ಈ ರೆಸ್ಟೋರೆಂಟ್‌ನಲ್ಲಿ ಕ್ಯಾಟ್‌ ಸೂಪ್‌ಗೆ ಭಾರಿ ಡಿಮ್ಯಾಂಡ್‌! –  ಮಾಂಸಕ್ಕಾಗಿ 300 ಬೆಕ್ಕುಗಳನ್ನು ಕೊಂದೇ ಬಿಟ್ಟ!

ಈ ರೆಸ್ಟೋರೆಂಟ್‌ನಲ್ಲಿ ಕ್ಯಾಟ್‌ ಸೂಪ್‌ಗೆ ಭಾರಿ ಡಿಮ್ಯಾಂಡ್‌! –  ಮಾಂಸಕ್ಕಾಗಿ 300 ಬೆಕ್ಕುಗಳನ್ನು ಕೊಂದೇ ಬಿಟ್ಟ!

ಪ್ರಪಂಚದಾದ್ಯಂತ ಮನುಷ್ಯರು ಆಯಾಯ ಸಂಸ್ಕೃತಿ, ಪದ್ದತಿಗಳಿಗನುಗುಣವಾಗಿ ತಮ್ಮ ಆಹಾರ ಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ. ಆಹಾರಕ್ರಮ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ದೇಶದಿಂದ ದೇಶಕ್ಕೆ ಬದಲಾಗುತ್ತಾ ಹೋಗುತ್ತದೆ. ಕೆಲವರು ಸಸ್ಯಾಹಾರ ಸೇವನೆ ಮಾಡಿದ್ರೆ, ಇನ್ನೂ ಕೆಲವರು ಮಾಂಸಾಹಾರ ಸೇವನೆ ಮಾಡುತ್ತಾರೆ. ಕೆಲವು ದೇಶದಲ್ಲಿ ಸಾಕುಪ್ರಾಣಿ, ಪಕ್ಷಿಗಳನ್ನು  ಕೆಲವು ದೇಶದ ಜನರು ಆಹಾರವಾಗಿ ಸೇವಿಸುತ್ತಾರೆ. ಇನ್ನೂ ಕೆಲ ದೇಶದಲ್ಲಿ ಹುಳ ಹುಪ್ಪಟೆಗಳನ್ನು ಮೃಷ್ಠಾನ್ನ ಭೋಜನವೆಂಬಂತೆ ಪರಿಗಣಿಸಿವೆ. ಆದ್ರೆ ಇಲ್ಲೊಬ್ಬ ತನ್ನ ರೆಸ್ಟೋರೆಂಟ್‌ ನಲ್ಲಿ ಗ್ರಾಹಕರಿಗೆ ಬೆಕ್ಕಿನ ಸೂಪ್‌ ಮಾಡಿ ಬಡಿಸಿದ್ದಾನೆ. ಬರೋಬ್ಬರಿ 300 ಬೆಕ್ಕುಗಳನ್ನು ಕೊಂದು ಗ್ರಾಹಕರಿಗೆ ಸೂಪ್‌ ಮಾಡಿ ಬಡಿಸಿದ್ದಾನೆ.

ಇದನ್ನೂ ಓದಿ: ಯುದ್ಧ ಪೀಡಿತ ಗಾಜಾದಲ್ಲಿ 5 ಕಿ.ಮೀ ನಡೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಹೌದು, ವಿಯೆಟ್ನಾಂನಲ್ಲಿ ಎಲ್ಲರೂ ಬೆಚ್ಚಿ ಬೀಳುವಂಥಾ ಘಟನೆ ನಡೆದಿದೆ. ಇಲ್ಲಿನ ರೆಸ್ಟೋರೆಂಟ್‌ವೊಂದು ಸೂಪ್‌ ತಯಾರಿಸಲು ಒಂದು ತಿಂಗಳಲ್ಲಿ ಬರೋಬ್ಬರಿ  300 ಬೆಕ್ಕುಗಳನ್ನು ಸಾಯಿಸಿದೆ. ರೆಸ್ಟೋರೆಂಟ್‌ ಮಾಲೀಕ ಪ್ರತಿದಿನ ಸುಮಾರು 10 ಬೆಕ್ಕುಗಳನ್ನು ಕೊಂದು ಗ್ರಾಹಕರಿಗೆ ಸೂಪ್‌ ಮಾಡಿಕೊಡುತ್ತಿದ್ದ. ಗ್ರಾಹಕರಿಗೆ ‘ಕ್ಯಾಟ್ ಸೂಪ್’ ನೀಡಲು ಪ್ರತಿ ತಿಂಗಳು 300 ಕ್ಕೂ ಹೆಚ್ಚು ಬೆಕ್ಕುಗಳನ್ನು ಕೊಲ್ಲಲಾಗುತ್ತಿತ್ತು ಅಂತಾ ಆತನೇ ಹೇಳಿದ್ದಾರೆ.

ಬೆಕ್ಕಿನ ಸೂಪ್‌ ಮಾಡಿಕೊಡಲು ಆತ ನಿರ್ಧರಿಸಿದ್ದೇಕೆ?

ಮಾಧ್ಯಮದವರೊಂದಿಗೆ ಮಾತನಾಡಿದ ಡೊನಾಹ್, “ಮೊದಲು ತನ್ನ ರೆಸ್ಟೋರೆಂಟ್​​​ನಲ್ಲಿ ಇತರರಂತೇ ಸಾಮಾನ್ಯ ಆಹಾರವನ್ನು ನೀಡುತ್ತಿದ್ದೆ, ಆದರೆ ಯಾರೂ ಗ್ರಾಹಕರು ಬರುತ್ತಿರಲಿಲ್ಲ. ಆದ್ದರಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದರಿಂದ ಸಂಸಾರ ನಿರ್ವಹಣೆ ತುಂಬಾ ಕಷ್ಟವಾಯಿತು. ಆ ನಂತರ ಬೆಕ್ಕಿನ ಸೂಪ್ ಮಾರಾಟವನ್ನು ಏಕೆ ಪ್ರಾರಂಭಿಸಬಾರದು ಎಂದು ಯೋಚಿಸಿದೆ. ಈ ಆಲೋಚನೆಯೊಂದಿಗೆ ನನ್ನ ವ್ಯವಹಾರ ಪ್ರಾರಂಭವಾಯಿತು. ನಾನು ಬೆಕ್ಕುಗಳನ್ನು ಕೋಲಿನ ಸಹಾಯದಿಂದ ನೀರು ತುಂಬಿದ ಬಕೆಟ್‌ನಲ್ಲಿ ಮುಳುಗಿಸಿ ಕೊಲ್ಲುತ್ತಿದ್ದೆ. ಈ ಸಮಯದಲ್ಲಿ ಬೆಕ್ಕು ಸಾಯುವಾಗ ನರಳುವುದನ್ನು ನೋಡಿ ನನ್ನ ಮನಸ್ಸಿಗೆ ನೋವುಂಟಾಗಿದ್ದರೂ ಸಹ ತನ್ನ ಸಂಸಾರದ ನಿರ್ವಹಣೆಯ ಮುಂದೆ ಅಸಹಾಯಕನಾಗಿದ್ದೆ ಅಂತಾ ಹೇಳಿಕೊಂಡಿದ್ದಾನೆ.

ಡೊನಾಹ್ ರೆಸ್ಟೋರೆಂಟ್‌ ನಲ್ಲಿ ಕ್ಯಾಟ್‌ ಸೂಪ್‌ಗೆ ಭಾರಿ ಡಿಮ್ಯಾಂಡ್‌ ಇದ್ರೂ ಕೂಡ ಆತ ತಾನು ಇಷ್ಟು ದಿನಗಳಿಂದ ನಡೆಸಿಕೊಂಡು ಬಂದಿದ್ದ ರೆಸ್ಟೋರೆಂಟನ್ನೇ ಮುಚ್ಚಿದ್ದಾನೆ. ಅದಕ್ಕೂ ಕೂಡ ಕಾರಣವೇನು ಅಂತಾ ಬಿಚ್ಚಿಟ್ಟಿದ್ದಾನೆ. ತಾನು ವ್ಯಾಪಾರಕ್ಕಾಗಿ ನಾನು ಪ್ರತಿದಿನ ಹತ್ತು ಬೆಕ್ಕುಗಳನ್ನು ಕೊಲ್ಲುತ್ತಿದ್ದೆ. ಆದರೆ ಇನ್ನೂ ಮುಂದೆ ಇಂತಹ ಹಿಂಸೆಯ ಕೃತ್ಯದಿಂದ ಹೊರಬರಲು ನಿರ್ಧರಿಸಿದ್ದೇನೆ. ಹಣಕ್ಕಾಗಿ ಮುಗ್ಧ ಜೀವಿಗಳನ್ನು ಕೊಲ್ಲಲಾರೆ” ಎಂದು ಹೇಳಿಕೊಂಡಿದ್ದಾರೆ.

Shwetha M