ಇಂಗ್ಲೆಂಡ್ ತಂಡಕ್ಕೆ ODI ಗ್ರಹಣ – 3 ವರ್ಷ.. 34 ಸೋಲು.. ಏನಾಗಿದೆ?
ಲಂಕಾ, ಪಾಕ್ ಎದುರಲ್ಲೂ ಫ್ಲ್ಯಾಪ್

ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ತಂಡ ಇಂಗ್ಲೆಂಡ್. 2019ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಕ್ರಿಕೆಟ್ ಜಗತ್ತಿನ ಬಲಿಷ್ಠ ತಂಡವಾಗಿ ಸದ್ದು ಮಾಡಿದ್ರು. ಆದ್ರೆ ಈಗ ಏಕದಿನ ಮಾದರಿಯಲ್ಲಿ ಕಂಪ್ಲೀಟ್ ಫ್ಲ್ಯಾಪ್ ಆಗದ್ದಾರೆ. ಕಳೆದ 3 ವರ್ಷಗಳ ರೆಕಾರ್ಡ್ಸ್ ನೋಡಿದ್ರೆ ಇವ್ರೇನಾ ಕ್ರಿಕೆಟ್ ಜನಕರು ಅನ್ನೋ ಮಟ್ಟಿಗೆ ಥಂಡಾ ಹೊಡೆದಿದ್ದಾರೆ. ಪಾಕ್ನಲ್ಲಿ ನಡೆಯುತ್ತಿರೋ ತ್ರಿಕೋನ ಏಕದಿನ ಸರಣಿಯಲ್ಲಂತೂ ಇನ್ನೂ ಹೀನಾಯ ಸ್ಥಿತಿಗೆ ತಲುಪಿದ್ದಾರೆ.
ಇದನ್ನೂ ಓದಿ : ಭುವಿ Vs ಪ್ರಿನ್ಸ್ Vs ಮಯಾಂಕ್! – ಬುಮ್ರಾಗೆ ವಿಶ್ವಕಪ್ ಬ್ಯಾಕಪ್ ಯಾರು?
ಅಗ್ರೆಸ್ಸಿವ್ ಬ್ಯಾಟಿಂಗ್ ಸ್ಟೈಲ್ ಮೂಲಕವೇ ಏಕದಿನ ಕ್ರಿಕೆಟ್ನ ಆಟದ ಶೈಲಿಯನ್ನೇ ಬದಲಿಸಿದ್ದ ತಂಡ ಇಂಗ್ಲೆಂಡ್. ಆದರೆ ಈಗ ಅದೇ ಆಕ್ರಮಣಕಾರಿ ಆಟ ತಂಡಕ್ಕೆ ಮುಳುವಾಗುತ್ತಿದೆಯಾ ಅನ್ನೋ ಪ್ರಶ್ನೆಗಳು ಮೂಡಿವೆ. ಯಾಕಂದ್ರೆ ಕಳೆದ ಮೂರು ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿ ತಂಡದ ಪರ್ಫಾಮೆನ್ಸ್ ಕಂಪ್ಲೀಟ್ ಹಳ್ಳ ಹಿಡಿದಿದೆ.
3 ವರ್ಷ.. 59 ಪಂದ್ಯ.. ಗೆದ್ದಿದ್ದೇ 24 ಮ್ಯಾಚ್!
2023ರಿಂದ ಈಚೆಗೆ ಇಂಗ್ಲೆಂಡ್ ತಂಡ 59 ಏಕದಿನ ಪಂದ್ಯಗಳನ್ನಾಡಿದೆ. ಆದ್ರೆ ಈ ಪೈಕಿ 34 ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆಲುವು ಸಾಧಿಸಿರುವುದು ಕೇವಲ 24 ಪಂದ್ಯಗಳಲ್ಲಿ. ಅಂದರೆ, ಗೆಲುವಿನ ಪ್ರಮಾಣ ಶೇಕಡಾ 40.67ರಷ್ಟು ಮಾತ್ರ. 2019ರಿಂದ 2022ರ ಅವಧಿಯಲ್ಲಿ ಶೇಕಡಾ 55ಕ್ಕೂ ಅಧಿಕ ಗೆಲುವಿನ ಪ್ರಮಾಣ ಹೊಂದಿದ್ದ ತಂಡ, ಈಗ ಕಂಪ್ಲೀಟ್ ಕೊಲ್ಯಾಪ್ಸ್ ಆಗ್ತಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರೋ ಪಾಕಿಸ್ತಾನ, ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ತ್ರಿಕೋನ ಏಕದಿನ ಸರಣಿ ಇಂಗ್ಲೆಂಡ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 429 ರನ್ಗಳ ಬಿಗ್ ಟಾರ್ಗೆಟ್ನೇ ಸೆಟ್ ಮಾಡಿತ್ತು. ನಾಯಕ ಹ್ಯಾರಿ ಬ್ರೂಕ್ ಕೇವಲ 114 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಆದ್ರೆ ಇಷ್ಟು ದೊಡ್ಡ ಮೊತ್ತ ಪೇರಿಸಿದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಆಗಿರಲಿಲ್ಲ. ಶ್ರೀಲಂಕಾ 430 ರನ್ಗಳ ಗುರಿಯನ್ನು ಬೆನ್ನಟ್ಟಿ ಇತಿಹಾಸ ಬರೆದಿತ್ತು. ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ದೊಡ್ಡ ಯಶಸ್ವಿ ರನ್ ಚೇಸ್ಗಳಲ್ಲಿ ಇದೂ ಒಂದಾಗಿತ್ತು. ಇದಾದ ಮೇಲೆ ಪಾಕಿಸ್ತಾನದ ವಿರುದ್ಧವೂ ಇಂಗ್ಲೆಂಡ್ನದ್ದು ಇದೇ ಸ್ಥಿತಿ. 242 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 154 ರನ್ಗಳಿಗೆ 9 ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಕೊನೇ ವಿಕೆಟ್ಗೆ 89 ರನ್ಸ್ ಜೊತೆಯಾಟ ಬಂದಿದ್ದು ಪಾಕಿಸ್ತಾನವೇ ವಿನ್ ಆಗಿತ್ತು. ಸೋ ಎರಡೂ ಪಂದ್ಯಗಳಲ್ಲೂ ಇಂಗ್ಲೆಂಡ್ನ ಬೌಲಿಂಗ್, ಪ್ರೆಶರ್ ಹ್ಯಾಂಡಲ್ ಮಾಡೋ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನ ಮೂಡಿವೆ. ಹಾಗಂತ ಇಲ್ಲಿ ಇಂಗ್ಲೆಂಡ್ನ ಸಮಸ್ಯೆ ಬಗ್ಗೆ ಟೀಂ ಪರ್ಫಾಮೆನ್ಸ್ ಮೇಲೆ ಅಷ್ಟೇ ಅಲ್ಲ ಅವ್ರ ಯೋಜನೆಗಳಲ್ಲೂ ಮಿಸ್ಟೇಕ್ಸ್ ಆಗ್ತಿದೆ.
ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒತ್ತು ನೀಡುತ್ತಿರೋದೇ ಹೊಡೆತ!
ಅಷ್ಟಕ್ಕೂ ಇಲ್ಲಿ ಇಂಗ್ಲೆಂಡ್ ತಂಡದ ಈ ಪರಿಸ್ಥಿತಿಗೆ ಕಾರಣವೇ ಸಿಚುಯೇಷನ್ಗೆ ತಕ್ಕಂತೆ ಬ್ಯಾಟಿಂಗ್ ಮಾಡದೆ ಆಕ್ರಮಣಕಾರಿ ಆಟಕ್ಕೆ ಹೆಚ್ಚಿನ ಒತ್ತು ನೀಡ್ತಿದ್ದಾರೆ. ಏಕದಿನ ಪಂದ್ಯದಲ್ಲಿ ಪ್ರತಿ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಟ್ರೈ ಮಾಡೋದು ಒಳ್ಳೇದಲ್ಲ. ಹಾಗೇ ಎದುರಾಳಿ ತಂಡದ ಸ್ಪಿನ್ ಬೌಲಿಂಗ್ ಎದುರಿಸುವಾಗ ಇಂಗ್ಲೆಂಡ್ನ ಬ್ಯಾಟರ್ಗಳು ಎಡವುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧವೂ ಇದೇ ಆಗಿದ್ದು. ಹಾಗೇ ಬೌಲಿಂಗ್ ಸ್ಕ್ವಾಡ್ನಲ್ಲಿ ಕನ್ಸಿಸ್ಟೆನ್ಸಿ ಇಲ್ಲ. 400ಕ್ಕೂ ಹೆಚ್ಚು ರನ್ ಗಳಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗದಿರುವುದು ಬೌಲರ್ಗಳ ಫೇಲ್ಯೂರ್ಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ ಜೋಸ್ ಬಟ್ಲರ್ ಗಾಯದ ಕಾರಣ ಸರಣಿಯಿಂದ ಹೊರಗುಳಿದಿರುವುದು ಹಾಗೂ ಜೋಫ್ರಾ ಆರ್ಚರ್ ತಂಡದಲ್ಲಿ ಇಲ್ಲದಿರುವುದು ಇಂಗ್ಲೆಂಡ್ ಟೀಂ ಬ್ಯಾಲೆನ್ಸ್ ತಪ್ಪಲು ಮುಖ್ಯ ಕಾರಣವಾಗಿದೆ.
2027ರ ಏಕದಿನ ವಿಶ್ವಕಪ್ ಗೂ ಮುನ್ನ ಕಂ ಬ್ಯಾಕ್ ಮಾಡ್ತಾರಾ?
ಇಂಗ್ಲೆಂಡ್ ತಂಡದ ಈ ಸ್ಟ್ರಗಲ್ ನಡುವೆ 2027ರ ಏಕದಿನ ವಿಶ್ವಕಪ್ ಬಗ್ಗೆಯೂ ಪ್ರಶ್ನೆಗಳು ಮೂಡುವಂತೆ ಮಾಡಿದೆ. 2027ರ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಆಫ್ರಿಕಾದ ಪಿಚ್ಗಳಲ್ಲೂ ಇಂಗ್ಲೆಂಡ್ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಸೋ ಇವ್ರಿಗೆ ಇರೋ ಮೇನ್ ಚಾಲೆಂಜ್ ಅಂದ್ರೆ ಅಗ್ರೆಸ್ಸಿವ್ ಆಟ ಕೈಬಿಡೋದಲ್ಲ. ಅದನ್ನ ಎಲ್ಲಿ ಯಾವಗ ಬಳಸಿಕೊಳ್ಬೇಕು ಅನ್ನೋದನ್ನ ಅಳವಡಿಸಿಕೊಳ್ಬೇಕು. ಪ್ರಸ್ತುತ ಏಕದಿನ ಮಾದರಿ ರ್ಯಾಂಕಿಂಗ್ ನಲ್ಲಿ ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ. 2027ರ ಏಕದಿನ ವಿಶ್ವಕಪ್ಗೂ ಮುನ್ನ ಸಾಕಷ್ಟು ಪಂದ್ಯಗಳೂ ಬಾಕಿ ಇವೆ. ಪಾಕ್ನಲ್ಲಿ ತ್ರಿಕೋನ ಸರಣಿ ಮುಗಿಸಿದ ಬಳಿಕ ವಿಶ್ವಕಪ್ ವೇಳೆಗೆ 16 ಪಂದ್ಯಗಳನ್ನ ಆಡಲಿದ್ದು ಕಂ ಬ್ಯಾಕ್ ಮಾಡಲೇಬೇಕಿದೆ.

ನೋಡಿರಿ

