ವಿಜಯಲಕ್ಷ್ಮೀ ಮನೆಯಲ್ಲಿ ಹಣ ಕಳ್ಳತನ ಆಗಿಲ್ವಾ? – ಪೊಲೀಸರಿಗೇ ಶುರುವಾಯ್ತು ಅನುಮಾನ?

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿರುವಾಗಲೇ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನವಾಗಿತ್ತು. ಬರೋಬ್ಬರಿ 3 ಲಕ್ಷ ರೂಪಾಯಿ ಹಣ ಕಳ್ಳತವಾಗಿದ್ದು, ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೀಗ ಹಣ ಕಳ್ಳತನ ಆಗಿದ್ಯಾ? ಇಲ್ವಾ ಅನ್ನೋ ಅನುಮಾನ ಪೊಲೀಸರಿಗೆ ಶುರುವಾಗಿದೆ.
ಇದನ್ನೂ ಓದಿ: ಪಾಕ್ ಮುಂದೆ ಸೋತ ಬಾಂಗ್ಲಾದೇಶ – ಭಾರತ -ಪಾಕ್ ನಡುವೆ ಏಷ್ಯಾಕಪ್ ಫೈನಲ್!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರ ಬೆಂಗಳೂರಿನ ನಿವಾಸದಲ್ಲಿ 3 ಲಕ್ಷ ರೂ. ಕಳ್ಳತನವಾಗಿದೆ ಎಂದು ಇತ್ತೀಚೆಗೆ ವಿಜಯಲಕ್ಷ್ಮೀ ಅವರ ಮ್ಯಾನೇಜರ್ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೈಸೂರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳತನ ನಡೆದಿದೆ ಎಂದು ಕೇಸ್ ನೀಡಿದ್ರು. ಈ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಇಲ್ಲಿಯವರೆಗೆ 9 ಜನರ ವಿಚಾರಣೆ ನಡೆಸಿದ್ದಾರೆ. ಆದ್ರೆ ಪೊಲೀಸರಿಗೆ ಹಣ ಕಳವು ಯಾರು ಮಾಡಿರಬಹುದು ಅನ್ನೊ ಬಗ್ಗೆ ಒಂದೇ ಒಂದು ಸುಳಿವು ಕೂಡ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಇತ್ತ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ನೋಟಿಸ್ ನೀಡಿದ್ರೂ ಇದಕ್ಕೆ ಉತ್ತರ ನೀಡುತ್ತಿಲ್ಲ. ಇದೀಗ ವಿಜಯಲಕ್ಷ್ಮೀ ಮನೆಯಲ್ಲಿ ನಿಜವಾಗಿಯೂ ಹಣ ಕಳುವಾಗಿದ್ಯಾ ಅನ್ನೋ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ.
ಈ ಬೆನ್ನಲ್ಲೇ 3 ಲಕ್ಷ ಹಣದ ಮೂಲದ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಹಣವನ್ನ ಯಾವ ಕಾರಣಕ್ಕೆ ಮನೆಯಲ್ಲಿ ಇಡಲಾಗಿತ್ತು. ಆ ಹಣದ ಮೂಲ ಏನು ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಮೂವರು ಕೆಲಸಗಾರರು, ಮ್ಯಾನೇಜರ್ ನಾಗರಾಜ್, ವಿಜಯಲಕ್ಷ್ಮಿ ಮತ್ತು ಅವರ ತಾಯಿ, ಮಗ ವಿನೀಶ್ ಮತ್ತವನ ಮೂವರ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ.

ನೋಡಿರಿ

