3 ಅಡಿ ವರ.. 4 ಅಡಿ ವಧು – ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಶ್ವದ ಅತ್ಯಂತ ಕಿರಿಯ ಬಾಡಿಬಿಲ್ಡರ್
ಸಾಧನೆ ಮಾಡಲು ವ್ಯಕ್ತಿಗೆ ದೇಹದ ಎತ್ತರ, ತೂಕ, ಸಾಮರ್ಥ್ಯ ಯಾವುದೂ ಅಡ್ಡಿ ಆಗೋದಿಲ್ಲ. ಈ ಮಾತು ಆಗಾಗ ಸಾಭೀತಾಗಿದೆ. ಕೆಲವರು ತಮ್ಮ ದೇಹದ ನ್ಯೂನತೆಯನ್ನು ಮೆಟ್ಟಿ ನಿಂತು ಸಾಧನೆಗಳನ್ನು ಮಾಡುವುದನ್ನು ನಾವು ಕೇಳಿದ್ದೇವೆ. ಈ ಸಾಲಿನಲ್ಲಿ 3 ಅಡಿ ಎತ್ತರದ ಭಾರತದ ದೇಹದಾರ್ಢ್ಯ ಪಟು ಪ್ರತೀಕ್ ಮೋಹಿತೆ ಕೂಡ ಇದ್ದಾರೆ. ಇವರು ತಮ್ಮ ಶಕ್ತಿ ಪ್ರದರ್ಶನದ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: ಮದುವೆಯಾದ ಎರಡೇ ದಿನಕ್ಕೆ ಸರ್ಕಾರಿ ಕೆಲಸ ಕಳೆದುಕೊಂಡ ವರ – ಕಾರಣವೇನು ಗೊತ್ತಾ?
ಪ್ರತೀಕ್ ಮೋಹಿತೆ ರಾಯಗಢದ ನಿವಾಸಿಯಾಗಿದ್ದಾರೆ. 4 ವರ್ಷಗಳ ಹಿಂದೆ ಅವರ ತಂದೆ ಪುಣೆ ಮೂಲದ 4 ಅಡಿ ಎತ್ತರದ ಜಯ ಎಂಬಾಕೆಯನ್ನ ಪರಿಚಯಿಸಿದ್ದರು. ಅದೇ ಸಮಯದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ ಮತ್ತು 2018 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಈಗ ಇಬ್ಬರೂ ಮದುವೆಯಾಗಿದ್ದಾರೆ. ಇವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಪ್ರತೀಕ್ ಮೋಹಿತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಪ್ರತೀಕ್ ತಮ್ಮ ಮಡದಿಯನ್ನು ಕರೆದೊಯ್ಯಲು ಡಿಜೆಯ ಕಾರಿನ ಮೇಲೆ ನಿಂತಿದ್ದಾರೆ. ಬಳಿಕ ಅವರು ಮೈ ಹೂನ್ ಡಾನ್ ಹಾಡಿಗೆ ನೃತ್ಯ ಮಾಡುತ್ತಾರೆ. ಇದರಲ್ಲಿ ಕ್ರೀಂ ಮತ್ತು ಮರೂನ್ ಕಲರ್ ಶೇರ್ವಾನಿ ಧರಿಸಿ ಮೆರೂನ್ ಕಲರ್ ಪೇಟ ತೊಟ್ಟಿದ್ದಾರೆ.
ಪ್ರತೀಕ್ 2016ರಲ್ಲಿ ದೇಹದಾರ್ಢ್ಯವನ್ನು ಪ್ರಾರಂಭಿಸಿದರು. 28 ನೇ ವಯಸ್ಸಿನಲ್ಲಿ ಪ್ರತೀಕ್ ವಿಶ್ವದ ಅತ್ಯಂತ ಕಿರಿಯ ದೇಹದಾರ್ಢ್ಯಗಾರನಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
View this post on Instagram