3 ಕಿ.ಮೀ ಸುರಂಗ.. 10 ಕಿ.ಮೀ ಫ್ಲೈ ಓವರ್ – ಶಿರಾಡಿ ಘಾಟ್ ನಲ್ಲಿ 30 ಕಿ.ಮೀ ಪರ್ಯಾಯ ಮಾರ್ಗ
ಬೆಂಗಳೂರು ಟು ಮಂಗಳೂರು ಸಂಚಾರ ಸುಗಮ

3 ಕಿ.ಮೀ ಸುರಂಗ.. 10 ಕಿ.ಮೀ ಫ್ಲೈ ಓವರ್ – ಶಿರಾಡಿ ಘಾಟ್ ನಲ್ಲಿ 30 ಕಿ.ಮೀ ಪರ್ಯಾಯ ಮಾರ್ಗಬೆಂಗಳೂರು ಟು ಮಂಗಳೂರು ಸಂಚಾರ ಸುಗಮ

ಮಳೆಗಾಲ ಬಂತೆಂದರೆ ಬೆಂಗಳೂರಿನಿಂದ ಕರಾವಳಿಗೆ ಪ್ರಯಾಣಿಸುವ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಾರೆ. ಅದರಲ್ಲೂ ಶಿರಾಡಿಘಾಟ್ ದಾಟುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತೆ. ಪದೇಪದೆ ಭೂಕುಸಿತ, ಮಳೆ, ಜಲಪಾತ ಸೇರಿದಂತೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತೆ. ಇದ್ರಿಂದ ಶಿರಾಡಿಘಾಟ್ ಹಲವು ಬಾರಿ ಬಂದ್ ಮಾಡಲಾಗುತ್ತೆ. ಹೀಗಾಗಿ ಸಂಚಾರವನ್ನ ಮತ್ತಷ್ಟು ಸುಗಮಗೊಳಿಸೋಕೆ ಸುರಂಗಮಾರ್ಗ ನಿರ್ಮಾಣಕ್ಕೆ ನೀಲನಕ್ಷೆ ರೆಡಿಯಾಗಿದೆ.

ಇದನ್ನೂ ಓದಿ : ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಾಂತ್ರಿಕ ತಂಡ ರಚನೆ!

ಬೆಂಗಳೂರು (Bangalore) ಮಂಗಳೂರು (Mangalore) ನಡುವೆ ಕಗ್ಗಂಟಾಗಿರೋ ಶಿರಾಡಿಘಾಟ್ (Shiradighat) ನಲ್ಲಿ ಬರೋಬ್ಬರಿ 3 ಕಿಲೋ ಮೀಟರ್ ಸುರಂಗ, 10 ಕಿಲೋಮೀಟರ್ ಫ್ಲೈಓವರ್ ಒಳಗೊಂಡ ಒಟ್ಟು 30 ಕಿಲೋಮೀಟರ್ ಪರ್ಯಾಯ ಮಾರ್ಗ ನಿರ್ಮಿಸಲು ಪ್ಲ್ಯಾನ್ ಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಬೆಂಗಳೂರು ಮಂಗಳೂರು ನಡುವೆ ಸುಲಭ ಹಾಗೂ ವೇಗ ಸಂಪರ್ಕಕ್ಕೆ ಬೇಕಾದ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆಗೂ ವೇದಿಕೆ ಸಿದ್ದಗೊಂಡಿದ್ದು 10 ಸಾವಿರ ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆ ಇದೀಗ ಹೊಸ ಚರ್ಚೆ ಹುಟ್ಟು ಹಾಕಿದೆ.

ರಾಜ್ಯದ ಮೊದಲ 3 ಕಿಲೋಮೀಟರ್ ಸುರಂಗ ಮಾರ್ಗ ಇದಾಗಲಿದೆ. ಕಾಡಿನೊಳಗೆ 10 ಕಿಲೋ ಮೀಟರ್ ಫ್ಲೈಓವರ್ ಒಳಗೊಂಡ 30 ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ಟು ಮಂಗಳೂರು ನಿತ್ಯವೂ ಸರಕು ಸಾಗಣೆ ವಾಹನ ಸೇರಿ ಸಾವಿರಾರು ವಾಹನಗಳ ಸಂಚಾರ ಒಂದೆಡೆಯಾದ್ರೆ ನಾಡಿನ ಹೆಸರಾಂತ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಹ ಇದೇ ಮಾರ್ಗದಲ್ಲಿವೆ. ಹಾಗಾಗಿ ಲಕ್ಷಾಂತರ ಜನರಿಗೆ ಈ ರಸ್ತೆ ಹೆಚ್ಚು ಉಪಯುಕ್ತವಾಗಿದೆ. ಆದ್ರೆ ಇಂತಹ ರಾಷ್ಟ್ರೀಯ ಹೆದ್ದಾರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹರಡಿರೋ ಪಶ್ಚಿಮಘಟ್ಟದ ತಪ್ಪಲಿನಲ್ಲಿನ ಶಿರಾಡಿ ಘಾಟ್ ಮೂಲಕ ಹಾದು ಹೋಗೋದ್ರಿಂದ ಇಲ್ಲಿ ದಶಕಗಳಿಂದ ಸುಸಜ್ಜಿತ ರಸ್ತೆ ಇಲ್ಲ. ಇದ್ದರೂ ಮಳೆಗಾಲದಲ್ಲಿ ಗುಡ್ಡ ಕುಸಿತ, ಅಪಾರ ವಾಹನಗಳ ಸಂಚಾರದಿಂದ ಹಾಗೂ ಅತಿಯಾದ ಮಳೆಯಿಂದ ರಸ್ತೆ ಗುಣಮಟ್ಟ ಕಾಯ್ದುಕೊಳ್ಳಲು ತೊಡಕಾಗಿ ಈ ಮಾರ್ಗದ ವಾಹನ ಸವಾರರು ಪರದಾಡುತ್ತಿದ್ದಾರೆ.

ಹೀಗಾಗಿ ಪರ್ಯಾ ಮಾರ್ಗದ ಅವಶ್ಯಕತೆ ಮನಗಂಡ ಅಧಿಕಾರಿ ವರ್ಗ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿಯಿಂದ ಅಡ್ಡಹೊಳೆವರೆಗೆ 30 ಕಿಲೋ ಮೀಟರ್ ಪರ್ಯಾಯ ಮಾರ್ಗಕ್ಕೆ ನೀಲನಕ್ಷೆ ರೆಡಿ ಮಾಡಿದೆ. 3 ಕಿಲೋ ಮೀಟರ್ ಸುರಂಗ, 10 ಕಿಲೋ ಮೀಟರ್ ಮುಗಿಲೆತ್ತರದ ಫ್ಲೈಓವರ್ ಒಳಗೊಂಡ ಈ ರಸ್ತೆ ನಿರ್ಮಾಣಕ್ಕೆ 10 ಸಾವಿರ ಕೋಟಿ ವೆಚ್ಚವಾಗಲಿದೆ ಎನ್ನೋ ಅಂದಾಜಿದೆ.

suddiyaana