ರಾಜ್ಯದ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಉಚಿತ ವಿದ್ಯುತ್‌! – ಗೃಹಜ್ಯೋತಿ ಯೋಜನೆ ಪಡೆಯಲು ಷರತ್ತು ಅನ್ವಯ!

ರಾಜ್ಯದ ದೇವಸ್ಥಾನಗಳಿಗೂ ಶೀಘ್ರವೇ ಸಿಗಲಿದೆ ಉಚಿತ ವಿದ್ಯುತ್‌! – ಗೃಹಜ್ಯೋತಿ ಯೋಜನೆ ಪಡೆಯಲು ಷರತ್ತು ಅನ್ವಯ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಗೃಹಜ್ಯೋತಿಯೂ ಒಂದು. ಲಕ್ಷಾಂತರ ಮಂದಿ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿಯಲ್ಲಿ ಮತ್ತೊಂದು ಹೆಜ್ಜೆ ಇಡಲು ನಿರ್ಧರಿಸಿದೆ. ‘ಗೃಹಜ್ಯೋತಿ’ ಯೋಜನೆ ಅಡಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ‘ಸಿ’ ಗ್ರೇಡ್‌ ದೇವಸ್ಥಾನಗಳಿಗೂ ಉಚಿತ ವಿದ್ಯುತ್‌ ಪೂರೈಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಮೆಟಾ ವಿರುದ್ದ ಮೊಕದ್ದಮೆ ಹೂಡಿದ 30ಕ್ಕೂ ಹೆಚ್ಚು ಯುಎಸ್ ರಾಜ್ಯಗಳು! – ಕಂಪನಿ ಎದುರಿಸುತ್ತಿರುವ ಆರೋಪವೇನು?

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ‘ಎ’ ಗ್ರೇಡ್‌ನ 175, ‘ಬಿ’ ಗ್ರೇಡ್‌ನ 330 ಮತ್ತು ‘ಸಿ’ ಗ್ರೇಡ್‌ನ 34,700 ದೇವಸ್ಥಾನಗಳಿವೆ. ವಾರ್ಷಿಕ 25 ಲಕ್ಷ ರೂಪಾಯಿಗೂ ಅಧಿಕ ವರಮಾನವುಳ್ಳ ದೇವಸ್ಥಾನಗಳಿಗೆ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸ್ಥಳೀಯ ಹಂತದಲ್ಲೇ ಅವಕಾಶಗಳಿವೆ. ಆದರೆ, 1 ರಿಂದ 5 ಲಕ್ಷ ರೂ. ಒಳಗೆ ಆದಾಯ ಪಡೆಯುವ ‘ಸಿ’ ಗ್ರೇಡ್‌ ದೇಗುಲಗಳಿಗೆ ಮಾತ್ರ ಯಾವುದೇ ಸೌಕರ್ಯಗಳಿಲ್ಲದೆ ಅಭಿವೃದ್ಧಿ ಕುಂಠಿತಗೊಂಡಿದೆ. ಮಾಸಿಕ ವಿದ್ಯುತ್‌, ನೀರಿನ ವೆಚ್ಚ ಭರಿಸಲೂ ‘ಸಿ’ ಗ್ರೇಡ್‌ ದೇಗುಲಗಳು ಪರದಾಡುವ ಸನ್ನಿವೇಶ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಯಡಿ ದೇವಸ್ಥಾನಗಳಿಗೆ ಉಚಿತ ವಿದ್ಯುತ್‌ ನೀಡಲು ಮುಂದಾಗಿದೆ. ಈ ಯೋಜನೆ ವಿಸ್ತರಣೆಯಾದಲ್ಲಿಈ ದೇವಸ್ಥಾನಗಳಿಗೆ ಅನುಕೂಲವಾಗಲಿದೆ. ಜತೆಗೆ ಇಂತಹ ದೇವಸ್ಥಾನಗಳಲ್ಲಿಉಚಿತ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ.

ದೇಗುಲ ವರ್ಗೀಕರಣ ಹೇಗೆ?

  • ಎ ಗ್ರೇಡ್‌ – 25 ಲಕ್ಷ ರೂ. ಮೇಲ್ಪಟ್ಟು
  • ಬಿ ಗ್ರೇಡ್‌ – 5 ರಿಂದ 25 ಲಕ್ಷ ರೂ.
  • ಸಿ ಗ್ರೇಡ್‌ – 5 ಲಕ್ಷ ರೂ.ಗಿಂತ ಕಡಿಮೆ

Shwetha M