3 ವರ್ಷ.. 13 ಜನ್ರಿಗೆ ಗೇಟ್ ಪಾಸ್ – 2022 To 2025.. ಅದೆಷ್ಟು ಬದಲಾವಣೆ?
T-20I ತಂಡದಲ್ಲಿ ಮೇಜರ್ ಸರ್ಜರಿ

3 ವರ್ಷ.. 13 ಜನ್ರಿಗೆ ಗೇಟ್ ಪಾಸ್ – 2022 To 2025.. ಅದೆಷ್ಟು ಬದಲಾವಣೆ?T-20I ತಂಡದಲ್ಲಿ ಮೇಜರ್ ಸರ್ಜರಿ

ಟೀಂ ಇಂಡಿಯಾದಲ್ಲಿ ಬದಲಾವಣೆ ಗಾಳಿ ಹೊಸದೇನು ಅಲ್ಲ. ಹೊಸ ಕ್ಯಾಪ್ಟನ್, ಹೊಸ ಕೋಚ್ ಬಂದಾಗ ತಂಡದ ಆಯ್ಕೆಯಲ್ಲೂ ಸಾಕಷ್ಟು ಏರಿಳಿತಗಳನ್ನ ಕಾಣ್ತೇವೆ. ಪ್ರಸ್ತುತ ಭಾರತ ತಂಡದಲ್ಲೂ ಲೆಜೆಂಡರಿ ಕ್ರಿಕೆಟರ್​ಗಳ ಯುಗಾಂತ್ಯ ಒಂದ್ಕಡೆಯಾದ್ರೆ ಹೊಸ ತಲೆಮಾರಿನ ಮತ್ತೊಂದು ಯುಗ ಆರಂಭವಾಗ್ತಿದೆ. 2022ರಲ್ಲಿ ಭಾರತದ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ದಿಗ್ಗಜ ಆಟಗಾರರಿದ್ರು. ಬಟ್ ಈಗ ತಂಡದ ತುಂಬೆಲ್ಲಾ ಹೊಸ ಚಿಗುರೇ ಇದೆ.

ಇದನ್ನೂ ಓದಿ : ಟೀಂ ಇಂಡಿಯಾ ಲೆಫ್ಟ್-ರೈಟ್ ತಂತ್ರ – ಏಷ್ಯಾಕಪ್ ಗೆ ಪ್ಲೇಯಿಂಗ್ 11 ಹೇಗಿದೆ?

2022ರಲ್ಲಿದ್ದ 13 ಆಟಗಾರರು 2025ಕ್ಕೆ ಮಿಸ್ಸಿಂಗ್!

ಅಷ್ಟಕ್ಕೂ ಕೊನೆಯ ಬಾರಿಗೆ ಏಷ್ಯಾಕಪ್ ಟೂರ್ನಿ ನಡೆದಿದ್ದು 2023ರಲ್ಲಿ. ಆಗ ಭಾರತ ತಂಡವೇ ಚಾಂಪಿಯನ್ ಆಗಿತ್ತು. ಬಟ್ ನಾವಿಲ್ಲಿ ಹೇಳ್ತಿರೋದು 2022ರ ಏಷ್ಯಾಕಪ್ ಬಗ್ಗೆ. ಯಾಕಂದ್ರೆ 2022ರಲ್ಲಿ ಟಿ-20 ಮಾದರಿಯಲ್ಲಿ ಏಷ್ಯಾಕಪ್ ನಡೆದಿತ್ತು. ಅದಾದ ಬಳಿಕ 2025ರಲ್ಲಿ ಮತ್ತೆ ಟಿ-20 ಮಾದರಿಯಲ್ಲಿ ನಡೆಯುತ್ತಾ ಇದೆ. ಇದೇ ಕಾರಣಕ್ಕೆ ಈ ಎರಡು ಆವೃತ್ತಿಗಳನ್ನ ಕಂಪೇರ್ ಮಾಡಿದ್ರೆ ತಂಡದಲ್ಲಿ ಬದಲಾವಣೆ ಕ್ರಾಂತಿಯೇ ಆಗಿದೆ. ಮೊದ್ಲಿಗೆ 2022ರಲ್ಲಿ ಸ್ಥಾನ ಪಡೆದವ್ರು ಯಾರು ಅನ್ನೋದನ್ನ ನೋಡೋಣ..

2022ರ ಏಷ್ಯಾಕಪ್ ತಂಡ!

ರೋಹಿತ್ ಶರ್ಮಾ (c), ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (WK), ರಿಷಬ್ ಪಂತ್ (WK), ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ರವಿಚಂದ್ರನ್ ಅಶ್ವಿನ್, ರವಿಚಂದ್ರನ್ ಅಶ್ವಿನ್

ಹೀಗೆ 17 ಆಟಗಾರರನ್ನ ಸೆಲೆಕ್ಟ್ ಮಾಡ್ಲಾಗಿತ್ತು. ಈ ಪೈಕಿ ಪ್ರಸ್ತುತ ನಾಲ್ವರಷ್ಟೇ ಈ ಟೂರ್ನಿಗೆ ಸೆಲೆಕ್ಟ್ ಆಗಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ರವೀಂದ್ರ ಜಡೇಜಾ ಟಿ-20ಐನಿಂದ ನಿವೃತ್ತರಾಗಿದ್ರೆ ದಿನೇಶ್ ಕಾರ್ತಿಕ್ ಕ್ರಿಕೆಟ್​ನಿಂದಲೇ ನಿವೃತ್ತರಾಗಿದ್ದಾರೆ. ರಿಷಭ್ ಪಂತ್ ಅವರನ್ನ ಗಾಯದಿಂದ ಹೊರಗಿಡಲಾಗಿದೆ. ಇನ್ನು ಕೆ.ಎಲ್. ರಾಹುಲ್ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ದೀಪಕ್ ಹೂಡಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಮುಗಿದಿದೆ. ಉಳಿದಂತೆ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ದೀಪಕ್ ಚಾಹರ್ ಮತ್ತು ರವಿ ಬಿಷ್ಣೋಯ್ ಅವರಂತಹ ಬೌಲರ್‌ಗಳು ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಸೋ ಈ ಹಳೇ ಹಳೆಯ ತಂಡದಲ್ಲಿ ನಾಲ್ವರಷ್ಟೇ ಸ್ಥಾನ ಉಳಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಮಾತ್ರ. ಈ ನಾಲ್ವರು ಮಾತ್ರವೇ 2022 ಮತ್ತು 2025ರ ಏಷ್ಯಾಕಪ್​ನಲ್ಲಿ ಸ್ಥಾನ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ.

ಬದಲಾವಣೆಗೆ ಮುನ್ನುಡಿ ಬರೆದಿದ್ದೇ ಸ್ಟಾರ್ ಡಂ ವೀಕ್ ನೆಸ್!

ಹೌದು. ಸ್ಟಾರ್ ಆಟಗಾರರನ್ನೇ ಬಿಟ್ಟು ಟಿ-20ಐಗೆ ಯಂಗ್ ಸ್ಟರ್ಸ್ ಸೆಲೆಕ್ಟ್ ಮಾಡೋಕೆ ಕಾರಣವೂ ಇದೆ.  2022 ರ ಹೊತ್ತಿಗೆ, T20 ಸ್ವರೂಪವು ಕ್ರೇಜ್ ಹೆಚ್ಚಿಸಿಕೊಳ್ತಿತ್ತು. ಸ್ಟಾರ್ ಆಟಗಾರರು ಯಥಾಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಿದ್ರೆ ಸಾಕಾಗಲ್ಲ ಅನ್ನೋದು ಅರಿವಾಗತೊಡಗಿತ್ತು. ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಸ್ಟ್ರೈಕ್ ರೇಟ್‌ ಜೊತೆ ನಿರ್ಭೀತ ಬ್ಯಾಟಿಂಗ್ ಮಾಡ್ತಿದ್ರು. ಹೀಗಾಗೇ ಶ್ರೀಲಂಕಾ ತಂಡ 2022ರ  ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸೋಲಿಸಿದ್ದು ಮಾತ್ರವಲ್ಲದೆ ಟ್ರೋಫಿಯನ್ನು ಎತ್ತಿಹಿಡಿಯಿತು. ಸೋ ಇಲ್ಲಿಂದ ಬದಲಾವಣೆ ಅನಿವಾರ್ಯ ಅನ್ನಿಸಿತ್ತು ಬಿಸಿಸಿಐಗೆ. ಇನ್ಮುಂದೆ ಸ್ಟಾರ್ ಆಟಗಾರರಿಂದ ಮಾತ್ರ ಟಿ20 ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತೀಯ ಆಯ್ಕೆದಾರರು ಅರ್ಥ ಮಾಡ್ಕೊಂಡ್ರು. ಕ್ರಮೇಣ ಬದಲಾವಣೆ ಪ್ರಾರಂಭವಾಯಿತು. ಅನುಭವಿಗಳು ಮಂಕಾದ್ರೆ ಯುವ, ವೇಗದ ಆಟಗಾರರ ಗುಂಪು ಬೆಳೆದು ಬಂದಿತ್ತು. ಟಿ-20 ಮಾದರಿಯಲ್ಲಿ ಪವರ್ ಹಿಟ್ಟಿಂಗ್ ಪ್ಲೇಯರ್ಸ್​ಗಷ್ಟೇ ಮಣೆ ಹಾಕೋದು.

Shantha Kumari