ತುಮಕೂರಿನಲ್ಲಿ 32 ನವಿಲುಗಳ ಮಾರಣಹೋಮ – ಸಾವಿಗೆ ಕಾರಣವೇನು?

ಕಳೆದ ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 32 ನವಿಲುಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಇದೀಗ ನವಿಲುಗಳ ಮಾರಣಹೋಮವಾದ ಬೆನ್ನಲ್ಲೇ ಅವುಗಳ ಸಾವಿಗೆ ಕಾರಣವೇನು ಅನ್ನೋ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: SSLC ಫಲಿತಾಂಶ ಪ್ರಕಟ! – ದಕ್ಷಿಣ ಕನ್ನಡ ಪ್ರಥಮ.. ಉಡುಪಿ ದ್ವಿತೀಯ, ಕಲಬುರಗಿಗೆ ಕೊನೆ ಸ್ಥಾನ!
ತುಮಕೂರಿನ ಜಿಲ್ಲೆಯ ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲಿ 32 ನವಿಲುಗಳು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಇನ್ನು ಊರ್ಡಿಗೆರೆ ಮತ್ತು ಗೂಳೂರು ಹೋಬಳಿಯಲ್ಲೇ ಹೆಚ್ಚು ನವಿಲುಗಳ ಸಾವಾಗಿದೆ. ಏಪ್ರಿಲ್ 16 ರಂದು ಒಂದೇ ದಿನ 11 ನವಿಲುಗಳು ಪ್ರಾಣ ಬಿಟ್ಟಿದ್ರೆ, ಏಪ್ರಿಲ್ 21 ರಂದು ಮತ್ತೆ 10 ನವಿಲುಗಳು ದಾರುಣವಾಗಿ ಸಾವನ್ನಪ್ಪಿದೆ. ಈ ವಿಚಾರ ಬೊಮ್ಮನಹಳ್ಳಿ ಹಾಗೂ ಟಿ.ಜೆ. ಪಾಳ್ಯದಲ್ಲಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಹೆಚ್ಚಿದೆ. ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ತಾಪಮಾನ ಇದೆ. ಹೀಗಾಗಿ ಸೂರ್ಯನ ಪ್ರಖರತೆಗೆ ನವಿಲುಗಳು ಸಾವನ್ನಪ್ಪಿದೆ ಎನ್ನಲಾಗ್ತಿದೆ.
ಸಾವಿನ ಸರಣಿ ಕಂಡು ಕಂಗಾಲಾದ ಅರಣ್ಯ ಇಲಾಖೆ ಅಧಿಕಾರಿ ಡಿಸಿಎಫ್ ಶಶಿಧರ್ ಅವರು ನವಿಲುಗಳ ಸಾವಿನ ತನಿಖೆಗಾಗಿ ಈಗಾಗಲೇ ವಿಶೇಷ ತಂಡ ರಚಿಸಿದ್ದಾರೆ. ಪ್ರಾಥಮಿಕ ತಪಾಸಣೆಯಲ್ಲಿ ವಿಷಪ್ರಾಶನದ ಕುರುಹುಗಳು ಪತ್ತೆಯಾಗಿಲ್ಲ. ಅತಿಯಾದ ಹೀಟ್ ಸ್ಟ್ರೋಕ್‌ನಿಂದಲೇ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ನವಿಲುಗಳ ಅಂಗಾಂಗಗಳ ಮಾದರಿಯನ್ನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ವರದಿ ಬಂದ ನಂತರವೇ ನವಿಲುಗಳ ಸಾವಿನ ಹಿಂದಿನ ಅಸಲಿ ಕಾರಣ ಹೊರಬರಲಿದೆ. ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆಯೂ ಸಾವಿಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನೋಡಿರಿ

