ಧೋನಿ ಸ್ಟಂಪಿಂಗ್ ಗೆ ಫ್ಯಾನ್ಸ್ ಫಿದಾ – ಕಿಶನ್ ಕೈ ಬಿಟ್ಟು ತಪ್ಪು ಮಾಡಿತಾ ಮುಂಬೈ?

ಧೋನಿ ಸ್ಟಂಪಿಂಗ್ ಗೆ ಫ್ಯಾನ್ಸ್ ಫಿದಾ – ಕಿಶನ್ ಕೈ ಬಿಟ್ಟು ತಪ್ಪು ಮಾಡಿತಾ ಮುಂಬೈ?

ಸೂಪರ್ ಸಂಡೇಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿತ್ತು. ಮಧ್ಯಾಹ್ನ ಸನ್ ರೈಸರ್ಸ್ ಹೈದ್ರಾಬಾದ್ ವರ್ಸಸ್ ರಾಜಸ್ತಾನ್ ರಾಯಲ್ಸ್ ನಲ್ಲಿ ರನ್ ಮಳೆ ಸುರಿದ್ರೆ ರಾತ್ರಿ ಮ್ಯಾಚಲ್ಲಿ ಚೆನ್ನೈ ಮತ್ತು ಮುಂಬೈ ನಡುವೆ ಹೈವೋಲ್ಟೇಜ್ ಫೈಟ್ ನಡೆದಿತ್ತು. 18ನೇ ಸೀಸನ್ ಐಪಿಎಲ್​ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ವು. ಟಾಸ್ ಗೆದ್ದಂತ ಚೆನ್ನೈ ಟೀಂ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಹೀಗಾಗಿ ಫಸ್ಟ್ ಬ್ಯಾಟಿಂಗ್​ಗೆ ಇಳಿದ ಮುಂಬೈಗೆ ಶಾಕ್ ಮೇಲೆ ಶಾಕ್ ಎದುರಾಯ್ತು.

ಇದನ್ನೂ ಓದಿ : RCBಗಾಗಿ ಮದುವೆಯೇ ರದ್ದು! – ಅಂದಿನ ತ್ಯಾಗ.. ಈಗ ಕೋಟಿಗಳ ಒಡೆಯ

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಮುಂಬೈ ಪರ ರೋಹಿತ್ ಶರ್ಮಾ ಹಾಗೇ ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದ್ರು. ಆದ್ರೆ 4 ಬಾಲ್ ಫೇಸ್ ಮಾಡಿದ ರೋಹಿತ್ ಖಾತೆ ತೆರೆಯದೇ ಔಟಾದ್ರು. ಇತ್ತ ರಿಕಲ್ಟನ್ ಕೂಡ 13 ರನ್​ಗೆ ವಿಕೆಟ್ ಒಪ್ಪಿಸಿದ್ರು. ವಿಲ್ ಜಾಕ್ಸ್ 11 ರನ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ 29 ರನ್​ಗೆ ಸುಸ್ತಾದ್ರು. ತಿಲಕ್ ವರ್ಮಾ 31 ರನ್ ಗಳಿಸಿದ್ದೇ ಎಂಐ ಪರ ಹೈಯೆಸ್ಟ್ ಸ್ಕೋರ್ ಆಯ್ತು. ಆ ನಂತ್ರ ಬಂದವ್ರು ಯಾರೂ ಹೆಚ್ಚು ಹೊತ್ತು ಕ್ರೀಸ್​ ಕಚ್ಚಿ ನಿಲ್ಲಲಿಲ್ಲ. ಪರಿಣಾಮ ಎಂಐ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.

ಮುಂಬೈ ನೀಡಿದ 156 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ಟೀಂ ಪರ ರಾಹುಲ್ ತ್ರಿಪಾಠಿ 2 ರನ್​ಗೆ ಔಟ್ ಆದ್ರು.   ಬಟ್ ರಚಿನ್ ರವೀಂದ್ರ ಹಾಗೇ ರುತುರಾಜ್ ಗಾಯಕ್ವಾಡ್ ಬೊಂಬಾಟ್ ಜೊತೆಯಾಟವಾಡಿದ್ರು. ರಚಿನ್ ರವೀಂದ್ರ (65) ಮತ್ತು ನಾಯಕ ರುತುರಾಜ್ ಗಾಯಕ್​ವಾಡ್ (53) ಗಳಿಸಿದ್ರು. ಜಡೇಜಾ ಕೂಡ 17 ರನ್ ಗಳಿಸಿ ನೆರವಾದ್ರು. ಅಂತಿಮವಾಗಿ ಗೆಲುವಿಗೆ 4 ರನ್​ಗಳ ಅಗತ್ಯ ಇದ್ದಾಗ ಧೋನಿ ಕ್ರೀಸ್​ಗೆ ಎಂಟ್ರಿ ಕೊಡ್ತಿದ್ದಂತೆ ಚೆಪಾಕ್​ನ ಮೈದಾನವೇ ಶೇಕ್ ಆಗುವಂಥ ಸದ್ದು ಕೇಳ್ತಿತ್ತು. ಬಟ್ ಧೋನಿ 2 ಬಾಲ್ ಫೇಸ್ ಮಾಡಿದ್ರೂ ಯಾವುದೇ ರನ್ ಬರ್ಲಿಲ್ಲ. ಅಂತಿಮವಾಗಿ ಕೊನೇ ಓವರ್​ನ ಮೊದಲ ಎಸೆತದಲ್ಲಿ ರಚಿನ್ ರವೀಂದ್ರ ಸಿಕ್ಸ್ ಬಾರಿಸೋ ಮೂಲಕ ಮ್ಯಾಚ್ ಫಿನಿಶ್ ಮಾಡಿದ್ರು. ಚೆನ್ನೈ ಪರ ಖಲೀಲ್ ಅಹಮದ್ 3 ಮತ್ತು ನೂರ್ ಅಹಮದ್ 4 ವಿಕೆಟ್ ಪಡೆದು ಮುಂಬೈ ತಂಡವನ್ನ ಕಾಡಿದ್ರು.  ಮುಂಬೈ ಪರ ವಿಗ್ನೇಶ್ ಪುಥುರ್ 3 ವಿಕೆಟ್ ಕಬಳಿಸಿ ಚೆನ್ನೈಗೂ ಟೆನ್ಷನ್ ಹೆಚ್ಚಿಸಿದ್ರು.

ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಹೈಲೆಟ್ ಅಂದ್ರೆ ಧೋನಿ ಸ್ಪಂಪಿಂಗ್. ಮುಂಬೈ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಶರವೇಗದಲ್ಲಿ ಸ್ಟಂಪಿಂಗ್​ ಮಾಡುವ ಮೂಲಕ ಧೋನಿ ಎಲ್ಲರ ಗಮನ ಸೆಳೆದ್ರು. ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 29 ರನ್ ಗಳಿಸಿ ಬ್ಯಾಟಿಂಗ್​ ಮುಂದುವರೆಸಿದ್ದರು. ಈ ವೇಳೆ ನೂರ್​ ಅಹ್ಮದ್​ ಎಸೆತದಲ್ಲಿ ಬೌಂಡರಿ ಬಾರಿಸಲು ಕ್ರೀಸ್​ ಬಿಟ್ಟು ಹೊರ ಬಂದ ಸೂರ್ಯ ಬೌಲ್​ ಮಿಸ್​ ಮಾಡಿದರು. ಈ ವೇಳೆ ಚೆಂಡು ವಿಕೇಟ್​ ಕೀಪರ್​ ಧೋನಿ ಅವರ ಕೈ ಸೇರಿತು. ಕೂಡಲೇ ಧೋನಿ ಸ್ಟಂಪಿಂಗ್​ ಮಾಡಿದರು. ಕೇವಲ 0.12 ಸೆಕೆಂಡ್​ಗಳಲ್ಲಿ ಧೋನಿ ಸ್ಟಂಪಿಂಗ್​ ಮಾಡಿ ಅಚ್ಚರಿ ಮೂಡಿಸಿದರು. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಟಂಪಿಂಗ್ (44) ಮಾಡಿದ ದಾಖಲೆ ಧೋನಿ ಹೆಸರಿನಲ್ಲಿದೆ.

ಭಾನುವಾರದ ಪಂದ್ಯದಲ್ಲಿ ಮುಂಬೈನ ಸೋಲಿಗೆ ಕಾರಣವೇ ಬ್ಯಾಟಿಂಗ್ ಫೇಲ್ಯೂರ್. ತಿಲಕ್ ವರ್ಮಾ 31 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್. ಈ ಸೋಲಿನ ಬೆನ್ನಲ್ಲೇ ಮುಂಬೈ ಫ್ರಾಂಚೈಸಿ ಇಶಾನ್ ಕಿಶನ್ ಕೈಬಿಟ್ಟು ತಪ್ಪು ಮಾಡಿತಾ ಎನ್ನುವಂಥ ಚರ್ಚೆ ಶುರುವಾಗಿದೆ. ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಸೇರಿರುವ ಕಿಶನ್ ಪಸ್ಟ್ ಮ್ಯಾಚ್​ನಲ್ಲೇ ಸುನಾಮಿ ಎಬ್ಬಿಸಿದ್ದಾರೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಸನ್ ರೈಸರ್ಸ್ ನಿಗದಿತ 20 ಓವರ್ ಗಳಲ್ಲಿ 286 ರನ್ ಗಳನ್ನು ಕಲೆಹಾಕಿತು. ಕಳೆದ ಸೀಸನ್ ನಲ್ಲಿ ಸನ್ ರೈಸರ್ಸ್ ತಂಡವೇ ಆರ್ ಸಿಬಿ ವಿರುದ್ಧ ಗಳಿಸಿದ್ದ 287 ರನ್ ಐಪಿಎಲ್ ಇತಿಹಾಸದ ಅತಿ ದೊಡ್ಡ ಮೊತ್ತವಾಗಿದೆ. ಕೇವಲ 1 ರನ್ ಗಳಿಂದ ತಮ್ಮದೇ ದಾಖಲೆಯನ್ನು ಬ್ರೇಕ್ ಮಾಡಲು ಸಾಧ್ಯವಾಗ್ಲಿಲ್ಲ. ಟ್ರಾವಿಸ್ ಹೆಡ್ 67 ರನ್ ಬಾರಿಸಿದ್ರೆ ಇಶಾನ್ ಕಿಶಾನ್ ಅವರು 47 ಎಸೆತಗಳಲ್ಲಿ 11 ಬೌಂಡರಿ 6 ಸಿಕ್ಸರ್ ಗಳಿದ್ದ ಅಜೇಯ 106 ರನ್ ಗಳಿಸಿದರು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 242 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅಂತಿಮವಾಗಿ ಹೈದ್ರಾಬಾದ್ ಟೀಂ 44 ರನ್​ಗಳಿಂದ ಗೆದ್ದು ಬೀಗಿತು.

Shantha Kumari

Leave a Reply

Your email address will not be published. Required fields are marked *