ವಿಶ್ವಕಪ್ ಗೆದ್ರೆ ಭಾರತವೇ ಬಾಸ್ – ಇದು ಚರಿತ್ರೆ ಸೃಷ್ಟಿಸೋ ಅವತಾರ
ಫೆ.15ಕ್ಕೆ ಪಾಕ್ ಗೆ ಪಂಚ್ ಪಕ್ಕಾ

ಒಂದೇ ವಾರ.. ಪ್ರತಿಷ್ಠಿತ ಟಿ-20 ವಿಶ್ವಕಪ್ ಟೂರ್ನಿಗೆ ಇನ್ನೊಂದೇ ವಾರ. ಹತ್ತನೇ ಆವೃತ್ತಿಯ ಚುಟುಕು ಮಾದರಿಯ ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ 20 ತಂಡಗಳು ಅಖಾಡಕ್ಕಿಳಿಯಲಿವೆ. ಈ ಆವೃತ್ತಿಯಲ್ಲೂ ಟೀಂ ಇಂಡಿಯಾವೇ ಕಪ್ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಕಳೆದ ಎರಡು ವರ್ಷಗಳಿಂದ ಸೋಲನ್ನೇ ಕಾಣದೆ ವಿಶ್ವಕಪ್ ಅಖಾಡಕ್ಕೆ ಇಳೀತಿರೋ ಭಾರತ ಈ ಸಲವೂ ಟ್ರೋಫಿ ಗೆದ್ರೆ ಹಲವು ವಿಶ್ವದಾಖಲೆಗಳನ್ನ ನಿರ್ಮಿಸಲಿದೆ.
ಇದನ್ನೂ ಓದಿ : ವಿಶ್ವಕಪ್ ಹೀರೋ ವಿಲನ್ ಆಗಿದ್ರಾ? – ಗೌರವ ಸಿಗದೇ ಕ್ರಿಕೆಟ್ ಗೇ ಗುಡ್ ಬೈ
ಮಾರ್ಡ್ರೆನ್ ಕ್ರಿಕೆಟ್ನಲ್ಲಿ ಅಭಿಮಾನಿಗಳ ಅಚ್ಚುಮೆಟ್ಟಿನ ಟಿ-20 ಫಾರ್ಮೆಟ್ನ ವಿಶ್ವಕಪ್ ಯುದ್ಧ ಫೆಬ್ರವರಿ 7ರಂದು ಆರಂಭವಾಗಲಿದೆ. ಸತತ 1 ತಿಂಗಳು 20 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದ್ದು ಮಾರ್ಚ್ 8 ರಂದು ಯಾರು ಚಾಂಪಿಯನ್ಸ್ ಅನ್ನೋದು ಗೊತ್ತಾಗಲಿದೆ. ಸದ್ಯ ಭಾರತ ಹಾಲಿ ಚಾಂಪಿಯನ್ ಆಗಿದ್ದು 9ನೇ ಸೀಸನ್ ಗೆದ್ದ ಬಳಿಕ ಸಾಲಿಡ್ ಫಾರ್ಮ್ನಲ್ಲಿದೆ. 36 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದು ಟ್ರೋಫಿ ಗೆಲ್ಲುವ ಫೇವರಿಟ್ ಟೀಂ ಆಗಿದೆ. 2025 ರಲ್ಲಿ 21 ಪಂದ್ಯಗಳನ್ನಾಡಿರುವ ಭಾರತ 16 ಪಂದ್ಯಗಳನ್ನು ಗೆದ್ದಿದೆ. ಅಜೇಯವಾಗಿ ಏಷ್ಯಾಕಪ್ನೂ ಗೆದ್ದಿದೆ. ಈಗ ಇದೇ ಜೋಶ್ನಲ್ಲೇ ವಿಶ್ವಕಪ್ನೂ ಗೆದ್ರೆ 3 ವಿಶ್ವದಾಖಲೆಗಳು ನಿರ್ಮಾಣವಾಗುತ್ತೆ.
ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುತ್ತಾ ಭಾರತ?
ಟೀಂ ಇಂಡಿಯಾ 2024 ರಲ್ಲಿ ಟಿ 20 ವಿಶ್ವಕಪ್ ಗೆದ್ದು ಭಾರತ ಹಾಲಿ ಚಾಂಪಿಯನ್ ಆಗಿದೆ. 2026 ರ ಆವೃತ್ತಿಯನ್ನು ಗೆದ್ದರೆ, ಸತತ ಎರಡು ಆವೃತ್ತಿಗಳನ್ನು ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಟೂರ್ನಮೆಂಟ್ ಇತಿಹಾಸದಲ್ಲಿ ಯಾವುದೇ ತಂಡ ಸತತ ಎರಡು ಆವೃತ್ತಿಗಳನ್ನು ಗೆದ್ದಿಲ್ಲ. ಪಾಕಿಸ್ತಾನ 2007 ರ ಫೈನಲ್‌ನಲ್ಲಿ ಸೋತಿತ್ತು. ಆದ್ರೆ 2009 ರಲ್ಲಿ ಗೆದ್ದಿತು. ಶ್ರೀಲಂಕಾ 2012 ರ ಫೈನಲ್‌ನಲ್ಲಿ ಸೋತಿತ್ತು ಆದರೆ 2014 ರಲ್ಲಿ ಗೆದ್ದಿತು. ಬೇರೆ ಯಾವುದೇ ತಂಡಕ್ಕೂ ಇಂಥ ಚಾನ್ಸ್ ಸಿಕ್ಕಿಲ್ಲ. ಸದ್ಯ ಭಾರತವು ಅದ್ಭುತ ಫಾರ್ಮ್‌ನಲ್ಲಿ ಇರೋದ್ರಿಂದ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ನಿರೀಕ್ಷೆ ಮೂಡಿಸಿದ್ದಾರೆ.
ಟಿ-20ಐನಲ್ಲಿ ಮೂರು ಸಲ ಟ್ರೋಫಿ ಗೆಲುವಿಗೆ ಚಾನ್ಸ್!
ಇನ್ನು ಟಿ-20 ವಿಶ್ವಕಪ್ ಮಾದರಿಯಲ್ಲಿ ಯಾವ ತಂಡ ಕೂಡ ಮೂರು ಸಲ ಕಪ್ ಗೆದ್ದಿಲ್ಲ. ಬಟ್ ಇಂಥಾದ್ದೊಂದು ಸುವರ್ಣಾವಕಾಶ ಭಾರತಕ್ಕಿದೆ. ಭಾರತ 2026 ರ ಟಿ 20 ವಿಶ್ವಕಪ್ ಗೆದ್ದರೆ ಮೂರು ಸಲ ಪ್ರಶಸ್ತಿಗಳನ್ನು ಗೆದ್ದ ಮೊದಲಿಗರಾಗುತ್ತಾರೆ. ಯಾವುದೇ ತಂಡವು ಟಿ 20 ವಿಶ್ವಕಪ್ ಅನ್ನು ಮೂರು ಸಲ ಗೆದ್ದಿಲ್ಲ. ಭಾರತ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ತಲಾ ಎರಡು ಬಾರಿ ಗೆದ್ದಿವೆ. 2007 ರಲ್ಲಿ ಭಾರತ ಮೊದಲ ಬಾರಿಗೆ ವಿಜೇತರಾಗಿದ್ದು, 2024 ರಲ್ಲಿ ಮತ್ತೊಮ್ಮೆ ಟ್ರೋಫಿಯನ್ನು ಎತ್ತಿಹಿಡಿಯಿತು. 2026 ರಲ್ಲಿ ಮತ್ತೆ ಗೆದ್ರೆ ಟಿ-20 ವಿಶ್ವಕಪ್ನಲ್ಲಿ 3 ಸಲ ಕಪ್ ಗೆದ್ದ ಮೊದಲ ಟೀಂ ಎನಿಸಿಕೊಳ್ತಾರೆ.
ತವರು ನೆಲದಲ್ಲಿ ಟ್ರೋಫಿ ಗೆದ್ದ ಮೊದಲ ಟೀಂ ಆಗುತ್ತಾ?
ಇನ್ನು ಮೆನ್ ಇನ್ ಬ್ಲೂ ತಂಡ ಟಿ20 ವಿಶ್ವಕಪ್ ಗೆದ್ದರೆ, ತವರು ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಟೀಂ ಆಗುತ್ತೆ. ಯಾವುದೇ ರಾಷ್ಟ್ರವು ತನ್ನ ಹೋಂ ಪಿಚ್ನಲ್ಲಿ ಈ ಸಾಧನೆ ಮಾಡಿಲ್ಲ. ಶ್ರೀಲಂಕಾ 2012 ರಲ್ಲಿ ಸ್ಪರ್ಧೆಯನ್ನು ಆಯೋಜಿಸಿದಾಗ ಗೆಲ್ಲೋ ಚಾನ್ಸ್ ಇತ್ತು. ಬಟ್ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಸೋಲಬೇಕಾಯ್ತು. ಆದ್ರೀಗ ಭಾರತಕ್ಕೆ ಅದನ್ನು ಸಾಧಿಸುವ ಅವಕಾಶವಿದೆ. 2026ರ ಫೈನಲ್ ಪಂದ್ಯವನ್ನ ಅಹಮದಾಬಾದ್‌ನಲ್ಲಿ ಆಯೋಜನೆ ಮಾಡಲಾಗಿದೆ. ಬಟ್ ಎದುರಾಳಿ ಪಾಕಿಸ್ತಾನವಾಗಿದ್ದರೆ ಅದು ಸಾಧ್ಯ ಆಗಲ್ಲ. ಯಾಕಂದ್ರೆ ಆಗ ಫೈನಲ್ ಕೊಲಂಬೊದಲ್ಲಿ ನಡೆಯಲಿದೆ. ಆದರೆ ಭಾರತ ಇನ್ನೂ ಅದನ್ನು ಗೆದ್ದ ಮೊದಲ ಸಹ-ಆತಿಥೇಯರಾಗಬಹುದು. ಪಾಕಿಸ್ತಾನದ ಪ್ರಸ್ತುತ ಫಾರ್ಮ್ ನೋಡಿದ್ರೆ ಟಿ20 ವಿಶ್ವಕಪ್ ಫೈನಲ್ಗೇರೋದು ಕನಸಿನ ಮಾತು. ಹೀಗಾಗಿ ಭಾರತಕ್ಕೆ ಈ ಚರಿತ್ರೆ ಸೃಷ್ಟಿಸೋ ಅವಕಾಶವೂ ಇದೆ.
ಇನ್ನು ಟಿ-20ವಿಶ್ವಕಪ್ನಲ್ಲಿ ಭಾರತದ ಅಭಿಯಾನ ಯುಎಸ್ಎ ವಿರುದ್ಧ ಆರಂಭ ಆಗುತ್ತೆ. ಆನಂತ್ರ ಫೆಬ್ರವರಿ 15 ರಂದು ಪಾಕಿಸ್ತಾನದ ವಿರುದ್ಧ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಒಟ್ಟು 20 ತಂಡಗಳು ಭಾಗವಹಿಸುತ್ತಿದ್ದು, ಅಗ್ರ ಎಂಟು ತಂಡಗಳು ಸೂಪರ್ ಏಯ್ಟ್‌ಗೆ ಪ್ರವೇಶ ಪಡೆಯಲಿವೆ. ನಾಲ್ಕು ತಂಡಗಳು ಸೆಮಿಸ್ ಆಡಲಿದ್ದು, ಕೊನೆಯ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಮಾರ್ಚ್ 8 ರಂದು ಫೈನಲ್ ನಡೆಯಲಿದೆ.

ನೋಡಿರಿ

