ಏಷ್ಯಾಕಪ್ ಗೆ ನಾಲ್ವರು MI ಸ್ಟಾರ್ಸ್? – ಸೂರ್ಯ, ಪಾಂಡ್ಯ ಫಿಕ್ಸ್.. ಬುಮ್ರಾ?
2026ರ ವಿಶ್ವಕಪ್ ಟಾರ್ಗೆಟ್ ಹೇಗಿದೆ?

ಆರು ತಿಂಗಳ ಗ್ಯಾಪ್ ಬಳಿಕ ಟಿ-20ಐ ಫಾರ್ಮೆಟ್ಗೆ ಕಮ್ ಬ್ಯಾಕ್ ಮಾಡ್ತಿರೋ ಟೀಂ ಇಂಡಿಯಾ ಏಷ್ಯಾಕಪ್ ಮೂಲಕ ಚುಟುಕು ಸಮರದ ಅಖಾಡಕ್ಕೆ ಇಳಿಯಲಿದೆ. 2026ರ ಟಿ-20ವಿಶ್ವಕಪ್ನ ಟಾರ್ಗೆಟ್ ಮಾಡಿ ಈ ಟೂರ್ನಿಯಲ್ಲಿ ಕಪ್ ಮೇಲೆ ಕಣ್ಣಿಟ್ಟಿದೆ. ಅಲ್ದೇ ಕಳೆದೊಂದು ವರ್ಷದಿಂದ ಭಾರತದ ಟಿ20ಐ ರೆಕಾರ್ಡ್ಸ್ ಅತ್ಯದ್ಭುತವಾಗಿದೆ. ಸೋ ಈಗ ಆ ಲೆಗೆಸಿಯನ್ನ ಕಂಟಿನ್ಯೂ ಮಾಡ್ಕೊಂಡು ಹೋಗ್ಬೇಕಾಗಿದೆ. ಹೀಗಾಗಿ ಅಳೆದು ತೂಗಿ ಆಟಗಾರರನ್ನ ಫೈನಲ್ ಮಾಡ್ಬೇಕಾಗಿದೆ. ಸದ್ಯ ಈ ಚಾನ್ಸ್ ಲಿಸ್ಟ್ ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ನಾಲ್ವರು ಆಟಗಾರರಿದ್ದಾರೆ.
ಇದನ್ನೂ ಓದಿ : KL ಮೇಲೆ ಲಕ್ನೋ ಸೂಪರ್ ಜೇಂಟ್ಸ್ ದ್ವೇಷ – ಫೋಟೋಗಳಲ್ಲೂ ಸಣ್ಣತನ ಬೇಕಿತ್ತಾ?
ಏಷ್ಯಾಕಪ್ ಟೂರ್ನಿಗೆ ಕ್ಯಾಪ್ಟನ್ ಆಗ್ತಾರಾ ಸೂರ್ಯಕುಮಾರ್?
ಭಾರತದ ಪ್ರಸ್ತುತ ಟಿ20ಐ ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹಾಗೇ ಬಿಗ್ ಸ್ಟ್ರೆಂಥ್ ಕೂಡ ಆಗಿದ್ದಾರೆ. 360 ಡಿಗ್ರಿ ಬ್ಯಾಟಿಂಗ್ ಶೈಲಿ ಮತ್ತು ಟಿ20ಗಳಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್, ಯುಎಇಯಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಕಪ್ 2025 ರಲ್ಲಿ ಭಾರತವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಇನ್ನು ಭಾರತದ ಪರ ಸೂರ್ಯಕುಮಾರ್ ಯಾದವ್ 83 ಟಿ20 ಪಂದ್ಯಗಳನ್ನ ಆಡಿದ್ದು 2,598 ರನ್ ಗಳಿಸಿದ್ದಾರೆ. 167ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ.
ಬ್ಯಾಟಿಂಗ್ & ಬೌಲಿಂಗ್ ಸ್ಟ್ರೆಂತ್ ಆಗ್ತಾರೆ ಹಾರ್ದಿಕ್ ಪಾಂಡ್ಯ!
ಇನ್ನು ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೆಸರೂ ಕೂಡ ಏಷ್ಯಾಕಪ್ ಲಿಸ್ಟ್ ನಲ್ಲಿದೆ. ಸ್ಟಾರ್ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ತಂಡಕ್ಕೆ ಬ್ಯಾಲೆನ್ಸಿಂಗ್ ಸಪೋರ್ಟ್ ನೀಡ್ತಾರೆ. ಸ್ಫೋಟಕ ಬ್ಯಾಟಿಂಗ್ ಮತ್ತು ಪರಿಣಾಮಕಾರಿ ಸೀಮ್ ಬೌಲಿಂಗ್‌ಗೆ ಹೆಸರುವಾಸಿಯಾದ ಹಾರ್ದಿಕ್ ಏಷ್ಯಾಕಪ್ನಲ್ಲಿ ಆಡೋದು ಬಹುತೇಕ ಫಿಕ್ಸ್ ಆಗಿದೆ. ಇನ್ನು ಹಾರ್ದಿಕ್ ಪಾಂಡ್ಯ ಭಾರತ ಪರ 114 ಟಿ20 ಪಂದ್ಯಗಳನ್ನ ಆಡಿದ್ದು 1,812 ರನ್ ಗಳಿಸಿದ್ದಾರೆ. 141.67 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು 94 ವಿಕೆಟ್ಗಳನ್ನ ಬೇಟೆಯಾಡಿದ್ದಾರೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ಆಡ್ತಾರಾ?
ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಜಸ್ಪ್ರೀತ್ ಬುಮ್ರಾ ಭಾರತದ ಗೆಲುವಿನ ಅತಿದೊಡ್ಡ ಸ್ಟ್ರೆಂಥ್ ಆಗಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಲ್ಲಿ ಭಾಗಿಯಾಗಿದ್ರು. ಬಟ್ ಫಿಟ್ನೆಸ್ ಕಾರಣದಿಂದಾಗಿ ಕೇವಲ ಮೂರು ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಯ್ತು. ಹೀಗಾಗಿ ಏಷ್ಯಾಕಪ್ನಲ್ಲಿ ಬುಮ್ರಾರನ್ನ ತಂಡಕ್ಕೆ ಸೇರಿಸಿಕೊಳ್ಬೇಕೋ ಬೇಡ್ವೋ ಅನ್ನೋ ಕನ್ಫ್ಯೂಷನ್ ಇದೆ. =ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದ ನಂತರ ಜಸ್ಪ್ರೀತ್ ಏಷ್ಯಾ ಕಪ್‌ಗೆ ಫಿಟ್ ಆಗಿದ್ದಾರೆ. ಐಪಿಎಲ್ 2025 ರಲ್ಲಿ 6.68 ರ ಎಕಾನಮಿ ದರದೊಂದಿಗೆ 18 ವಿಕೆಟ್‌ಗಳನ್ನು ಕಬಳಿಸಿದ್ರು. ಹೀಗಾಗಿ ಬುಮ್ರಾ ಯುಎಇಯಲ್ಲಿ ನಡೆಯಲಿರುವ ಏಷ್ಯಾ ಕಪ್ 2025 ರಲ್ಲಿ ಭಾರತಕ್ಕಾಗಿ ಆಡುವ ನಿರೀಕ್ಷೆಗಳಿವೆ. ಇನ್ನು ಬೌಲರ್ ಜಸ್ಪ್ರೀತ್ ಬುಮ್ರಾ ಭಾರತದ ಪರ 70 ಟಿ20 ಪಂದ್ಯಗಳಲ್ಲಿ 89 ವಿಕೆಟ್ ಉರುಳಿಸಿದ್ದಾರೆ. ಹಾಗೇನಾದ್ರೂ ಬೂಮ್ರಾ ಏಷ್ಯಾಕಪ್ಗೆ ಬಂದ್ರೆ ಟೀಂ ಇಂಡಿಯಾ ಮತ್ತಷ್ಟು ಸ್ಟ್ರಾಂಗ್ ಆಗಲಿದೆ.
ಮಿಡಲ್ ಆರ್ಡರ್ ಮೇಲೆ ಕಣ್ಣಿಟ್ಟಿದ್ದಾರೆ ತಿಲಕ್ ವರ್ಮಾ!
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕ ಸ್ಟ್ರೆಂಥ್ ಆಗುವ ಕೆಪಾಸಿಟಿ ತಿಲಕ್ ವರ್ಮಾಗಿದೆ. ಕಳೆದ ಕೆಲವು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಮತ್ತು ಭಾರತ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಭಾರತ ಪರ 83 ಟಿ20 ಪಂದ್ಯಗಳಲ್ಲಿ 749 ರನ್ ಗಳಿಸಿದ್ದಾರೆ, ಅವರ ಸ್ಟ್ರೈಕ್ ರೇಟ್ 155.07 ರಷ್ಟಿದೆ. ಇವ್ರೂ ಕೂಡ ಏಷ್ಯಾಕಪ್ 2025ರ ಟೂರ್ನಿಗೆ ಸೆಲೆಕ್ಟ್ ಆಗುವ ಆಸೆಯಲ್ಲಿದ್ದಾರೆ.

ನೋಡಿರಿ

