3 ಮ್ಯಾಚ್.. 32 ರನ್ಸ್ ಸಾಕಾ? – ಪವರ್ ಪ್ಲೇನಲ್ಲೇ PRINCE ಫೇಲ್
ಗಿಲ್ ಗಾಗಿ ಹಠಕ್ಕೆ ಬಿದ್ರಾ ಗಂಭೀರ್?

3 ಮ್ಯಾಚ್.. 32 ರನ್ಸ್ ಸಾಕಾ? – ಪವರ್ ಪ್ಲೇನಲ್ಲೇ PRINCE ಫೇಲ್ಗಿಲ್ ಗಾಗಿ ಹಠಕ್ಕೆ ಬಿದ್ರಾ ಗಂಭೀರ್?

ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟಿ-20ಐ ಸರಣಿಯ ನಾಲ್ಕನೇ ಪಂದ್ಯ ನಾಳೆ ನಡೆಯಲಿದೆ. ಈ ಪಂದ್ಯ ಗೆದ್ದು ಭಾರತ ಸರಣಿ ಕೈವಶಕ್ಕೆ ಪ್ಲ್ಯಾನ್ ಮಾಡ್ತಿದ್ರೆ ಅತ್ತ ಸೌತ್ ಆಫ್ರಿಕಾ ಮ್ಯಾಚ್ ಗೆದ್ದು ಸರಣಿ ಸಮಬಲಕ್ಕೆ ಸಿದ್ಧವಾಗ್ತಿದೆ. ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ನಲ್ಲಿ ಚೇಂಜಸ್ ಆಗೋ ಚಾನ್ಸಸ್ ಕೂಡ ಇದೆ. ಯಾಕಂದ್ರೆ ಅಕ್ಷರ್ ಪಟೇಲ್ ಸರಣಿಯಿಂದ ರೂಲ್ಡ್ ಔಟ್ ಆಗಿದ್ದಾರೆ. ಌಂಡ್ ಓಪನಿಂಗ್ ಪಾರ್ಟ್ನರ್ಸ್ ಬದಲಾವಣೆ ಮಾಡೋ ಸಾಧ್ಯತೆಯೂ ಇದೆ. ಅದ್ರಲ್ಲೂ ಡಲ್ ಆಗಿರೋ ಗಿಲ್​ಗೆ ಗೇಟ್​ಪಾಸ್ ಕೊಟ್ರೇ ಬೆಸ್ಟ್ ಅನ್ನೋ ಟಾಕ್ ಕೂಡ ಇದೆ.

ಇದನ್ನೂ ಓದಿ : ಮಾರ್ಚ್ 26ಕ್ಕೆ IPL ಆರಂಭಕ್ಕೆ ಮುಹೂರ್ತ – ಮೇ 31ಕ್ಕೆ ಫೈನಲ್ ಪಂದ್ಯ ಫಿಕ್ಸ್

ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆಯಲಿರೋ ನಾಲ್ಕನೇ ಟಿ-20ಐ ಪಂದ್ಯದಿಂದ ಸ್ಪಿನ್ ಆಲ್​ರೌಂಡರ್ ಅಕ್ಷರ್ ಪಟೇಲ್ ರೂಲ್ಡ್ ಔಟ್ ಆಗಿದ್ದಾರೆ. ಹೆಲ್ತ್ ಇಶ್ಯೂನಿಂದಾಗಿ ಅವ್ರನ್ನ ತಂಡದಿಂದ ಕೈಬಿಡಲಾಗಿದೆ. ಅಕ್ಷನರ್ ಪಟೇಲ್ ಸ್ಥಾನಕ್ಕೆ ಶಹಬಾಜ್‌ ಅಹ್ಮದ್‌ ಅವರನ್ನು ಜಾಯ್ನ್ ಮಾಡಿಕೊಂಡಿದ್ದಾರೆ. ಶಹಬಾಜ್‌ ಅಹ್ಮದ್‌ ಸದ್ಯ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ರು. ಬಟ್ ಇವ್ರಿಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗೋದು ಡೌಟ್ ಇದೆ. ಯಾಕಂದ್ರೆ ಲಾಸ್ಟ್ ಮ್ಯಾಚಲ್ಲೇ ಅಕ್ಷರ್ ಬದಲಿಗೆ ಕುಲ್ದೀಪ್ ಆಡಿದ್ರು. ಹೀಗಾಗಿ ಮುಂದಿನ ಪಂದ್ಯಕ್ಕೆ ಬ್ಯಾಕಪ್​ ಪ್ಲೇಯರ್ ಆಗಿ ಮಾತ್ರ ಶಹಬಾದ್ ತಂಡದಲ್ಲಿ ಇರ್ಬೋದು. ಉಳಿದಂತೆ ಪ್ಲೇಯಿಂಗ್ 11ನಲ್ಲಿ ಬಿಗ್ ಚೇಂಜಸ್ ಅಂತಾ ಇಲ್ದೇ ಇದ್ರೂ ಓಪನಿಂಗ್ ಪಾರ್ಟ್ನರ್ಸ್ ಚೇಂಜ್ ಮಾಡಿ ಅನ್ನೋದೇ ಎಲ್ಲರ ಡಿಮ್ಯಾಂಡ್ ಆಗಿದೆ. ಅಂದ್ರೆ ಅಭಿಷೇಕ್ ಶರ್ಮಾ ಓಕೆ ಬಟ್ ಗಿಲ್ ಯಾಕೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.

3 ಪಂದ್ಯ.. 32 ರನ್ಸ್.. ಓಪನರ್ ಆಗಿ ಇಷ್ಟು ರನ್ಸ್ ಸಾಕಾ?

ಟಿ-20ಐ ಫಾರ್ಮೆಟ್​ನಲ್ಲಿ ಶುಭ್​ಮನ್ ಗಿಲ್ ತುಂಬಾನೇ ಸ್ಟ್ರಗಲ್ ಮಾಡ್ತಿದ್ದಾರೆ. ಏಷ್ಯಾಕಪ್​ನಿಂದ ಹಿಡಿದು ಮೊನ್ನೆ ಮ್ಯಾಚ್​ವರೆಗೂ ಅವ್ರ ಬ್ಯಾಟಿಂದ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಅದ್ರಲ್ಲೂ ಮೂರನೇ ಟಿ-20ಐ ಮ್ಯಾಚಲ್ಲಿ ಬಿಗ್ ಸ್ಕೋರ್ ಇರ್ಲಿಲ್ಲ. 117 ರನ್​ಗಳಿಗೆ ಆಲೌಟ್ ಆಗಿದ್ರು. ಹೀಗಾಗಿ ಟೈಂ ತಗೊಂಡ್ರೂ ಆ ನಂತ್ರ ಕವರ್​ಅಪ್ ಮಾಡ್ಕೊಂಡು ಫಾರ್ಮ್​ಗೆ ಮರಳಲು ಗಿಲ್​ಗೆ ಗೋಲ್ಡನ್ ಆಪರ್ಚುನಿಟಿ ಇತ್ತು. ಬಟ್ ಯುಟಿಲೈಸ್ ಮಾಡಿಕೊಳ್ಳಲಿಲ್ಲ. ಡಕ್​ಔಟ್ ಆಗೋದನ್ನ ತಪ್ಪಿಸಿಕೊಂಡ ಗಿಲ್ 28 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಌಂಡ್ ಈ ಸರಣಿಯಲ್ಲಿ ಮೂರೂ ಪಂದ್ಯಗಳಲ್ಲೂ ಸೇರಿ ಗಿಲ್ ಬ್ಯಾಟಿಂದ ಬಂದಿರೋದೇ 32 ರನ್ಸ್. ಫಸ್ಟ್ ಮ್ಯಾಚಲ್ಲಿ 4 ರನ್ಸ್, ಸೆಕೆಂಡ್ ಮ್ಯಾಚಲ್ಲಿ ಡಕ್​ಔಟ್.. ಮೂರನೇ ಮ್ಯಾಚಲ್ಲಿ 28 ರನ್ಸ್.. ಟೋಟಲ್ ಆಗಿ 32 ರನ್ಸ್ ಅಷ್ಟೇ. ದಿನೇ ದಿನೇ ಗಿಲ್ ಫಾರ್ಮ್ ಕುಸಿತವಾಗ್ತಿದ್ದು ತಂಡಕ್ಕೆ ಹೊರೆಯಾಗ್ತಾನೇ ಇದ್ದಾರೆ. 2025 ರಲ್ಲಿ 15 ಟಿ20ಐ ಇನ್ನಿಂಗ್ಸ್‌ಗಳಿಂದ 291 ರನ್ ಗಳಿಸಿದ್ದಾರೆ. ಅಲ್ದೇ ಗಿಲ್​ ಟಿ-20ಐಗೆ ಕಂ ಬ್ಯಾಕ್ ಮಾಡಿದ್ಮೇಲೆ ಕೆಲ ಸವಾಲುಗಳೂ ಎದುರಾಗಿವೆ.

ಅಗ್ರೆಸ್ಸಿವ್ ಬ್ಯಾಟಿಂಗ್ ಗೆ ಹೊಂದಿಕೊಳ್ಳದ ಗಿಲ್!

ಪ್ರಸ್ತುತ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲಿ ಅಗ್ರೆಸ್ಸಿವ್ ಮತ್ತು ಡೇಂಜರಸ್ ಇಂಟೆಂಟ್​ನಲ್ಲಿ ಬ್ಯಾಟ್ ಬೀಸ್ತಿದೆ.  ಅದ್ರಲ್ಲೂ ಓಪನರ್ ಅಭಿಷೇಕ್ ಶರ್ಮಾ ಭಾರತದ ಆಕ್ರಮಣಕಾರಿ ಅಟ್ಯಾಕ್​ಗೆ ಸರಾಗವಾಗಿ ಹೊಂದಿಕೊಂಡಿದ್ದಾರೆ. ಪವರ್‌ಪ್ಲೇನಲ್ಲಿ 185.7 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 44 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಬಟ್ ಗಿಲ್ ಸೆಟಲ್ ಆಗೋಕೆ ಟೈಂ ತಗೊಳ್ತಿದ್ದಾರೆ. ನೆಕ್ಸ್​​ಟ್ ಪ್ರೆಶರ್ ಗೆ ಸಿಲುಕಿ ವಿಕೆಟ್ ಒಪ್ಪಿಸ್ತಿದ್ದಾರೆ. ಈ ವರ್ಷ ಆಡಿದ 15 ಟಿ20 ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ 8 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಌಂಡ್ ಪವರ್​ ಪ್ಲೇನಲ್ಲಿ ಜಸ್ಟ್ 2 ಸಿಕ್ಸ್​ ಅಷ್ಟೇ ಬಾರಿಸಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ಗಿಲ್ ಕಂಪ್ಲೀಟ್ ಅಂಡರ್ ಪ್ರೆಶರ್​ನಲ್ಲಿ ಇದ್ದಾರೆ ಅನ್ನೋದು ಗೊತ್ತಾಗುತ್ತೆ.

ಗಿಲ್ ಹೊರಬಿದ್ರೆ ಸಂಜುಗಾದ್ರೂ ನ್ಯಾಯ ಸಿಗುತ್ತೆ!

ಅಷ್ಟಕ್ಕೂ ಇಲ್ಲಿ ಗಿಲ್​ರನ್ನ ತಂಡದಿಂದ ಹೊರಗಿಡಿ ಅನ್ನೋಕೆ ಮುಖ್ಯ ಕಾರಣನೇ ಬೆಂಚ್ ಕಾಯಿಸ್ತಿರೋ ಸಂಜು ಸ್ಯಾಮ್ಸನ್. ಗಿಲ್​ಗಿಂತ 100 ಪರ್ಸೆಂಟ್ ಬೆಸ್ಟ್ ಇದ್ರೂ ಬಿಸಿಸಿಐ ಮತ್ತು ಗಂಭೀರ್ ಮೊಂಡಾಟಕ್ಕೆ ಬೆಂಚ್ ಬಿಸಿ ಮಾಡುವಂತಾಗಿದೆ. ಗಿಲ್​ ಈ ವರ್ಷ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಬಟ್ ಸಂಜು ಓಪನರ್ ಆಗಿ 17 ಟಿ20 ಪಂದ್ಯಗಳಲ್ಲಿ 178.77 ಸ್ಟ್ರೈಕ್ ರೇಟ್‌ನಲ್ಲಿ 522 ರನ್ ಗಳಿಸಿದ್ದಾರೆ, ಆದರೆ ಗಿಲ್ 36 ಇನ್ನಿಂಗ್ಸ್‌ಗಳಿಂದ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ 869 ರನ್ ಗಳಿಸಿದ್ದಾರೆ. ಸೋ ಇದನ್ನೆಲ್ಲಾ ನೋಡಿದಾಗ ಟಿ-20ಐ ತಂಡಕ್ಕೆ ಗಿಲ್​ಗಿಂತ ಸಂಜುನೇ ಬೆಟರ್ ಅನ್ನೋದು ಗೊತ್ತಾಗ್ತಿದೆ.

2026ರ ಟಿ-20 ವಿಶ್ವಕಪ್ ಗೂ ಮುನ್ನ ಅಲರ್ಟ್!

ಟಿ-20ಐನಲ್ಲಿ ಟೀಂ ಇಂಡಿಯಾ ಅದ್ಭುತ ಜರ್ನಿ ಇದ್ರೂ 2026ರ ಫೆಬ್ರವರಿ ಮಾರ್ಚ್​ನಲ್ಲಿ ಟಿ-20 ವಿಶ್ವಕಪ್ ಇರೋದ್ರಿಂದ ಪ್ಳೇಯಿಂಗ್ 11 ಬಗ್ಗೆ ಬಿಸಿಸಿಐ ಈಗ್ಲೇ ಅಲರ್ಟ್ ಆಗ್ಬೇಕು. ಟಾಪ್ ಆರ್ಡರ್ ಬ್ಯಾಟಿಂಗ್​ನಲ್ಲಿ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬರ್ಬೇಕು. ಬಟ್ ಗಿಲ್​ ಕಡೆಯಿಂದ ಅದು ಸಾಧ್ಯವಾಗ್ತಿಲ್ಲ. ಗಿಲ್​ ಔಟ್ ಆಫ್ ಫಾರ್ಮ್ ಅಭಿಷೇಕ್​ಗೂ ಹೊಡೆತ ನೀಡ್ತಿದೆ. ಫಸ್ಟ್ ವಿಕೆಟ್ ಬಿದ್ದಾಗ ಅಭಿ ಕೂಡ ಕನ್ಫ್ಯೂಸ್ ಆಗ್ತಿದ್ದಾರೆ.  ಹೀಗಾಗಿ ಫಾರ್ಮ್‌ನಲ್ಲಿರುವ ಆಟಗಾರರನ್ನು ಸೆಲೆಕ್ಟ್ ಮಾಡೋದ್ರ ಜೊತೆಗೆ 2026 ರ ಟಿ 20 ವಿಶ್ವಕಪ್‌ಗಾಗಿ ತಂಡದಲ್ಲಿ ಬದಲಾವಣೆ ಮಾಡ್ಲೇಬೇಕಿದೆ. ಶಭ್​ಮನ್ ಗಿಲ್​ರನ್ನ ತಂಡದಿಂದ ಹೊರಗಿಟ್ರೆ ಹೆಚ್ಚಿನ ಲಾಭ ಇದೆ.

ಗಿಲ್ ಒಳ್ಳೆ ಆಟಗಾರನೇ. ಪ್ರಸ್ತುತ ಭಾರತದ ಆಲ್ ಫಾರ್ಮೆಟ್ ಪ್ಳೇಯರ್. ಬಟ್ ಬ್ಯಾಕ್ ಟು ಬ್ಯಾಕ್ ಮ್ಯಾಚಸ್ ಇರೋದ್ರಿಂದ ರೆಸ್ಟ್​ಲೆಸ್ ಆಗ್ತಿದ್ದಾರೆ. ಌಂಡ್ ಟಿ-20ಐಗೆ ಅಡ್ಜಸ್ಟ್ ಆಗೋದು ಕಷ್ಟ ಆಗ್ತಿದೆ. ಸೋ ಇನ್ನಾದ್ರೂ ಗಂಭೀರ್ ಮತ್ತು ಆಯ್ಕೆ ಸಮಿತಿ ಮೊಂಡಾಟ ಬಿಟ್ಟು ಬೇರೆ ಆಟಗಾರರನ್ನ ಆಯ್ಕೆ ಮಾಡ್ಬೇಕು. ಇದು ತಂಡಕ್ಕೂ ಒಳ್ಳೇದು.. ಗಿಲ್​ಗೂ ಒಳ್ಳೇದು.

Shantha Kumari