ಮೂರು ಟೀಂ ಐಪಿಎಲ್‌ನಿಂದ ಔಟ್ – Top 4 ಸ್ಥಾನಕ್ಕೆ 7ತಂಡಗಳ ರೇಸ್
RCB Vs LSG ಯಾರಿಗೆ ಗೆಲುವು?

18ನೇ ಐಪಿಎಲ್ ಸೀಸನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ದಿನದಿಂದ ದಿನಕ್ಕೆ ಸಖತ್ ಕಿಕ್ ಕೊಡ್ತಿದೆ. ಪ್ಲೇ ಆಫ್ ರೇಸ್ ಜೋರಾಗಿದ್ದು, 7 ತಂಡಗಳಲ್ಲಿ ಯಾವ 4 ನಾಲ್ಕು ತಂಡ ಪ್ಲೇ ಆಫ್ ಪ್ರವೇಶ ಮಾಡ್ತಾವೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈ ನಡುವೆ ಈ ಸೀಸನ್‌ನಲ್ಲಿ 3 ದೊಡ್ಡ ತಂಡಗಳೇ ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿವೆ ಮೊದಲು ಯಾವೆಲ್ಲಾ ತಂಡಗಳು ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದಿವೆ ಅನ್ನೋದನ್ನ ನೋಡೋಣ ಬನ್ನಿ..
ಎರಡೇ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
ಈ ಬಾರಿಯ ಐಪಿಎಲ್ನಲ್ಲಿ ಈಗಾಗಲೇ 11 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು 9 ಪಂದ್ಯಗಳಲ್ಲಿ ಸೋಲನುಭವಿಸಿದರೆ, 2 ಮ್ಯಾಚ್ಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಸಿಎಸ್ಕೆ ತಂಡಕ್ಕೆ ಇನ್ನೂ 3 ಪಂದ್ಯಗಳಿವೆ. ಈ ಪಂದ್ಯಗಳಲ್ಲಿ ಗೆದ್ದರೂ ಸಿಎಸ್ಕೆ ತಂಡಕ್ಕೆ ಪ್ಲೇಆಫ್ಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ರಾಜಸ್ಥಾನ್ ರಾಯಲ್ಸ್
ಆರ್ಆರ್ ತಂಡವು ಈಗಾಗಲೇ 12 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು 3 ಮ್ಯಾಚ್ಗಳಲ್ಲಿ ಮಾತ್ರ. ಇನ್ನುಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂದಿನ ಹಂತಕ್ಕೇರಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಆರ್ಆರ್ ಪಡೆಯ ಪ್ಲೇಆಫ್ ಕನಸು ಕೂಡ ಕಮರಿದೆ.
ಎಸ್ಆರ್‌ಹೆಚ್‌ಗೆ ಕೈ ಕೊಟ್ಟ ಮಳೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಮವಾರದ ನಿರ್ಣಾಯಕ ಸೆಣಸಾಟದಲ್ಲಿ ತಂಡಕ್ಕೆ ಗೆಲ್ಲಲೇಬೇಕಿತ್ತು. ಆದರೆ ಅದಕ್ಕೆ ಮಳೆರಾಯ ಬಿಡಲಿಲ್ಲ. ಧಾರಾಕಾರ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತು. ಸುಲಭದಲ್ಲಿ ಗೆದ್ದು 2 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಕೇವಲ 1 ಅಂಕಕ್ಕೆ ತೃಪ್ತಿಪಟ್ಟುಕೊಂಡಿತು. ಆಡಿರುವ 11 ಪಂದ್ಯಗಳಲ್ಲಿ ಕೇವಲ 7 ಅಂಕ ಸಂಪಾದಿಸಿರುವ ತಂಡ, ನಾಕೌಟ್ ರೇಸ್‌ನಿಂದ ಅಧಿಕೃತವಾಗಿ ಹೊರಬಿತ್ತು. ಅತ್ತ ಡೆಲ್ಲಿ ಕೂಡಾ 1 ಅಂಕ ಗಳಿಸಿದರೂ, ತಂಡ 11 ಪಂದ್ಯಗಳಲ್ಲಿ 13 ಅಂಕದೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಇನ್ನೆರಡು ಪಂದ್ಯ ಗೆದ್ದರೂ ತಂಡಕ್ಕೆ ಪ್ಲೇ-ಆಫ್‌ಗೇರಬಹುದು.
ಲಕ್ನೋ ಪ್ಲೇ ಆಫ್ ಹಾದಿ ಕಷ್ಟ ಕಷ್ಟ
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿನ ಹಾದಿ ಕಷ್ಟಕರವಾಗಿದೆ. ಇದಕ್ಕೆ ಕಾರಣ ಎಲ್‌ಎಸ್‌ಜಿ ಮುಂದಿನ ಪಂದ್ಯಗಳಲ್ಲಿ ಎದುರಿಸಲಿರುವ ತಂಡಗಳ ಪ್ರದರ್ಶನ. ಇದೇ 9 ರಂದು ಎಲ್‌ಎಸ್‌ಜಿ ತನ್ನ ತವರು ಅಂಗಳದಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಆರ್‌ಸಿಬಿ ಈ ಪಂದ್ಯ ಗೆದ್ದ ಪ್ಲೇ ಆಫ್‌ಗೆ ಕ್ವಾಲಿಫೈ ಆಗುವ ಕನಸು ಕಾಣುತ್ತಿದ್ದರೆ, ಎಲ್‌ಎಸ್‌ಜಿ ಈ ಪಂದ್ಯವನ್ನು ಸಹ ಗೆಲ್ಲಲೇ ಬೇಕು.