್ರಿಯಾರಿಟಿ ಬೌಲರ್ ಇವ್ರೇ ಆಗಿರ್ತಾರೆ. ಇನ್ನು ಐಪಿಎಲ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್‌ವುಡ್ 39 ಪಂದ್ಯಗಳಲ್ಲಿ ಆಡಿದ್ದಾರೆ. 57 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಌಂಡ್ ಅವರ ಎಕಾನಮಿ ರೇಟ್ 8.27 ಆಗಿದೆ.
ಮಿಡಲ್ ಆರ್ಡರ್ ನಲ್ಲಿ ಟಿಮ್ ಡೇವಿಡ್ ಬೆಸ್ಟ್ ಫಿನಿಶರ್!
ಇನ್ನು ಆರ್‌ಸಿಬಿ ಖರೀದಿ ಮಾಡಿದಂತ ಮತ್ತೊಬ್ಬ ವ್ಯಾಲ್ಯುಯೇಬಲ್ ಪ್ಲೇಯರ್ ಟಿಮ್ ಡೇವಿಡ್. ಕಳೆದ ವರ್ಷ ಆರ್‌ಸಿಬಿ ಪರ ಬೆಸ್ಟ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ರು. ಬಿಗ್ ಹಿಟ್ಗಳ ಮೂಲಕ ಪಂದ್ಯದ ಗತಿಯನ್ನೇ ಬದಲಿಸೋ ಸಾಮರ್ಥ್ಯ ಅವ್ರಲ್ಲಿದೆ. ಬಿಗ್ ಟಾರ್ಗೆಟ್, ಚೇಸಿಂಗ್ ಅಂತಾ ಬಂದಾಗ ಡೇವಿಡ್ ಮೇಲೆ ನಂಬಿಕೆ ಇಡಬಹುದು. ಇನ್ನು ಐಪಿಎಲ್ನಲ್ಲಿ ಐಪಿಎಲ್ ಪಂದ್ಯಗಳನ್ನ ಆಡಿರುವ ಟಿಮ್ ಡೇವಿಡ್ 173.36 ರ ಸ್ಟ್ರೈಕ್ ರೇಟ್ ಮತ್ತು 32.54 ರ ಸರಾಸರಿಯಲ್ಲಿ 846 ರನ್ ಗಳಿಸಿದ್ದಾರೆ, ಅವರ ಅತ್ಯಧಿಕ ಸ್ಕೋರ್ ಔಟಾಗದೆ 50 ರನ್ ಆಗಿದೆ. ಸೋ ಈ ವರ್ಷವೂ ಮುಲಾಜಿಲ್ಲದೆ ಪ್ಲೇಯಿಂಗ್ 11ನಲ್ಲಿರ್ತಾರೆ.
ಬ್ಯಾಟಿಂಗ್ & ಬೌಲಿಂಗ್ ನಲ್ಲೂ ಸದ್ದು ಮಾಡುವ ಶೆಫರ್ಡ್!
ಇನ್ನು ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಆರ್ಸಿಬಿಗೆ ಕೆಳ ಕ್ರಮಾಂಕದ ಪವರ್ ಹಿಟ್ಟಿಂಗ್ ಪ್ಲೇಯರ್ ಆಗಿದ್ದಾರೆ. ಹಾಗೇ ಬೌಲಿಂಗ್ನಲ್ಲೂ ಇಂಪ್ಯಾಕ್ಟ್ ಮಾಡಬಲ್ಲರು. 2025 ರಲ್ಲಿ ಪ್ರಶಸ್ತಿ ಗೆಲುವಿನಲ್ಲಿ ಬೆಂಗಳೂರು ಪರ ನಿರ್ಣಾಯಕ ಪಾತ್ರ ವಹಿಸಿದ್ರು. ಸೋ ನೆಕ್ಸ್ಟ್ ಸೀಸನ್ನಲ್ಲೂ ಆರ್ಸಿಬಿಯ ಮ್ಯಾಚ್ ಟರ್ನಿಂಗ್ ಪ್ಲೇಯರ್ ಆಗ್ತಾರೆ. ಇನ್ನು ರೊಮಾರಿಯೊ ಶೆಫರ್ಡ್ 18 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅದೂ ಕೂಡ 212.64 ರ ಸಾಲಿಡ್ ಸ್ಟ್ರೈಕ್ ರೇಟ್‌ನಲ್ಲಿ 185 ರನ್ ಗಳಿಸಿದ್ದಾರೆ ಮತ್ತು 10 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಸೋ ಈ ನಾಲ್ವರು ನೆಕ್ಸ್ಟ್ ಸೀಸನ್ನಲ್ಲಿ ಪ್ಲೇಯಿಂಗ್ 11ನಲ್ಲಿ ಆಡೋದಂತೂ ಪಕ್ಕಾ. ಈ ಸಲ ಮಿನಿ ಆಕ್ಷನ್ನಲ್ಲಿ ಜೇಕಬ್ ಡಫಿ ಕೂಡ ಬಂದಿರೋದ್ರಿಂದ ಅವ್ರು ಕೂಡ ರೇಸ್ನಲ್ಲಿದ್ದಾರೆ. ಹೇಜಲ್ವುಡ್ ಗೆ ಬ್ಯಾಕಪ್ ಆಗಿರಲಿದ್ದು ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ.

ನೋಡಿರಿ

