ಶಬರಿಮಲೆ ಯಾತ್ರೆ – 35 ದಿನಗಳಲ್ಲಿ 23 ಮಂದಿ ಹೃದಯಾಘಾತದಿಂದ ಸಾವು

ಶಬರಿಮಲೆ ಯಾತ್ರೆ – 35 ದಿನಗಳಲ್ಲಿ 23 ಮಂದಿ ಹೃದಯಾಘಾತದಿಂದ ಸಾವು

ಪತ್ತನಂತಿಟ್ಟ: ಈ ವರ್ಷದ ಶಬರಿಮಲೆ ಯಾತ್ರೆ ಆರಂಭವಾಗಿ 35 ದಿನಗಳು ಕಳೆದಿವೆ. ಈ 35 ದಿನಗಳಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 23 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಬರಿಮಲೆ ಯಾತ್ರೆ ವೇಳೆ, ಕಡಿದಾದ ಏರಿಳಿತದ ಹಾದಿ ಇರುವ ನೀಲಿಮಲ ಮತ್ತು ಅಪ್ಪಾಚ್ಚಿಮೇಡುಗಳಲ್ಲಿ ಬೆಟ್ಟ ಹತ್ತಬೇಕಾಗುತ್ತದೆ. ಈ ವೇಳೆ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದುವರೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ 106 ಮಂದಿಯನ್ನು ಪಂಪಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಮತ್ತೆ ಕೋವಿಡ್ ಕಾಟ..! ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯ?- ಬಿಬಿಎಂಪಿಯಿಂದ ಚಿಂತನೆ

ಇದು ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು. ಕಡಿದಾದ ಬೆಟ್ಟವನ್ನು ಹತ್ತುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕೋವಿಡ್ ಹೊಂದಿರುವವರಲ್ಲಿ ಗಂಭೀರವಾಗಿರುತ್ತವೆ ಎಂದು ತಜ್ಞರು ಹೇಳುತ್ತಿದ್ದಾರೆ.

ಪಂಪಾ ಮತ್ತು ಸನ್ನಿಧಾನಂ ನಡುವಿನ ಕಾರ್ಡಿಯೋ ಕೇಂದ್ರಗಳಲ್ಲಿ ಕೇವಲ ಆಮ್ಲಜನಕ ಸಿಲಿಂಡರ್‌ಗಳು ಮಾತ್ರ ಇವೆ. ಸೂಕ್ತ ತುರ್ತು ಚಿಕಿತ್ಸೆ ಕೊಡಿಸಲು ಪಂಪಾದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಭಕ್ತರ ದಟ್ಟಣೆಯ ಸಮಯದಲ್ಲಿ ಅಂಬುಲೆನ್ಸ್‌ ಈ ಹಾದಿಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ವಾರಗಳ ಹಿಂದೆ, ಇದೇ ರೀತಿ ಅಂಬುಲೆನ್ಸ್‌ ಬರುವಾಗ ನಡೆದ ಕಾಲ್ತುಳಿತದಲ್ಲಿ ಅನೇಕ ಜನರು ಗಾಯಗೊಂಡಿದ್ದರು.

suddiyaana