ಮೈಮಾಟ ತೋರಿಸಿ ಮಂಚಕ್ಕೆ ಕರೆಯುತ್ತಿದ್ದಳು ಮಳ್ಳಿ – ಮನೆಗೆ ಬಂದವರನ್ನ ಬಿಕಿನಿಯಲ್ಲಿ ಸ್ವಾಗತಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಳು ಐನಾತಿ

ಮೈಮಾಟ ತೋರಿಸಿ ಮಂಚಕ್ಕೆ ಕರೆಯುತ್ತಿದ್ದಳು ಮಳ್ಳಿ – ಮನೆಗೆ ಬಂದವರನ್ನ ಬಿಕಿನಿಯಲ್ಲಿ ಸ್ವಾಗತಿಸಿ ಹನಿಟ್ರ್ಯಾಪ್ ಮಾಡುತ್ತಿದ್ದಳು ಐನಾತಿ

ಹಣ, ಹೆಣ್ಣು, ಮಣ್ಣಿಗೆ ಜನ ಬೇಗ ಮರುಳಾಗುತ್ತಾರೆ ಅನ್ನೋ ಮಾತಿದೆ. ಹೀಗಾಗೇ ಈಕೆ ತನ್ನ ಮೈಮಾಟವನ್ನೇ ಬಂಡವಾಳ ಮಾಡಿಕೊಂಡು ಜನರನ್ನ ಖೆಡ್ಡಾಗೆ ಬೀಳಿಸುತ್ತಿದ್ದಳು. ಗ್ಯಾಂಗ್ ಕಟ್ಟಿಕೊಂಡು ಸುಲಿಗೆಗೆ ಇಳಿದಿದ್ದಳು. ಇವಳ ಥಳಕು ಬಳಕು ಕಂಡು ಮೋಹಕ್ಕೆ ಒಳಗಾದವರು ಗುಂಡಿಗೆ ಬಿದ್ದರು ಎಂದೇ ಅರ್ಥ. ಇದೀಗ ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್​ ಗ್ಯಾಂಗ್​ ಸಿಕ್ಕಿಬಿದ್ದಿದ್ದು, ಪೊಲೀಸರ ಅತಿಥಿಯಾಗಿಯಾಗಿದ್ದಾರೆ.

ಇದನ್ನೂ ಓದಿ  : ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಹೊಸ ಪ್ಲಾನ್‌ – ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ ಅಳವಡಿಕೆ

ಮನೆಗೆ ಯಾರಾದರೂ ಅತಿಥಿ ಬಂದ್ರೆ ಮನೆ ಬಾಗಿಲು ತೆಗೆಯೋರು ಸ್ವಲ್ಪ ಡೀಸೆಂಟ್ ಆಗಿರುವ ಬಟ್ಟೆಗಳನ್ನ ಹಾಕಿಕೊಳ್ಳುತ್ತಾರೆ. ಆದರೆ ಈ ಮಳ್ಳಿ ಮಾತ್ರ ಬಿಕಿನಿಯಲ್ಲೇ ನಿಂತುಕೊಂಡು ಒಳಗೆ ಕರೆಯುತ್ತಿದ್ಲು. ತನ್ನ ರಂಗಿನಾಟದೊಂದಿಗೆ ವಂಚಿಸುತ್ತಿದ್ದ ಮುಂಬೈ ಮಾಡೆಲ್ ಲಾಕ್ ಆಗಿದ್ದಾಳೆ. ಗಂಡಸರನ್ನ ಮನೆಗೆ ಬರಲು ಹೇಳಿ ಬಿಕಿನಿಯಲ್ಲಿ ಸ್ವಾಗತಿಸುತ್ತಿದ್ದ ನೇಹಾ ಅಲಿಯಾಸ್ ಮೆಹರ್ ಎನ್ನುವಾಕೆ ಇದೀಗ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರ ಅತಿಥಿಯಾಗಿದ್ದಾಳೆ. ಟೆಲಿಗ್ರಾಮ್ ಹಾಗೂ ಮನೆಗೆ ಕರೆಯಿಸಿಕೊಂಡು ರಂಗಿನಾಟದ ಹಸಿ ಬಿಸಿ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ನೇಹಾ ಅಲಿಯಾಸ್ ಮೆಹರ್ ಎನ್ನುವಾಕೆಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆದು ತಂದಿದ್ದು, ತನಿಖೆ ವೇಳೆ ಮಾಡೆಲ್ ನೇಹಾಳ ಒಂದೊಂದೇ ರಂಗಿನಾಟ ಬಟಾಬಯಲಾಗಿವೆ. 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ.

ಈಕೆ ಜೊತೆಗೆ ಶರಣ ಪ್ರಕಾಶ ಬಳಿಗೇರ,ಅಬ್ದುಲ್ ಖಾದರ್, ಯಾಸಿನ್ ಎನ್ನುವರ ಬಂಧನವಾಗಿದ್ದು, ಇವರು ಈ ಬಾಂಬೆ ಮಾಡೆಲ್ ಇಟ್ಟುಕೊಂಡು ಬಲೆ ಬೀಸುತ್ತಿದ್ದರು. ಅಲ್ಲದೇ ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಟೆಲಿಗ್ರಾಮ್ ಮೂಲಕ ಕೆಲವರನ್ನು ಸಂಪರ್ಕ ಮಾಡಿದ್ದ ನೇಹಾ ಅಲಿಯಾಸ್ ಮೆಹರ್, ಲೈಂಗಿಕ ಕ್ರಿಯೆಗೆ ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಕರೆಯಿಸಿಕೊಳ್ಳುತ್ತಿದ್ದಳು. ಮಾಡೆಲ್​ ಮೇಲಿನ ಆಸೆಗೆ ಸಂತ್ರಸ್ತರು ಬಂದು ಮನೆ ಬೆಲ್ ಮಾಡುತ್ತಿದ್ದಂತೆಯೇ ನೇಹಾ, ಬಿಕಿನಿಯಲ್ಲಿ ಬಂದು ತಬ್ಬಿಕೊಂಡು ಸ್ವಾಗತ ಕೋರುತ್ತಿದ್ದಳು. ಈ ಬಿಕಿನಿ ಸ್ವಾಗತದ ಹಸಿ ಬಿಸಿ ದೃಶ್ಯ ಸಿಸಿಟಿವಿ ಸೆರೆ ಹಿಡಿಯುತ್ತಿತ್ತು. ಬಳಿಕ ಮೂರೇ ನಿಮಿಷದಲ್ಲಿ ಮನೆಗೆ ವಿಲನ್ಸ್ ಎಂಟ್ರಿಯಾಗಿ ಯುವತಿ ಜೊತೆಗಿನ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿಯುತ್ತಿದ್ದರು.

ಯುವತಿ ಆಸೆಗೆ ಮನೆಗೆ ಬಂದು ಲಾಕ್ ಆಗ್ತಿದ್ದವರ ಮೊಬೈಲ್​ಗಳಳನ್ನ ಹನಿಟ್ರ್ಯಾಪ್ ಗ್ಯಾಂಗ್ ಕಸಿದುಕೊಳ್ಳುತ್ತಿತ್ತು.  ಮೊಬೈಲ್ ನಲ್ಲಿರುವ ನಂಬರ್ ಗಳನ್ನೆಲ್ಲಾ ನೋಟ್ ಮಾಡಿಕೊಳ್ಳುತ್ತಿದ್ದರು. ಬಳಿಕ ವಿಡಿಯೋವನ್ನ ನಿನ್ನ ಸಂಪರ್ಕದಲ್ಲಿರುವ ಮೊಬೈಲ್ ನಂಬರ್ ಗಳಿಗೆ ಶೇರ್ ಮಾಡೋದಾಗಿ ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಡಲು ಶುರುಮಾಡುತ್ತಿದ್ದರು. ಹಣ ಕೊಡದಿದ್ರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳಿಸುವುದಾಗಿ ಬ್ಲ್ಯಾಕ್​ ಮೇಲೆ ಮಾಡುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ, ಆಕೆಯನ್ನ ಮದುವೆ ಆಗುವಂತೆ ಬೆದರಿಕೆ ಜೊತೆಗೆ ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು. ಅದಲ್ಲದೇ ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಸುತ್ತಿದ್ದರು. ಇದರಿಂದ ಸಂತ್ರಸ್ತರು ಹೆದರಿ ಹಣ ವರ್ಗಾವಣೆ ಮಾಡುತ್ತಿದ್ದರು. ಆದ್ರೆ, ಇವರಿಂದ ವಂಚನೆಗೊಳಗಾದ ವ್ಯಕ್ತಿಯೋರ್ವರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಈ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ 12ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ಪೀಕಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

suddiyaana