3 ಕೋಟಿ ಬಜೆಟ್ 30 ಕೋಟಿ ಕಲೆಕ್ಷನ್ – ಪ್ರೇಮದ ಊರಿಗೆ ಪ್ಯಾನ್ IND ಕನಸು

ಸ್ಯಾಂಡಲ್ವುಡ್ನಲ್ಲಿ ದೊಡ್ಡ ಸ್ಟಾರ್ಗಳ ಸಿನಿಮಾಗಳೇ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತವೆ ಅನ್ನೋ ಕಾಲ ಬದಲಾಗುತ್ತಿದೆಯಾ? ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡಿದರೆ ಮಾತ್ರ ಗೆಲುವು ಸಿಗುತ್ತಾ? ಅಥವಾ ಒಳ್ಳೆಯ ಕಥೆ ಇದ್ದರೆ ಸಾಕಾ? ಈಗ ಇಂಥದ್ದೇ ಚರ್ಚೆಗೆ ಕಾರಣವಾಗಿರುವ ಸಿನಿಮಾ ‘ಪ್ರೇಮದ ಊರಲಿ’! ಕಡಿಮೆ ಬಜೆಟ್ನಲ್ಲಿ ದೊಡ್ಡ ಯಶಸ್ಸಿನ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಈಗ ಕನ್ನಡ ಚಿತ್ರರಂಗದ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ ಲೋ ಬಜೆಟ್ ಸಿನಿಮಾ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡೋಕೆ ಹೋಗ್ತಿದೆ.
ಸಿನಿಮಾ ಅಂದರೆ ದೊಡ್ಡ ನಾಯಕರು, ಅದ್ದೂರಿ ಸೆಟ್ಗಳು, ಭರ್ಜರಿ ಪ್ರಚಾರ, ನೂರಾರು ಕೋಟಿ ರೂಪಾಯಿ ಬಜೆಟ್ ಇರಬೇಕು ಅನ್ನೋ ಲೆಕ್ಕಾಚಾರ ಚಿತ್ರರಂಗದಲ್ಲಿದೆ. ಆದರೆ ‘ಪ್ರೇಮದ ಊರಲಿ’ ಸಿನಿಮಾ ಸುತ್ತ ಕೇಳಿಬರುತ್ತಿರುವ ಚರ್ಚೆ ಮಾತ್ರ ಬೇರೆ. ಸುಮಾರು ಎರಡೂವರೆ ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಚಿತ್ರ ಬರೋಬ್ಬರಿ 25 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ವರದಿಗಳು ಹರಿದಾಡಿವೆ. ಈ ವೀಕೆಂಡ್ನಲ್ಲಿ ಇದು 30 ಕೋಟಿ ದಾಟುವ ನೀರಿಕ್ಷೆ ಇದೆ.
ಸಿನಿಮಾ ಗೆಲ್ಲಬೇಕಾದರೆ ದೊಡ್ಡ ಸ್ಟಾರ್ಗಳೇ ಬೇಕು ಅನ್ನೋ ನಿಯಮ ಇಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ಕಥೆ, ಮನಮುಟ್ಟುವ ಭಾವನೆಗಳು ಮತ್ತು ಬಾಯಿಮಾತಿನ ಪ್ರಚಾರವೂ ಸಿನಿಮಾದ ಭವಿಷ್ಯ ಬದಲಿಸಬಲ್ಲವು ಅನ್ನೋದ್ದಕ್ಕೆ ‘ಪ್ರೇಮದ ಊರಲಿ’ ಚಿತ್ರವೇ ಸಾಕ್ಷಿ. ಇನ್ನೂ ಈ ಚಿತ್ರ ವಿದೇಶದಲ್ಲಿ ಹೌಸ್ಫುಲ್ ಕಲೆಕ್ಷನ್ ಮಾಡ್ತಿದೆ. ಅಷ್ಟೇ ಅಲ್ಲ ಚಿಕ್ಕ ಚಿಕ್ಕ ಮೂವಿಗಳನ್ನ ಮೂಸಿಯೂ ನೋಡದ ದೊಡ್ಡ ಧಿಯೇಟರ್ಗಳು ಮಲ್ಟಿಪ್ಲೆಕ್ಸ್ ಥಿಯೇಟರ್ಗಳ ಪ್ರೇಮದ ಊರಿನ ಚಿತ್ರವನ್ನ ಡಬಲ್ ಡಬಲ್ ಸ್ಕ್ರೀನ್ಗಳಲ್ಲಿ ಹಾಕ್ತಿವೆ.
ಪ್ರೇಮದ ಊರಿನಲಿ ಪ್ಯಾನ್ ಇಂಡಿಯಾ ಪ್ಲ್ಯಾನ್!
ಕನ್ನಡದಲ್ಲಿ ಸದ್ದು ಮಾಡುತ್ತಿರುವ ಪ್ರೇಮದ ಊರಿನಲಿ ಸಿನಿಮಾ ಈಗ ಬೇರೆ ಭಾಷೆಗಳ ಪ್ರೇಕ್ಷಕರನ್ನೂ ತಲುಪಲು ರೆಡಿಯಾಗ್ತಿದೆ. ತೆಲುಗು ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆ ಮಾಡುವುದ್ದಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ಯಾವ ಭಾಷೆಯಲ್ಲಿ, ಯಾವಾಗ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಇನ್ನೂ ಘೋಷಣೆ ಮಾಡಿಲ್ಲ.
ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಕೇವಲ ಬೇರೆ ಭಾಷೆಗಳಿಗೆ ಡಬ್ ಮಾಡುವುದಷ್ಟೇ ಅಲ್ಲ. ಅಲ್ಲಿನ ಪ್ರೇಕ್ಷಕರ ಮನಸ್ಸನ್ನೂ ಗೆಲ್ಲಬೇಕು. ಕನ್ನಡದ ಕಥೆ, ಸ್ಥಳೀಯ ಭಾವನೆಗಳು ಮತ್ತು ಪ್ರೇಮಕಥೆಯ ಆಕರ್ಷಣೆ ಇತರ ಭಾಷೆಗಳಲ್ಲೂ ಕೆಲಸ ಮಾಡುತ್ತವೆಯೇ ಎಂಬುದೇ ಈಗಿನ ಪ್ರಶ್ನೆ. ಕನ್ನಡದ ಪ್ರೇಕ್ಷಕರಿಗೆ ಇಷ್ಟವಾದ ಹಳ್ಳಿಯ ಸೊಗಡು, ಪ್ರೀತಿ ಮತ್ತು ಭಾವನಾತ್ಮಕ ಕಥೆ ಇತರ ಭಾಷೆಗಳ ಪ್ರೇಕ್ಷಕರಿಗೂ ಅಷ್ಟೇ ಹತ್ತಿರವಾಗುತ್ತಾ? ‘ಕಾಂತಾರ’, ‘ಸು ಫ್ರಂ ಸೋ’ ರೀತಿಯಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯ ಮೂಲಕ ಬೇರೆ ಭಾಷೆಗಳಿಗೂ ವಿಸ್ತರಿಸುವ ಯಶಸ್ಸಿನ ಹಾದಿಯನ್ನು ‘ಪ್ರೇಮದ ಊರಲಿ’ ಕೂಡ ಹಿಡಿಯುತ್ತಾ? ಇದಕ್ಕೆ ಉತ್ತರ ಸಿಗಬೇಕಾದರೆ ಇತರ ಭಾಷೆಗಳಲ್ಲಿನ ಪ್ರದರ್ಶನ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಮನಿಸಬೇಕು. ಒಂದು ವೇಳೆ ‘ಪ್ರೇಮದ ಊರಲಿ’ ಬೇರೆ ಭಾಷೆಗಳಲ್ಲೂ ಯಶಸ್ಸು ಕಂಡರೆ, ಕನ್ನಡದ ಸಣ್ಣ ಬಜೆಟ್ ಸಿನಿಮಾಗಳಿಗೆ ಹೊಸ ಮಾರುಕಟ್ಟೆ ತೆರೆಯುವ ಸಾಧ್ಯತೆ ಇದೆ.

ನೋಡಿರಿ


One thought on “3 ಕೋಟಿ ಬಜೆಟ್ 30 ಕೋಟಿ ಕಲೆಕ್ಷನ್ – ಪ್ರೇಮದ ಊರಿಗೆ ಪ್ಯಾನ್ IND ಕನಸು”