4 ಓವರ್‌, 0 ರನ್, 3 ವಿಕೆಟ್‌ – ಚರಿತ್ರೆ ಸೃಷ್ಟಿಸಿದ RCB ಬೌಲರ್
ವಿಶ್ವದಾಖಲೆ ವೀರ ಲಾಕಿ ಫರ್ಗುಸನ್

4 ಓವರ್‌, 0 ರನ್, 3 ವಿಕೆಟ್‌ – ಚರಿತ್ರೆ ಸೃಷ್ಟಿಸಿದ RCB ಬೌಲರ್ವಿಶ್ವದಾಖಲೆ ವೀರ ಲಾಕಿ ಫರ್ಗುಸನ್

ಆರ್‌ಸಿಬಿ ಆಟಗಾರ ಟಿ20 ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಎನ್ನುವ ದಾಖಲೆಯನ್ನು ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಬರೆದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಈ ಹಿಂದೆ ಯಾವೊಬ್ಬ ಬೌಲರ್ ಮಾಡದ ದಾಖಲೆಯನ್ನು ನಿರ್ಮಿಸಿದ ಲಾಕಿ ನಮ್ಮ Rcb ತಂಡದ ಬೌಲರ್ ಕೂಡಾ ಹೌದು.  Rcbಯಲ್ಲಿ ದುಬಾರಿ ಬೌಲರ್ ಅಂತಾ ಹಿಗ್ಗಾಮುಗ್ಗಾ ಟ್ರೋಲ್ ಆಗಿರೋ ಲಾಕಿ, ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ನಲ್ಲಿ ದಾಖಲೆಗಳನ್ನೇ ಧೂಳಿಪಟ ಮಾಡಿರೋ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  GILLಗೆ ಗೇಟ್ ​ಪಾಸ್ ಕೊಟ್ಟ BCCI – ವಿಶ್ವಕಪ್ ಹೆಸ್ರಲ್ಲಿ ಬ್ಯುಸಿನೆಸ್ ಮಾಡಿದ್ರಾ?

T20 ವಿಶ್ವಕಪ್​​ನಲ್ಲಿ ಯಾವ ಆಟಗಾರ ಯಾವ ಕ್ಷಣದಲ್ಲಿ ಬೇಕಾದರೂ ಹೀರೋ ಆಗಬಲ್ಲ. ಇಲ್ಲ, ದಿಢೀರ್ ಅಂತಾ ಝೀರೋ ಲೆವೆಲ್‌ಗೂ ಇಳಿಯಬಲ್ಲ. ಇದೀಗ ರಾತ್ರೋರಾತ್ರಿ ಕಿವೀಸ್ ತಂಡದ ಹೀರೋ ಆಗಿ ಮೆರೆದಿದ್ದಾರೆ ಲಾಕಿ ಫರ್ಗುಸನ್. ಪಪುವಾ ನ್ಯೂಗಿನಿಯಾ ತಂಡದ ಕಿವಿಯನ್ನು ಚೆನ್ನಾಗಿಯೇ ಹಿಂಡಿದ್ದಾರೆ ಕಿವೀಸ್‌ನ ಬೌಲರ್ ಲಾಕಿ. ಅದು ಕೂಡಾ ಊಹೆಗೂ ಮೀರಿದ ಬೌಲಿಂಗ್ ಮ್ಯಾಜಿಕ್ ಮೂಲಕ.

ಪಪುವಾ ನ್ಯೂಗಿನಿಯಾ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಲಾಕಿ, 4 ಓವರ್ ಮಾಡಿದ್ದಾರೆ. ಇದ್ರಲ್ಲಿ ನಾಲ್ಕಕ್ಕೆ ನಾಲ್ಕು ಓವರ್ ಕೂಡಾ ಮೇಡನ್‌ ಓವರ್. ಜೊತೆಗೆ ಲಾಕಿ ಕಬಳಿಸಿದ್ದು ಪ್ರಮುಖ 3 ವಿಕೆಟ್‌ ಗಳನ್ನು. ಜೊತೆಗೆ ಈ ಮ್ಯಾಚ್‌ನ ಗೆಲುವಿನ ಕ್ರೆಡಿಟ್ ಕೂಡಾ ಆರ್‌ಸಿಬಿ ಆಟಗಾರನಿಗೆ ಸಂದಿದೆ. ಟಿ20 ಪಂದ್ಯವೊಂದರಲ್ಲಿ 4 ಓವರ್‌ ಮೇಡನ್‌ ಹಾಕಿದ ವಿಶ್ವದ ಕೇವಲ 3ನೇ ಬೌಲರ್‌ ಲಾಕಿ. ಇದಕ್ಕೂ ಮೊದಲು ಕೆನಡಾದ ಸಾದ್‌ ಝಫರ್‌, ವಿದರ್ಭದ ಅಕ್ಷಯ್‌ ಕರ್ನೇವಾರ್‌ ಈ ಸಾಧನೆ ಮಾಡಿದ್ದರು. ಅವರಿಬ್ಬರೂ ತಲಾ 2 ವಿಕೆಟ್‌ ಕಿತ್ತಿದ್ದರು. ಕೆನಡಾದ ಸಾದ್‌ ಝಫರ್‌ 2021ರ ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪನಾಮಾ ಎದುರು 4 ಓವರ್‌ನಲ್ಲಿ 4 ಮೇಡನ್ ಓವರ್ ಮಾಡಿ 2 ವಿಕೆಟ್ ಕಬಳಿಸಿದ್ದರು. ಆದರೆ ವಿಶ್ವಕಪ್​ ಇತಿಹಾಸದಲ್ಲಿ  ಎಲ್ಲಾ 24 ಎಸೆತಗಳನ್ನ  ಡಾಟ್ ಮಾಲ್ ಮಾಡಿದ ಏಕೈಕ ಬೌಲರ್ ಎಂಬ ಖ್ಯಾತಿಗೆ ಫರ್ಗ್ಯುಸನ್ ಪಾತ್ರರಾಗಿದ್ದಾರೆ.

ಲಾಕಿ ಫರ್ಗ್ಯೂಸನ್ ಬೌಲಿಂಗ್ ಪ್ರದರ್ಶನವನ್ನು ನಾಯಕ ಕೇನ್ ವಿಲಿಯಮ್ಸನ್‌ ಕೊಂಡಾಡಿದ್ದಾರೆ.  ಇದು ನಿಜಕ್ಕೂ ಅತ್ಯದ್ಬುತವಾದ ಬೌಲಿಂಗ್ ಆಗಿತ್ತು. ಈ ರೀತಿಯ ಬೌಲಿಂಗ್ ಪ್ರದರ್ಶನ ನಮಗೆ ಪದೇ ಪದೇ ನೋಡಲು ಸಿಗುವುದಿಲ್ಲ. ಆದರೆ ಲಾಕಿ ಸ್ಥಿರವಾಗಿ ಬೌಲಿಂಗ್ ಪ್ರದರ್ಶನ ತೋರಿದ್ದರಿಂದ ಯಶಸ್ಸು ಸಿಕ್ಕಿತು. ಅದರಲ್ಲೂ 4 ಓವರ್ ಮೇಡನ್ ಮಾಡಿದ್ದು ನಿಜಕ್ಕೂ ಅದ್ಭುತವಾಗಿತ್ತು ಎಂದಿದ್ದಾರೆ.

ಫರ್ಗುಸನ್ ದಾಖಲೆಯ 24 ಡಾಟ್ ಬಾಲ್‌ಗಳನ್ನು ಬೌಲ್ ಮಾಡುವ ಮೂಲಕ ನಂಬಲಸಾಧ್ಯವಾದ ದಾಖಲೆ ಮಾಡಿರೋದು ನೋಡಿ ಆರ್‌ಸಿಬಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಮನಸೊಳಗೆ ಬೈದುಕೊಂಡಿದ್ದು ಇದೇ ಬಿಡಿ. ಯಾಕೆಂದ್ರೆ, ಈ ಬಾರಿ ಐಪಿಎಲ್ ಸೀಸನ್‌ನ ಫಸ್ಟ್ ಹಾಫ್ ಪಂದ್ಯಗಳಲ್ಲಿ ಆರ್‌ಸಿಬಿ ಟೀಮ್ ಸೋಲಿಸಿದ್ದೇ ಬೌಲರ್ಸ್. ಅವ್ರಲ್ಲಿ ದುಬಾರಿ ಬೌಲರ್ ಅಂತಾ ಕರೆಸಿಕೊಂಡಿದ್ದವ್ರಲ್ಲಿ ಲಾಕಿ ಕೂಡಾ ಒಬ್ರು. ಲಾಕಿ ಫರ್ಗುಸನ್ ಹೇಳಿಕೇಳಿ ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಬೆಂಕಿ ಬೌಲರ್. ಆದ್ರೆ, ಯಾಕೋ ಈ ಬಾರಿ ಐಪಿಎಲ್‌ನಲ್ಲಿ ಲಾಕಿಯ ಬೌಲಿಂಗ್‌ನಲ್ಲಿ ಬೆಂಕಿಯೂ ಇರಲಿಲ್ಲ, ಬಿರುಗಾಳಿಯೂ ಬೀಸಿಲ್ಲ. ಆದ್ರೆ, ತನ್ನಲ್ಲಿ ಇನ್ನೂ ಬೌಲಿಂಗ್ ಮ್ಯಾಜಿಕ್ ಮಾಡೋ ಕೆಪಾಸಿಟಿಯಿದೆ ಅಂತಾ ಪ್ರೂವ್ ಮಾಡಿದ್ದಾರೆ ಲಾಕಿ. ಕ್ರಿಕೆಟ್​ ಚರಿತ್ರೆಯಲ್ಲೇ ಯಾರೂ ಮಾಡದ ದಾಖಲೆ ಮಾಡಿರುವ ಲಾಕಿ, ತನ್ನ ಬೌಲಿಂಗ್ ಫಾರ್ಮ್ ಕೂಡಾ ಮರಳಿಪಡೆದಿದ್ದಾರೆ. ಜೊತೆಗೆ ಆರ್‌ಸಿಬಿ ಟೀಮ್‌ನಲ್ಲಿ ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ಟಿ20 ವಿಶ್ವಕಪ್ ಕ್ರಿಕೆಟ್ ನಲಿ ಲಾಕಿ ಫರ್ಗುಸನ್ ಮಾಡಿರೋ ಈ ಸಾಧನೆ ವಿಶೇಷ ದಾಖಲೆಯಾಗಿ ಉಳಿದುಕೊಳ್ಳಲಿದೆ ಎಂದು ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿದಿದ್ದಾರೆ.

Shwetha M